Home / ಲೇಖನ / ಇತರೆ / ಮಾನವ ನೀನೆಷ್ಟು ಕ್ರೂರಿ ?

ಮಾನವ ನೀನೆಷ್ಟು ಕ್ರೂರಿ ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಕೆಲವೊಂದು ಸನ್ನಿವೇಶಗಳನ್ನು, ದೃಶ್ಯಗಳನ್ನು ನಾವು ಕಣ್ಣಾರೆ ನೋಡದಿದ್ದರೂ ನಮ್ಮ ಮನಸ್ಸು ಅದನ್ನು ಕಲ್ಪಿಸಿಕೊಂಡು ಅತಿಸೂಕ್ಷ್ಮವಾಗಿ ಚಿತ್ರಿಸಿಕೊಂಡಿರುತ್ತದೆ. ಆ ಚಿತ್ರ ನಮ್ಮ ಮನಃಪಟಲವಲ್ಲಿ ಅಚ್ಚೊತ್ತಿ ಸದಾ ಕಾಡುತ್ತಿರುತ್ತವೆ. ಆ ಕೆಲಚಿತ್ರಗಳು….  ಭಾರತೀಯ ಯೋಧರ ಒಂದೊಂದು ಅಂಗಗಳನ್ನೂ ಬೇರ್ಪಡಿಸಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ಬಾಂಗ್ಲಾದೇಶ ರೈಫಲ್ಸ್ ಪಡೆಯವರು, ತಮ್ಮ ಕೈಗೆ ಸಿಕ್ಕ ಯುದ್ಧ ಕೈದಿಗಳನ್ನು ನಾನಾ ವಿಧದ ಹಿಂಸೆ ನೀಡಿ ಬದುಕಲಾರದಂತೆ, ಸಾಯಲಾರದಂತೆ ಗೋಳುಗುಟ್ಟಿಸುತ್ತಿರುವ ನೆರೆದೇಶದವರು, ಆಗಷ್ಟೇ ಹುಟ್ಟಿ, ಕಣ್ಣು ಬಿಡುತ್ತಿರುವ ಹೆಣ್ಣು ಕೂಸಿನ ಬಾಯಲ್ಲಿ ಭತ್ತ ತುಂಬಿ ಕ್ರೂರವಾಗಿ ಕೊಲ್ಲುವವರು.

ವರದಕ್ಷಿಣೆ ತರಲಿಲ್ಲವೆಂದು ಹೆಣ್ಣಿಗೆ ವಿವಿಧ ಹಿಂಸೆ ನೀಡುತ್ತಾ ಹೀನ ಸಂತೋಷವನ್ನನುಭವಿಸುವವರು, ಕ್ಷುಲ್ಲಕ ಕಾರಣಕ್ಕೆ ರಕ್ತ ಬಸಿದು ಕೊಲೆ ಮಾಡುವವರು, ಕಾಲುಬಾಯಿ ರೋಗಕ್ಕೆ ತುತ್ತಾದ ಸಾವಿರಾರು ಹಸುಗಳ ಮಾಂಸ ಉಪಯೋಗಕ್ಕೆ ಬರುವುದಿಲ್ಲವೆಂದು ಅವುಗಳನ್ನೆಲ್ಲಾ ಒಟ್ಟಾಗಿ ಅಗ್ನಿಗಾಹುತಿ ನೀಡುತ್ತಿರುವ ವಿದೇಶಿಯರು, ದೇವರು ಒಲಿಯುವನೆಂಬ ಮೂಢನಂಬಿಕೆಗೆ ಬಲಿಯಾಗಿ ಕುರಿ, ಕೋಳಿ, ಕೋಣನ ಬಲಿ ನೀಡುತ್ತಿರುವ ಭಕ್ತರು, ತನ್ನ ಜಿಹ್ವಾಚಾಪಲ್ಯಕ್ಕಾಗಿ ಅನುದಿನವೂ ಸಾವಿರಾರು ಪ್ರಾಣಿ ಬಲಿ ನಡೆಸುತ್ತಿರುವವರು…. ಒಂದೇ, ಎರಡೇ ! ಮಾನವನ ಕ್ರೂರ ಮನದ ಈ ಚಿತ್ರಗಳು ನೂರು ಕರಾಳ ಕಥೆ ಹೇಳಬಲ್ಲವು.

ಮಾನವ ಜನ್ಮ ದೊಡ್ಡದು. ಅತ್ಯಂತ ಶ್ರೇಷ್ಠವಾದುದೆಂದು ಮಾನವನ ನಂಬುಗೆ. ಆದರೆ ಇಂತಹಾ ಘೋರಗಳನ್ನೆಸಗುತ್ತಿರುವುದೂ ಮಾನವ ಮಾತ್ರ! ಪ್ರಾಣಿಗಳು ತಮ್ಮ ಹಸಿವಿಂಗಿಸಿಕೊಳ್ಳಲಷ್ಟೇ ಬೇರೆ ಪ್ರಾಣಿಗಳನ್ನು ಬೇಟೆಯಾಡುತ್ತವೆ ಕೊಲ್ಲುತ್ತವೆ. ಆದರೆ ಈ ನರಮನುಷ್ಯ ನಾಗರೀಕತೆ ಬೆಳೆದಂತೆಲ್ಲ ಸಭ್ಯನಾಗದೇ ಸಭ್ಯತೆಯ ಮುಸುಕಿನೊಳಗೆ ಇಂಥಹಾ ಹೀನ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾನೆ. ಮಾನವನ ರಾಕ್ಷಸತ್ವದ ಈ ಮುಖಗಳನ್ನು ಕಂಡಾಗ ಎದೆ ನಡುಗುತ್ತದೆ. ಮನುಕುಲಕ್ಕೆ ಉತ್ತಮ ಭವಿಷ್ಯವಿದೆಯೇ ಎಂದು ಚಿಂತಿಸುತ್ತದೆ.

ತಲ್ಲಣಿಸುವ ಮನ ಗದ್ಗದಿಸುತ್ತಾ ‘ಓ ಮಾನವ ನೀನೆಷ್ಟು ಕ್ರೂರಿ ನಿನ್ನ ಅಹಂಕಾರಕ್ಕಾಗಿ, ಸ್ವಾರ್ಥ ಹಿತಕ್ಕಾಗಿ, ನಿನ್ನ ಪ್ರತಿಷ್ಠೆ ಮೇಲರಿಮೆಗಾಗಿ ಶ್ರೇಷ್ಠನೆಂಬ ಪೊಗರಿನಿಂದ ಅದೆಷ್ಟು ಘೋರಗಳನ್ನು ನಡೆಸುತ್ತಿರುವ ‘ನಿಜಕ್ಕೂ ನಿನಗೆ ಕ್ಷಮೆಯಿದೆಯೆ?’ ಎಂದು ಕೇಳುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...