ಇದೊಂದು ಕೈಲಾಸಂ ರವರ ಜೋಕು: ಒಬ್ಬ ಹುಡುಗ ಜಗುಲಿಯ ಮೇಲೆ ಕುಳಿತು ಅಳುತ್ತಾ ಇದ್ದ. ಶ್ಯಾನುಭೋಗರು ಅವನನ್ನು ನೋಡಿ “ಯಾಕೋ ಮಗು ಅಳುತ್ತಾ ಇದ್ದೀಯಾ?” ಕೇಳಿದರು. “ನಮ್ಮಪ್ಪ ಸುತ್ತಿಗೇಲಿ ಗೋಡೆಗೆ ಮಳೆ ಹೊಡೆಯುತ್ತಾ ಇದ್ದಾಗ ಗುರಿ ತಪ್ಪಿ ಸುತ್ತಿಗೆ ಏಟು ಕೈಗೆ ಬಿದ್ದು ನೋವಾಗಿದೆ.” ಎಂದು ಅಳುತ್ತಾ ಹೇಳಿದ ಹುಡುಗ, “ನಿಮ್ಮಪ್ಪ ಅವನ ಕೈಗೆ ಸುತ್ತಿಗೆಯಲ್ಲಿ ಹೊಡೆದು ಕೊಂಡರೆ ನೀನು ನಗುವುದನ್ನು ಬಿಟ್ಟು ಅಳುತ್ತಾ ಇದ್ದೀಯಲ್ಲಪ್ಪ?” “ಹಾಗೆ ನಕ್ಕಿದ್ದಕ್ಕೆ ಅಪ್ಪ ನನಗೆ ಹೊಡೆದ. ಅದಕ್ಕೇ ಅಳುತ್ತಿರುವುದು!” ಹುಡುಗ ಹೇಳಿದ.
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)