ಅಂಥ ಮಾಂತ್ರಿಕ ಹೆಸರಿದ್ದ ಮೇಲೆ
ಅದು ಬರೇ ಗಾಡಿಯಲ್ಲ ಸಾರೋಟು
ಸಾಗುವುದು ಅಪರಿಚಿತ ಸ್ಥಳಗಳಿಗೆ
ಆ ಅಕ್ಷರಗಳೇ ಹಾಗೆ
ಒಂದನ್ನೊಂದು ಬಳಸುತ್ತ ಬೆಳೆಯುತ್ತ
ಮುಗಿಲ ಕಡೆ ಕೈಚಾಚುತ್ತ
ಹೇಳಿ ಮುಗಿಸುವ ಹೊತ್ತಿಗೆ
ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು
ಎಷ್ಟು ಹುಲ್ಲುಗಾವಲಿನಲ್ಲಿ
ಎಷ್ಟೊಂದು ಕುರಿಗಳು!

ಮೂಲೆಗೊರಗಿ ಕುಳಿತಿರುವ ಸಹಪ್ರವಾಸಿನಿಗೆ
ಆರೆ ನಿದ್ದೆ-ಅರೆ ಎಚ್ಚರ
ಗಾಲಿಗಳು ಹರಿಯುವ ಲಯಕ್ಕೆ
ತುಸುವೆ ಏರಿಳಿಯುವ ಎದೆ
ಮುಂಗೈಯ ಮೇಲೆ ಮುಂಗೈ-ಆಹಾ !
ಆ ಬೆಟ್ಟಗಳ ಕನಸಿಗೇ
ಹೀಗೆ ಬಸವಳಿದರೆ ಹೇಗೆ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)