ಬಂದಿತು ದೀಪಾವಳಿ ಮನೆಮನೆಯೊಳು ಕುಡಿಯಾಡಿಸುತಿದೆ ನರುಬೆಳಕು ಮಿರುಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು. ಕತ್ತಲೊಡನೆ ಪಂತವಿಲ್ಲವಿವಕೆ ತಮದೊಡನಜ್ಜಿಯಾಟವಾಡುವಂಥ ಬಯಕೆ ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು ಈ ನೋಟವೆನ್ನ ಮನದ ಜಡಕೆ ಮದ್ದು. ಧಗ ಧಗ ನುರಿದುರವಣಿಸುತ ಬಂದಾ ಹರಿಚಕ್ರವನಸುವಿಂ ಶ...

ತಟ್ಟಿಯಲ್ಲಿ ಕಟ್ಟಿದ ಸಣ್ಣ ಕರು ಒಂದೇ ಸಮನೇ ಅಂಬಾ.. ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಸಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಲೇ ...

ಮೂಲ: ಟಿ ಎಸ್ ಎಲಿಯಟ್ ಕ್ಯುಮಿಯಾದ ಸಿಬಿಲ್‌ ಬುದ್ದಲಿಯೊಂದರಲ್ಲಿ ನೇಣಿನಲ್ಲಿ ತೂಗಿದ್ದ ನಾನೇ ಕಂಡೆ. ಸುತ್ತ ಹುಡುಗರ ತಂಡ, ಕೇಳಿತು. ಅವಳನ್ನು “ಹೇಳೇ ಹೇಳು ಸಿಬಿಲ್ ನಿನಗೇನು ಬೇಕು?” ಸಿಬಿಲ್ ಹೇಳಿದಳು: “ನನಗೆ ಸತ್ತರೆ ಸಾಕು.&#82...

ಬೋಳತಲೆ ಚಾಮರಾಜ ಒಡೆಯರರ ತರುವಾಯ ಬೆಟ್ಟದ ಒಡೆಯರೆಂದು ಪ್ರಸಿದ್ಧರಾದ ಒಡೆಯರು ಪಟ್ಟಕ್ಕೆ ಬಂದರು. ಇವರು ಶೂರರಾಗಿದ್ದರು; ಆದರೆ ಮುಂದಾಲೋಚನೆಯಿಲ್ಲದೆ ದುಡುಕುತ್ತಿದ್ದರು. ಮೃದು ಸ್ವಭಾವವಿದ್ದರೂ ನಿದಾನವಿರಲಿಲ್ಲ. ಇವರು ಎರಡು ವರ್ಷಗಳಾಳ್ವಿಕೆಯಲ್ಲ...

“ಅದು ಇಲ್ಲ! ಇದು ಇಲ್ಲ! ಯಾವುದೇನೆನಗಿಲ್ಲ- ವೆನಬೇಡ, ಎಲ್ಲವಿದನಾರು ಪಡೆದರು, ಹೇಳು ? ದೈವವಿತ್ತಿಹ ಕೂಳು, ದೇವನಿತ್ತಿಹ ತೋಳು- ಬಲವ ನಂಬಿರಬಾರದೇ ! ಆಲಿಸೀ ಸೊಲ್ಲ ! ’ಬಾ’ ಎಂದವನೆ ಗೆಳೆಯ; ಬಾಯ್ಗೆ ಬಿದ್ದುದೆ ಬೆಲ್ಲ! ಕೊರೆದಿಟ್ಟ ತಾಣದಲ...

ಪಕ್ಷಿ ಇಂಚರ ಚಂದ ಪಂಚ ಪೀಠವೆ ಅಂದ ಬಾಳೆಹೊನ್ನೂರಿನಲಿ ಮನಕೆ ಆನಂದ ರಂಭಾಪುರಿ ಪೀಠ ನೋಡು ತಂಗಿ ||ಪಲ್ಲವಿ|| ತಾಯಿಯೆಂದರು ಗುರುವು ತಂದೆಯೆಂದರು ಗುರುವು ಅರುಹು ಮರೆತರೆ ಹೆಂಗ ಹೇಳೆ ತಂಗಿ ಕುಣಿಯೋಣ ಕೂಗೋಣ ಮಾಡೋಣ ಗುರುಗಾನ ಸತ್ಯ ಈಶ್ವರ ಜ್ಞಾನ ತಿ...

“ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ.” ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು. ಆಕೆ ಹೆಣ್ಣು. ಆಕೆಗೆ ಅದ್ಯಾಕೋ ಬದುಕು ಸಾಕಾ...

ಕೈಲ್ ಕಿಸೀದೆ ಕರ್‍ಮಾಂತ್ ಕಿರ್‍ಲೋ ಕಂಜೋರ್ ಆದ್ಮಿ! ಬಕ್ರ! ಕೈಲ್ ಆಗೋರ್‍ನು ಕೆಳಕ್ ಎಳಿಯೋನು ನೀನ್ ಎಲ್ ಉಟ್ದೊ! ವಕ್ರ! ೧ ಕರ್‍ಮಾಂತ್ ಅಂದ್ರೆ – ಯಿಂದ ನಾವ್ ಆಕಿದ್ ಬೀಜದ್ ಊ ಅಣ್ ಅಲ್ಲ! ಕರ್‍ಮಾಂತ್ ಅಂದ್ರೆ – ಈಗ್ ನಾವ್ ಸಿಕ್ದ...

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...

ಗುರುಗಳು ತಮ್ಮ ಆಪ್ತ ಶಿಷ್ಯನನ್ನು ಕರೆದು “ನೀನು ಬಹಳದಿನ ನನ್ನಲ್ಲಿ ಅಭ್ಯಾಸ ಮಾಡಿರುವೆ. ಇನ್ನು ನೀನು ಹೊರಡುವ ಸಮಯ ಬಂತು. ಹೊರಡುವ ಮುನ್ನ ಈ ಪ್ರಶ್ನೆಗೆ ಉತ್ತರ ಹೇಳಿ ಹೋಗು” ಎಂದರು. “ಆಲದ ಬೇರಲ್ಲಿ, ನನ್ನ ತಲೆಯ ಶಿಖೆಯಲ್ಲಿ ಏನು ವ್ಯತ್...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...