ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...

ಕಲ್ಲು ಮುಳ್ಳಿನ ನಡುವೆ ಒಮ್ಮೆ ಹೀಗೆ ಮಾತುಕತೆ ನಡೆದಿತ್ತು. ಕಲ್ಲು ಬಂಡೆಗೆ ಆತು ಬೆಳದಿದ್ದ ಮುಳ್ಳಿನ ಪೊದೆ ಹೇಳಿತು- “ಏಕೆ ನನ್ನ ಬಗಲಲ್ಲಿ ಇರುವೆ? ನಾನು ನಿನ್ನ ಸನಿಹಕ್ಕೆ ಕರೆಯಲಿಲ್ಲ.” “ನಿನ್ನ ಚೂಪು ಮುಳ್ಳಿನ ಮೂಗು ಯಾರಿಗೂ ಬೇಡ. ನನ್ನ ಹತ್ತ...

ಹಲಸು, ಮಾವು, ಕೊಕಂ, ಸಾವಯವವೆಂದೆನುತ ಬಲುತರದಾದರ್‍ಶ ಸಂತೆಗಳೇನ ಮಾಡಿದೊಡೇನು ? ಹಾಳಾದ ಪರಿಸರವನುಳಿಸಿ ಬಳಸುವ ನಿಟ್ಟಿನಲಿ ಹುಲಿಯ ಕಂಡೋಡ್ವ ತೆರದಲಿ ಕಳೆದಿರ್‍ಪೆಮ್ಮನ್ನ ಮೂಲದ ಹಳ್ಳಿಮನೆಗೋಡದಿರಲಿನ್ನುಳಿವು ಸಂಶಯವು – ವಿಜ್ಞಾನೇಶ್ವರಾ *...

ಮಾನವಾಗಿ ತಾನು ಬದುಕಿ, ಹೀನ ಬಡತನವೇನೆ ಇರಲಿ, ನಾಚಿಕೊಳುವ ನೀಚತೊತ್ತ ಆಚೆನೂಕು, ಏನೆ ಇರಲಿ, ಏನೆ ಇರಲಿ, ಏನೆ ಇರಲಿ, ಕಷ್ಟನಿಷ್ಟುರವೇನೆ ಇರಲಿ, ಮೆರೆವ ಪದವಿ ವರಹಮುದ್ರೆ, ಆಳು ಚಿನ್ನ, ಏನೆ ಇರಲಿ! ಹೊಟ್ಟೆಗಿಷ್ಟು ಹಿಟ್ಟು ಗಂಜಿ, ಬಟ್ಟೆ ಚಿಂದಿ,...

ರಮೇಶನು ಮನೆಯವರೆಲ್ಲರನ್ನೂ ಕರೆದುಕೊಂಡು ತಿರುಪತಿಗೆ ಹೋಗಿದ್ದನು. ಬಲವಂತವಾಡಿದರೂ ಪ್ರಾಣೇಶನು ಹೋಗಲಿಲ್ಲ. ಹೊಸದಾಗಿ ಆರಂಭಿಸಿರುವ ಕನ್ಯಾಮಂದಿರವನ್ನು ನೋಡಿಕೊಳ್ಳುವ ನೆಪದಿಂದ ಅವನು ಹಿಂದೆಯೇ ನಿಂತಿದ್ದನು. ಆದರೆ ಅವನಿಗೆ ಗೊತ್ತಿತ್ತು ಇನ್ನೇನೋ ಪ...

ಬತ್ತಿದ ಮಾಯೆಗೆ ಹಸಿ ಹಸಿ ಮಾಡುವ ಮನ ನಿನ್ನ ಕರ್ಮ ಪಾತಾಳಕ್ಕೆ ಅಟ್ಟುತ್ತಿದೆ ಇದು ನನ್ನ ಕುಕರ್ಮ ಹಾಡಿನಲಿ ಕುಣಿ ಕುಣಿದು ದೇವನೊಲಿಸಿದೆ ನಾನು ನನ್ನ ಗಣನೆಗೆ ಮಣ್ಣು ತೂರಿ ಇಂದ್ರಿಯದತ್ತ ಸರದಿತ್ತು ತಾನು ಹಲವು ಜನುಮಗಳಲ್ಲೂ ಬೆಂಬಿಡದೆ ನನ್ನ ಸಂಗಾ...

ಕಟ್ಟಿದ ಕಣ್ಣಿನ ಬಟ್ಟೆಯೊಳಗೆ ಕರಟಿಹೋಯಿತೇ ಬದುಕು? ಕಣ್ಣಿದ್ದೂ ಕಾಣಲಿಲ್ಲ ನೀನೇನನ್ನೂ ಮುಚ್ಚಿದ ಕಣ್ಣಿನೊಳಗೆ ಗಂಡನ ಪ್ರೀತಿ ಮಾತ್ರ ಮಕ್ಕಳ ಮೇಲಿನ ಪ್ರೀತಿಯೇ ಮುಳುವಾಯಿತು ನಿನ್ನ ಪಾಲಿಗೆ ಮಮತೆಯ ಬೇಲಿಗೆ ನಿನ್ನ ದೇಹದ್ದೇ ಹೊದಿಕೆ ಸಮಾಜದ ಕಣ್ಣಿಗ...

ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...

ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನ...

ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು ನಮ್ಮ ನಾಡಿನವರಲ್ಲ ಬಿಡು ಭಂಟನೆ ಇಂದು ಜುಲೈ ಐದು, ಎರಡುಸಾವಿರದ ಹದಿನೈದು ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ ಈಗ ಹದಿಮೂರರ ಹರೆಯ ಮೂಡುತ್ತಿತ್ತು. ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದ...

1...56789...110

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...