ಬಹಿರಂಗದಲಿ ರೊಟ್ಟಿ
ಹಸಿವಿನ ಸಮಾನ ಸಂಗಾತಿ.
ಅಂತರಾಳದಲಿ
ಅಂತರಗಳ ವಿಜೃಂಭಣೆ.
ಹಸಿವಿನ ಮೇಲರಿಮೆಯಲಿ
ರೊಟ್ಟಿಯ ಹೆಡ್ಡತನಗಳು
ಢಾಳಾಗಿ ಗೋಚರಿಸಿ
ಕೀಳರಿಮೆಯಲಿ ನರಳಿಕೆ.
ಮನಸುಗಳ ದೂರ ವಿಸ್ತಾರ.

*****