ಕಾಳ ರಾತ್ರಿಯ ಚೋಳ ಭಯದಲಿ
ಆತ್ಮ ಹಾವನು ತುಳಿದಿದೆ ||ಪ||

ರಾತ್ರಿ ಜಾರದೆ ಪಾತ್ರ ತೀರದೆ
ಸೂರ್ಯದೇವನು ಏಳನೆ
ಯುಗದ ಗಂಟೆಯ ಜಗದ ಗಂಟೆಯ
ಒಮ್ಮೆ ಬಾರಿಸಿ ಕರೆಯನೆ

ಹಗಲು ಕರಗಿದೆ ಇರುಳ ಮೌನದಿ
ಮಿಂಚು ಹುಳಗಳು ಹಾರಿ
ಮಿನುಗು ತಾರೆಯ ಗುನುಗು ರಾಗದಿ
ಚಳಿಯು ಜುಳು ಜುಳು ಜಿನುಗಿದೆ

ಭಜನಿ ಜೈಜೈ ರಜನಿ ಹೈಹೈ
ಭಜನಿ ಸಾಗಿದೆ ಜಂಜಣಾ
ತಾಳ ಥೈಥ್ಯ ಪಾದ ಪೈಪೈ
ಭಜನಿ ತುಂಬಿದ ಅಂಗಣಾ
*****