ಬೇಸಿಗೆ ಬಿಸಿಲು, ನೆರಳಿನ ಆಸೆ
ಉಸ್ಸೆಂದು ಕುಳಿತರೆ
ದುತ್ತೆಂದು ಬರುತ್ತಾರೆ ಭಿಕ್ಷುಕರು
ಕೊರಕಲು ಧ್ವನಿ ಕೂಗಿಗೆ
ಎಂಟಾಣೆ ಕೊಟ್ಟರೆ –
ರೂಪಾಯಿ ಕೊಡುವ ತಾಕತ್ತಿಲ್ಲದವರು
ಕಬ್ಬನ್ ಪಾಕಿðಗೇಕೆ ಬರುವಿರಿ? ಎಂದಾಗ
೩೭ ಡಿಗ್ರಿ ಬಿಸಿಲೇ ಹಿತವಾಗಿ
ಕಾಡಿತ್ತು ಮನಸಿನೊಳಗೆ.
*****