ಪ್ಯಾಂಟು ಶರ್ಟು ತೊಟ್ಟು
ಬಾಯ್‌ಕಟ್ ಮಾಡಿಕೊಂಡು
ಹೊಂಡಾ ಓಡಿಸುವ ಹುಡುಗಿ –
ಡಾಕ್ಟರ್‍ ಇಂಜಿನೀಯರ ಆಫೀಸರ್‍
ಬಿಸಿನೆಸ್‌ಮ್ಯಾನ್ ಎನ್ನುತ್ತಾ
ಕಾರು ಓಡಿಸುವ ಹುಡುಗಿ
ತಿಂಗಳು ಕೊನೆಗೆ ಬಚ್ಚಲಲ್ಲಿ
ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ.
ಕನ್ನಡಿಯ ಮುಂದೆ ಕನಸು ಕಾಣುತ್ತ
ಮೃದು ಹೂವಾಗಿರುತ್ತಾಳೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)