ಸತ್ತ ನೆನ್ನೆ ಮೊನ್ನೆಗಳು
ಎತ್ತೆತ್ತ ಹೋದವೋ ಕಣ್ಣಿ* ಕಿತ್ತು
ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ
ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು
ಇನ್ನೊಂದು ನಾಳೆ
ಬದುಕ ಪುಸ್ತಕದ ಮತ್ತೊಂದು ಹಾಳೆ
*****
*ಕಣ್ಣಿ: ಸಣ್ಣ ಕರುಗಳನ್ನು ಕಟ್ಟಿಹಾಕಲು ನುಣುಪಾಗಿ ಹೊಸೆದ ಹಗ್ಗ

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)