
ಹರಿದಿದೆ ನೋಡಿ ಕನ್ನಡ ರಥವು ಅಮೇರಿಕಾ ಕಡೆಗೆ ಕಾಣದಾಗಿವೆ ಕಪ್ಪು ದೇಶಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು ಅಮರ! ಹೃದಯವು ಕನ್ನಡ ಮನಸು ಸಂಸ್ಕ ತ ನಾವು ಕಲಿತ ...
ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮೆ ಸಾ೦ದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರ...
ಮೂಲ: ಟಿ ಎಸ್ ಎಲಿಯಟ್ ೧ ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ. ಆರು ಗಂಟೆ. ಹೊಗೆವ ಹಗಲುಗಳ ಉರಿದುಳಿದ ತುಂಡುಗಳು, ಗಾಳಿ ಮಳೆ ಇರಚಲು : ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ...
ದೊರೆಗಳಾಗಿದ್ದ ಚಾಮರಾಜ ಒಡೆಯರವರು ಬಹಳ ಭಕ್ತರಾಗಿದ್ದರು. ಮನೆ ದೇವತೆಯಾದ ಚಾಮುಂಡೇಶ್ವರಿಯಲ್ಲಂತೂ ಅವರಿಗೆ ಅತಿಶಯವಾದ ಭಕ್ತಿಯಿತ್ತು. ಪಟ್ಟವನ್ನೇರಿದ ಮೇಲೆ ಒಡೆಯರು ಒಂದು ಅಮಾವಾಸ್ಯೆಯ ರಾತ್ರಿ ಅಮ್ಮನವರ ಪೂಜೆಗೆಂದು ಪರಿವಾರದೊಡನೆ ಮಡಿಯುಟ್ಟು ಬೆ...
ನೀವೆ ಟ್ರೇ. ಕಾ. ಏನು? ಅಲ್ಲಗಳೆಯುವಿರೇಕೆ? ಆ ಹೆಡಿಗೆ ಪಾವುಡವೆ ಹೇಳುವದು. ಅದು ಕುರ್‍ಚೆ- ಇತ್ತ ಬನ್ನಿರಿ ಹಸೆಯ ಮೇಲಿಂತು. ಊಂ? ಚರ್‍ಚೆ? ಆಧುನಿಕ ಕವಿತೆಯನು ಕುರಿತೊ? ಮೋರೆಯ ಮೇಕೆ- ಕಳೆಯ ಕಳೆಯಿರಿ ಮೊದಲು! ಸಾಲೆ ಹುಡುಗರ ಕೇಕೆ- ಯೆನ್ನುವಿರ ಈ...
ಮುಗಿಲ ಗಂಟೆಯು ನಿನಗೆ ಸೂರ್‍ಯ ದೀಪವು ನಿನಗೆ ವಿಶ್ವ ಪತ್ರಿಯು ನಿನಗೆ ರೇಣುಕಾರ್‍ಯಾ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೇಂದ್ರ ಕಡಲು ನಿನ್ನಯ ತೀರ್‍ಥ ರೇಣುಕಾರ್‍ಯಾ ತಂಪು ನಿನ್ನಯ ಶಕ್ತಿ ಸೊಂಪು ನಿನ್ನಯ ಯುಕ್ತಿ ವಿಶ್ವಲಿಂಗನೆ ನೀನು ರೇಣುಕಾರ್‍ಯಾ...
ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿ...
ಮುಚ್ ನಿನ್ನ್ ಬಾಯಿ! ಏ ಬೇವಾರ್‍ಸಿ! ಬಗವಂತ್ನ್ ಎಸರು ನಮಗೆ ತಾರ್‍ಸಿ! ಇಲ್ದಿದ್ನೆಲ್ಲ ವುಟ್ಟೀಸ್ಕೊಂಡಿ ಏಕ್ ಸುಂಕ ಕೂಗ್ತಿ ಕಾಲಿ? ನಮಗೆ ದೇವು, ಯೆಂಗೌನೇಂದ್ರೆ ಮುತ್ತೈದೇಗೆ ತಾಲಿ! ೧ ದೇವ್ರ್ ಇಲ್ಲಾಂತ ಯೋಳ್ದ್ರೆ ನೀನು ದೇವ್ರ್ ಔನೇಂತ ಯೋಳ್ತೀನ...
ನಗುವಿರಲಿ ಅಳುತಿರಲಿ ಎರಡನ್ನು ನಂಬೆ. ನಗೆ ನಂಜು ಅಳು ಮಂಜು ಇದೀತು ಎಂಬೆ. ಮಾತಿರಲಿ ಇರದಿರಲಿ ಎರಡು ಸಮ ತಾನು. ಇದು ಮರುಳು ಅದು ಹುರುಳು ಇರಲಾರದೇನು? ಹೊರಗೊಂದು ಒಳಗೊಂದು ಲಕ್ಷಣವು ಸಾಕು. ಹಾಗೇನು? ಹೀಗೇನು? ಲಕ್ಷ್ಯವೇ ಬೇಕು. *****...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
















