ಮನದ ತುಂಬೆಲ್ಲಾ ಬಿರುಕುಗಳೇ
ಬಿಟ್ಟಿರುವಾಗ
ಎಷ್ಟೂಂತಾ ತ್ಯಾಪಿಹಚ್ಚಿ
ಸವರಲಿಕ್ಕಾದೀತು?
ತುಣುಕು ತುಣುಕು ಹಳೆಬಟ್ಟೆಗಳ
ತ್ಯಾಪಿಹಚ್ಚಿದ ಹೊದಿಕೆ
ಕೌದಿಯೇ ಹೊರತು
ರಗ್ಗ ಅಲ್ಲಾ!
ಬಿರುಕು ಮನಸು
ಬಿರುಕು ಕಟ್ಟಡ
ಬೀಳೋದಕ್ಕೆ ಮೊದಲೇ
‘ಆರ್ಕಿಟೆಕ್ಟ್’ ಹುಷಾರಾಗಿದ್ದು
ಕಾಂಟ್ರಾಕ್ಟ ತೆಗದುಕೊಳ್ಳಬೇಕು.
*****