ಓ ಓ ತಾಯೆ ಭೋಭೋ ಮಾಯೆ!
ಬಾಬಾ ತಾತಾ ತಾರೆಗಳಾ||

ಸಕ್ಕರೆ ಹಾಲಿನ ಅಕ್ಕರೆ ಅವ್ವಾ
ಹಸಿದೆನು ಬಿಸಿಲಲಿ ಬಾರಮ್ಮಾ
ಕೆನೆಮೊಸರಾಲಿನ ಜುಂಜುಂ ಜೋತಿಯ
ತುಂತುಂ ತೂಗುತ ಹಾಡವ್ವಾ

ಹಸಿರಿನ ಹೂವಿನ ಹಕ್ಕಿಯ ಹಾಡಿನ
ಹಣ್ಣಿನ ಗೊಂಚಲ ಚೆಲುವವ್ವಾ
ಮುಗಿಲಿನ ತೇರಿನ ನೀಲಿಮೆ ಏರಿನ
ಬಣ್ಣದ ಗಲ್ಲದ ನನ್ನವ್ವಾ

ತಾತಾ ತಾಯೆ ಬಾಬಾ ಆಯೆ
ಮಣ್ಣಿನ ಮಗುವನ್ನು ಎತ್ತವ್ವಾ
ನೀ ನೀ ತಾಯೆ ಜೇನಿನ ದಾಯೆ
ಮಿಂಚಿನ ತೋಟವ ತೋರವ್ವಾ
*****