Home / Poem

Browsing Tag: Poem

ನೋವಿನ ಹೇಳಿಗೆ ಹೊತ್ತ ಭಾರಕ್ಕೆ ಬಾಗಿದೆ ಲೋಕದ ಬೆನ್ನು ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ ಕಂಗಾಲಾಗಿದೆ ಕಣ್ಣು ಕೊರಳನು ಬಿಗಿಯುವ ಕಣ್ಣಿಯ ಕಳಚಲು ಬರುವನು ಯಾರೋ ಧೀರ, ಎಂಬ ಮಾತನ್ನೆ ನಂಬಿ ಕಾಯುತಿದೆ ಜೀವಲೋಕಗಳ ತೀರ. ಯಾರ ಬೆರಳುಗಳು ಯಾವ ಕೊರಳಿ...

ಹಸಿವೆಗೆ ಬಲಕ್ಕೆ ಬಲವಿಲ್ಲ ಎಡಕ್ಕೆ ಎಡವಿಲ್ಲ ಮೊದಲಿಲ್ಲ ಕೊನೆಯೆಂಬುದಿಲ್ಲ. ಆದರೂ ಊರು ಉಸಾಬರಿಯ ಕೆಲಸ. ಯಜಮಾನಿಕೆಯ ಗತ್ತು. ರೊಟ್ಟಿಗೆ ತಿಳಿದಿಲ್ಲ ತನ್ನ ತಾಕತ್ತು....

ಎಲೆ ಹಸಿರು ಹೂವು ಮುಡಿದು ಆಳ ನಿರಾಳಕ್ಕಿಳಿದ ಬೇರುಗಳ ಹರವಿ ಹರಡಿ ಹಾಸಿ ಬೀಸಿದ ತಂಗಾಳಿ ಬಯಲ ಬಾನ ತುಂಬ ತೇಲಿ ತೇಲಿಸಿದೆ ಹಾಸು ನಿಂತಮರ. ಹನಿಸುತ್ತದೆ ವರ್ಷವೈಭವದ ಸೊಗಸು ನಲಿದು ಒಲಿದು ಬಂದ ದುಂಬಿ ಝೇಂಕಾರ ಗಂಧ ಸುಗಂಧ ಮೀರಿ ಮಂದಸ್ಮಿತ ಬೀರಿಗಿಳ...

ಬೇಸಿಗೆ ಬಿಸಿಲು, ನೆರಳಿನ ಆಸೆ ಉಸ್ಸೆಂದು ಕುಳಿತರೆ ದುತ್ತೆಂದು ಬರುತ್ತಾರೆ ಭಿಕ್ಷುಕರು ಕೊರಕಲು ಧ್ವನಿ ಕೂಗಿಗೆ ಎಂಟಾಣೆ ಕೊಟ್ಟರೆ – ರೂಪಾಯಿ ಕೊಡುವ ತಾಕತ್ತಿಲ್ಲದವರು ಕಬ್ಬನ್ ಪಾಕಿðಗೇಕೆ ಬರುವಿರಿ? ಎಂದಾಗ ೩೭ ಡಿಗ್ರಿ ಬಿಸಿಲೇ ಹಿತವಾಗಿ...

ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು ಎಷ್ಟ...

ಅಪ್ಪ, ನೆನಪಾಗಿದೆ ಈಗ ರಜೆಯ ಮಜಾ ಗೋತಾ ಮೂಲೆಯಲ್ಲೆಸೆದ ಪಾಟಿಚೀಲ ತಳಮಳ ಜೋತು ಬೀಳುವ ಹೆಗಲುಗಳ ನೆನೆದು ಸಮವಸ್ತ್ರ, ಬೂಟುಗಳ ಒಳಗೆ ಪೀಚಲು ಮತ್ತೆ ಅಪರೂಪಕ್ಕೆ ಟೊಣಪ ದೇಹದ ಸೈನಿಕರ ಕವಾಯತು ಮುಂಜಾನೆ ಇದೆಲ್ಲ ಬದಲಾಗಬೇಕು ಅದೊಂದೆ ಆಸೆ ಅಪ್ಪ ಎಲ್ಲ ಹ...

ಈಗೀಗ ಒಂದೇ ಯೋಚನೆನನ್ನೊಳಗೆ.ಬದಲಾದ ಸಂತೋಷಗಳಲ್ಲಿಬದಲಾದ ನೋವುಗಳಲ್ಲಿನಾನು ಬದಲಾಗಿದ್ದೇನೆಯೆ? ನನ್ನ ಪ್ರೀತಿಯ ಬಗ್ಗೆಯೆಗಾಢ ಅನುಮಾನನಿನ್ನ ಕಣ್ಣೊಳಗಿನ ದುಃಖಗೆಲ್ಲಲಾಗಿಲ್ಲ ಯಾಕೆ? ಬಣ್ಣದ ಹಾಗೆಬೆಳಕಿನ ಹಾಗೆನುಣುಚಿ ಹೋಗುತ್ತಿದ್ದೀಯೆಯಾಕೆ? ಯಾಕೆ?...

ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ ನುಣುಪಾಗಿರುತ್ತದೆ ಸುಳ್ಳು ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು *****...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...