ಕನಸೊಂದ ಮುಂಜಾವದಲಿ ಕಂಡೆನೇನೆಂಬೆ
ನರವಟಿಗೆಯಿಂದ ಸದ್ದೊಂದಾದುದಿಂತು :
“ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ
ನಿಮ್ಮೊಡಲ ಜೀವರಸವಿಮರದೀಮುನ್ನ.”
*****