
ನೋಡು- ಕಣ್ಣು ತುಟಿ ಮೂಗು ಕೈಯಿ ಮೈಯಿ ಏನಿಲ್ಲದಿದ್ದರೂ ಇದ್ದ ಹಾಗೆಯೇ ಕಾಣಿಸುವ ಚಂದ್ರನನ್ನು ಕಡೆಯ ಬಾರಿ ಎಂಬಂತೆ ನೋಡಿ ಬಿಡು. ಬೆಂಕಿಯನ್ನು ಬೆಳಕನ್ನು ಬಣ್ಣವನ್ನು ಬೆಡಗನ್ನು ತುಂಬಿಕೊಂಡಿರುವ, ನಿನ್ನೊಳಗೆ ಬೆರಗನ್ನು ಭಯವನ್ನು ಹುಟ್ಟಿಸಿದ ಆಕಾಶ...
ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು ಕಟ್ಟಿಹಾಕಲು ನುಣುಪ...
ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ ಮಿಂಚು ಹುಳಗಳು ಹಾರಿ ಮಿನುಗು ತಾರೆಯ ಗುನುಗು ರಾಗದಿ ಚಳಿ...
ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ....
ಆಕಾಶ ಭೂಮಿ ಮಹದ್ ಕಾವ್ಯ ಮರವೃಕ್ಷ ಸಕಲ ವೇದ ಗಿಡಬಳ್ಳಿ ಸರಳ ರಗಳೆ ಪೊದೆಕಳ್ಳಿ ಕಥೆ ಕಾದಂಬರಿ ನದಿನಾಲೆ ಪ್ರವಾಸ ಕಥನ ಸರೋವರ ಚಿಲುಮೆ ಭಾವಗೀತೆ ಸಾಗರ ಗ್ರಂಥಾಲಯ ಆಗರ ಯುಗಯುಗಕು ಮುಫ್ತಲಿ ಸಿಗುವ ಪಠ್ಯ ಪುಸ್ತಕಗಳಿವು ನಿಂತು ಓದು ಬಾ ಮಾನವ ಕುರುಡ ಬ...
ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ – ಡಾಕ್ಟರ್ ಇಂಜಿನೀಯರ ಆಫೀಸರ್ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ...













