
ನರರ ಬಿಡೆನು, ಸುರರ ಹಾಡೆನು. ಕರಣಂಗಳ ಹರಿಯಬಿಡೆನು. ಕಾಮನ ಬಲಿಗೆ ಸಿಲ್ಕೆನು. ಮರವೆಗೊಳಗಾಗೆನು. ಪ್ರಣವ ಪಂಚಾಕ್ಷರಿಯನೆ ಜಪಿಸಿಹೆನೆಂದು ತನುವ ಮರೆದು ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್...
ನನ್ನ ನಂಬು ಮೋನಾಲಿಸಾ ನಾನು ಹಗಲು ಗಳ್ಳನೂ ಆಲ್ಲ ತಲೆಹಿಡುಕನೂ ಅಲ್ಲ ಪೊಳ್ಳು ಭ್ರಮೆ ಎಂದರೂ ಅನ್ನಲಿ ಈ ಜನ ಈ ನ್ಯಾಯಾಲಯ ನೀನು ನನ್ನವಳೇ. ಮರೆಯಲಾದೀತೆ ನಾನೂರು ವರ್ಷಗಳ ಹಿಂದಿನ ನಮ್ಮ ಸಂಸಾರ? ಹೇಗೆ ಹೇಳಲಿ ಇವರಿಗೆ ಸಧೃಢ ದೇಹ ಮುಗುಳ್ನಗೆ ಹೊಳಪು ...
ಆಗಸದ ಸಿಡಿಲಂತೆ ಸಿಡಿಯುತಿದೆ – ನನ್ನಾತ್ಮ ಸಾಗರದ ಒಡಲಂತೆ ಮಿಡಿಯುತಿದೆ – ಒಲವಾತ್ಮ ಗಾಳಿಯಾ ಮಡಿಲಂತೆ ನಗುತಲಿದೆ – ನಿನ್ನಾತ್ಮ! *****...
ಪ್ರಿಯ ಸಖಿ, ಕೆಲವರಿಗೆ ಅನ್ಯರ ಖಾಸಗಿ ಬದುಕಿನ ಒಳ-ಹೊರಗನ್ನು ಕೆದಕುವುದೆಂದರೆ ಬಹುಪ್ರಿಯ. ತಮ್ಮ ಬದುಕಿನ ಬಟ್ಟೆ ಚಿಂದಿಚಿಂದಿಯಾಗಿದ್ದರೂ ಅನ್ಯರ ಬದುಕಿನ ಬಟ್ಟೆಯ ಸಣ್ಣ ತೂತಿನಲ್ಲಿ ಕೈಯಾಡಿಸುವುದು. ಅದನ್ನು ಮತ್ತಷ್ಟು ಹರಿಯುವುದು ಇಂತಹಾ ಕೀಳು ಅ...
ಪುಟಾಣಿ ಇರುವೆಗೆ ನಾನು ಹ್ಯಾಗೆ ಕಾಣ್ತಾ ಇರಬೋದು? ನಮ್ ಕಾಲ್ಬೆರಳೇ ಅದಕ್ಕೆ ಭಾರೀ ಬಂಡೆ ಇರಬೋದು! ಆದ್ರೂ ಅದು ಹೇಗೋ ಮಾಡಿ ಹತ್ತೇ ಬಿಡುತ್ತೆ! ಅಟ್ಲು ಮೇಲಿನ್ ಡಬ್ಬದೊಳಕ್ಕೂ ಇಳಿದೇ ಬಿಡುತ್ತೆ! ನೋಡೋಕ್ ಇರುವೆ ಪುಟ್ಟಕ್ಕಿದ್ರೂ ಕಷ್ಟಕ್ಕ್ ಹೆದರಲ್...
-೧- ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು; ಬಿಸಿಲು ಉರಿಯುತ್ತಲೇ, ಉರಿಯುತ್ತಲೇ ಇತ್ತು ; ಗುಡುಗಿ ಬಾನ್ ಮಿಂಚುರಿದು ಮಳೆ ಬೀಳುವಂತಿತ್ತು ; ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು. ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು ; ಗಾಳಿ ಬೀಸುತ್...
ಸ್ವಪ್ನರಾಜ್ಯದ ಭಾವದೋಜೆಯ ನಡುವೆ ನಡೆದೆನು ತೆಪ್ಪಗೆ, ಮನೋಭೂಮಿಯನುತ್ತು ಅಗಿಯಿತು ತೇಜಪೂರಿತ ಘಟನೆಯು! ಮೆತ್ತಗಾಸಿದ ತಲ್ಪತಳವೇ ನನ್ನ ಯಾತ್ರೆಯ ಭೂಮಿಯು!! ಮೇಲೆ ಭಾನುವು ಬಿಳಿಯ ಮುಗಿಲು ಕೆಳಗೆ ಕೊರಕಲು ದಾರಿಯು; ಹಾದು ನಡೆದೆನು ಏಳುಬೀಳುತ ಏರಿದೆ...
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮನ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂಬರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ...
ಕನಸು ಕಾಣದ, ನಾಚಿ ತುಟಿ ಕಚ್ಚಿಕೊಳ್ಳವ ಹಸಿರಕ್ತದ ಬಿಸಿಮಾಂಸದ ಬೆಡಗಿಯೆರು ನಿಲ್ಲುತ್ತಾರೆ ಆರೆಬೆತ್ತಲಾಗಿ ನಗುತ್ತಾರೆ ಮುದಿಗಳೂ ಹೊರಳಿ ನೋಡುವಂತೆ ಹದ್ದುಗಳು ಎರಗುತ್ತವೆ ಮುಗಿಬೀಳುತ್ತವೆ ಕಾಮದ ಹಸಿವಿಗಾಗಿ ದೂರದ ಆಫ್ರಿಕ ಏಷಿಯಾದ ಮುಸುರೆ ತೊಟ್ಟ...
ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು ಸರಿಯಲ್ಲ -ಕವಿಯು ನಾನಲ್ಲ- ಇದು ನಿನ್ನ ನೂರಾರು ಛಾಯೆಗಳ ಒರೆ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













