ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು
ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ
ನುಣುಪಾಗಿರುತ್ತದೆ ಸುಳ್ಳು
ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ
ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು
*****