
ಹಿತ್ತಲಿಂದ ಬರುತಲೊಮ್ಮೆ ಬೆಚ್ಚಿ ಬಿದ್ದೆನು ದೂರದಲ್ಲಿ ಕಪ್ಪು ಕಪ್ಪು ಏನೋ ಕಂಡೆನು ತಲೆಯ ಮೇಲೆ ಕೋಡು ಕೋರೆಗಳಿವೆ ಜೋಡು ವಿಕಾರವಾದ ಮುಖ ಉದ್ದುದ್ದನೆಯ ನಖ ಮಾರಿಗೊಂದು ಹೆಜ್ಜೆ ತಿನುವ ಮಾಂಸ ಮಜ್ಜೆ ಝಲ್ಲೆಂದಿತು ಎದೆಯು ಬಿರಿಯ ಬಾರ್ದೆ ಭುವಿಯು ಆನ...
ಏನೇ ಇರಲಿ ಏನೇ ಬರಲಿ ಕನ್ನಡ ನನ್ನುಸಿರಾಗಿರಲಿ ವಿಶ್ವದ ಯಾವುದೆ ನೆಲದಲ್ಲಿರಲಿ ಎದೆಯಲಿ ಕನ್ನಡ ಬೆಳಗಿರಲಿ ಕಣ್‌ಕುರುಡಾಗಲಿ ಬೆಳಕಿರುಳಾಗಲಿ ಕನ್ನಡ ಕಣ್ಣಲಿ ತುಂಬಿರುವ ಕಂಬನಿ ಸುರಿಯಲಿ ರಕುತವೆ ಹರಿಯಲಿ ಹೃದಯವು ಕನ್ನಡ ಎನುತಿರಲಿ ಬುವಿಯೇ ನಡುಗಲಿ ...
ಮೂಲ: ಆರ್ ಕೆ ನಾರಾಯಣ್ ಸಂಗೀತ ಕಚೇರಿ ಆಗತಾನೆ ಮುಗಿದಿತ್ತು. ನಾವು ಮನೆಗೆ ಹಿಂದಿರುಗುತ್ತಿದ್ದೆವು. ಸಂಗೀತ ಬಹಳ ಇಂಪಾಗಿತ್ತು. ನಮ್ಮ ಗುಂಪಿನಲ್ಲಿ ಹರಟೆ ಹರಿಯಪ್ಪನೂ ಇದ್ದನೆಂಬುದು ಕಾಣಿಸುವವರೆಗೂ ನನಗೆ ಅದೇ ಭಾವನೆ ಇತ್ತು. ಪಾತಾಳಲೋಕದ ಚಿತ್ರಹಿ...
ಭವ್ಯ ಭಾರತೀಯ ತನುಜಾತೆ ಮಣಿರತ್ನ ಪುತ್ಥಳಿ ನೀ ಗುಣಮಾನ ಸಜ್ಜನೈಕ ಚೂಡಾಮಣಿಯಾಗಿ ನಿಂದವಳು ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ ತ್ಯಾಗ ಭಾವ ಚಿತ್ತಗಂಗೆ ಎನಿಸಿ ಕಲ್ಪಲತೆ ವೀರ ಮಾತೆ ತಪೋವಿರಾಜಿತೆ ಜಿನಧರ್ಮಪರಾಯಕೆ ಉದಾರ ಚುತುರ್ವಿಧ ದಾನ ಗೌರವ ಸಂಜಾತ...
ಮೂಲ: ಟಿ ಎಸ್ ಎಲಿಯಟ್ ಇಲ್ಲಿಂದ ಮರ್ತ್ಯಲೋಕಕ್ಕೆ ಎಂದೂ ಮರಳದವನಿಗೆ ನಾನು ಉತ್ತರಿಸುತ್ತಿದ್ದೇನೆ ಎಂದು ಯೋಚಿಸಿದ್ದರೆ ಈ ಜ್ವಾಲೆ ನಿಶ್ಚಲವಾಗಿ ನಿಲ್ಲುತ್ತಿತ್ತು. ಆದರೆ ಈ ಕೂಪದಿಂದ ಎಂದೂ ಯಾರೂ ಜೀವಂತವಾಗಿ ಹಿಂತಿರುಗಿಲ್ಲ ಎಂದು ಕೇಳಿದ್ದೇನೆ. ಇದ...
ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು. ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆ...
“ಪದ್ಯವನ್ನು ಬರೆವ ಚಟ ಹೆಚ್ಚಾಯ್ತು, ದುಃಸಾಧ್ಯ, ದೈವವಶವೀ ಕವಿತೆ. ‘ಉದ್ಯಮ’ವ ಗೈಯ್ಯುವರು ಎಲ್ಲ ಮೊದ್ದರು ಇದನು; ತಿಣಿತಿಣಿಕಿ ಬರೆಯುವರು. ಇದರಿಂದ ನಮಗೆ ತಗಲುವ ಹಾನಿಯನವದ್ಯ. ಕಿತ್ತು ಹಾಕಿರಿ ಕವಿಯ; ಕಾವ್ಯಧೇನುವು ವಧ್ಯ. ಗದ್ಯವನ್ನು ಬ...
ಹೂವಾಗು ಹೊಳೆಯಾಗು ಹಾರು ಹಕ್ಕಿಯು ಅಗು ಗುರುಲಿಂಗ ಜಂಗಮವ ಸಾರಿಹೇಳು ನೋಡು ಓಡುವ ಮೋಡ ಕೂಡು ಕುಣಿಯುವ ಕಡಲು ಶಿವತತ್ತ್ವ ಸಿದ್ಧಾಂತ ಚೆಲುವ ನೋಡ ಯಾಕೆ ಧರ್‍ಮದ ಗುಲ್ಲು ಸಾಕೆ ಶಾಸ್ತ್ರದ ಗಲ್ಲು ಶರಣ ಧರ್‍ಮದ ಶಿಖರ ಏರಿಬಾರಾ ಪಾರಿವಾಳದ ತೆರದಿ ಕಡಲ ...
ಪದವಿ ನೋಡ್ಕೊಂಡ್ ದೊಡ್ಡೋನ್ ಅನ್ನೋದ್ ಲೋಕಕ್ ಒಂದ್ ಆಳ್ ರೋಗ! ಇದನ ಕಾಣ್ಬೌದ್ ಎಲ್ಲಾ ರೂನೆ ಇಸ್ನೂನ್ ಒಗಳೋದ್ರಾಗ! ೧ ಏನ್ ಯಿಸ್ನೂ ನೋ! ಬೆಪ್ಪಂಗ್ ಬಿದ್ದೌನ್ ಆಲಿನ್ ಸೌಂದ್ರದ್ ಮದ್ದ! ಆಲ್ನಲ್ ಬೆಳ್ಳಾಕ್ ಚೀಪ್ತಾನಿರಾಕ್ ಅಸ್ಮಗೂನ ಸುದ್ದ? ೨ ಬುಳ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
















