ಯಾಕೆ?

ಈಗೀಗ ಒಂದೇ ಯೋಚನೆ
ನನ್ನೊಳಗೆ.
ಬದಲಾದ ಸಂತೋಷಗಳಲ್ಲಿ
ಬದಲಾದ ನೋವುಗಳಲ್ಲಿ
ನಾನು ಬದಲಾಗಿದ್ದೇನೆಯೆ?

ನನ್ನ ಪ್ರೀತಿಯ ಬಗ್ಗೆಯೆ
ಗಾಢ ಅನುಮಾನ
ನಿನ್ನ ಕಣ್ಣೊಳಗಿನ ದುಃಖ
ಗೆಲ್ಲಲಾಗಿಲ್ಲ ಯಾಕೆ?

ಬಣ್ಣದ ಹಾಗೆ
ಬೆಳಕಿನ ಹಾಗೆ
ನುಣುಚಿ ಹೋಗುತ್ತಿದ್ದೀಯೆ
ಯಾಕೆ? ಯಾಕೆ?

ನೀನು ಕೇವಲ
ಹಸಿ-ಬಿಸಿ ರಕ್ತಮಾಂಸದ
ಮುದ್ದೆಯಾಗಿದ್ದಿದ್ದರೆ
ಎಂದೋ ಹೋಗುತ್ತಿದ್ದೆ
ಹಿಂದಿರುಗಿ ನೋಡದೆ

ಆದರೆ ನೀನು
ಪರಿಮಳಿಸುವ ಗಾಳಿಯಾಗಿ
ಇರುವೆ, ಮೊರೆಯುತ್ತಿರುವೆ
ನನ್ನೊಳಗೆ.

ಕೊನೆಗೆ-
ನೀನು ಪ್ರೀತಿಯ ದಂಡೆಯಾಗಿದ್ದರೆ
ನಾನು ನಡೆದು ಬರುತ್ತಿದ್ದೆ
ಆದರದು ಮಹಾಪೂರ
ಕಾಲಡಿಯ ಮಣ್ಣು ಕುಸಿಯುತ್ತಿದೆ
ಕೊಚ್ಚಿ ಹೋಗುತ್ತಿದ್ದೇನೆ.

*****

Previous post ಸತ್ಯ
Next post ಬದಲಾಗಿದೆ ಕಾಲ

ಸಣ್ಣ ಕತೆ

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…