ಸಂಗನ ವಿಷಯ ಶುರಮಾಡಿ ಇದೇನು ನಮ್ಮನ್ನು ಮಂಗನೆಂದು ಭಾವಿಸಿದ್ದಾನೆಯ ಈತ? ಸುತ್ತಿ ಬಳಸಿ ಹೇಳುವ ಇವನಾರು? ದೆವ್ವವೊ? ನಟನೊ? ಮಂತ್ರವಾದಿಯೊ? ಎಲ್ಲೆಲ್ಲೂ ಕೊಂಡೊಯ್ದು ಹಿಂಸಿಸುವ ರಾಕ್ಷಸನೊ? – ಎಂದು ಲೇಖನ ಬಗ್ಗೆಯೇ ಅನ್ನಿಸಿಟ್ಟಿತೆ? ಛೆ! ಇರಲಾರದು ...

(ಮೊದಲುಮಾತು) ಈ ಕವಿತೆಯ ಮೂಲವು ನನ್ನ ಪತ್ನಿಯ ಒಂದು ಸ್ವಪ್ನದಲ್ಲಿದೆ. ವಿಧ ವಿಧವಾಗಿ ಪಲ್ಲಟಗೊಂಡಿದ್ದರೂ ಆ ಸ್ಪಪ್ನವಸ್ತುವು ಎರಡನೆಯ ಹಾಗು ಮೂರನೆಯ ಭಾಗಗಳಲ್ಲಿ ವ್ಯಕ್ತವಾಗಿದೆ. ಚಿತ್ರವನ್ನ ಪೂರ್ತಿಗೊಳಿಸಲೆಂದು ಉಳಿದ ಭಾಗಗಳನ್ನು ನಾನು ಹೆಣೆದುಕ...

ಸಾಕು ಕಾಯ ಮಾಯ ಛಾಯೆ ಚೈತ್ರ ಲಿಂಗವೆ ಬೇಕು ಅ೦ತರಾತ್ಮಜೀಯ ಚಲುವ ಅಂಗವ ನಾನೆ ಹೂವು ಬಿಲ್ವ ಪತ್ರಿ ಗುರುವೆ ಲಿಂಗವೆ ದೇಹ ದೂಪ ಮನವೆ ದೀಪ ಜ್ಯೋತಿ ಲಿಂಗವೆ ಇರುಹು ಅರುಹು ನಿನ್ನ ಕುರುಹು ಯೋಗ ಲಿಂಗವೆ ಮರಹು ಮೌಡ್ಯ ಜಾಡ್ಯ ಭಸ್ಮ ಭಸಿತ ಲಿಂಗವೆ ಪ್ರೀತ...

ಆದರ್‍ಶ ನಾವು ಕಟ್ಟುವ ಕನಸು. ವಾಸ್ತವಿಕತೆ ಜೀವನದಲ್ಲಿ ನಡೆಯುವ ಸತ್ಯ. ಈ ಸತ್ಯ ಕನಸಿನ ಆದರ್‍ಶಕ್ಕೆ ಪೂರಕವಾಗಿಯೂ ಇರಬಹುದು; ವಿರೋಧವಾಗಿಯೂ ಇರಬಹುದು. ಆದರ್‍ಶ ಮತ್ತು ವಾಸ್ತವಿಕತೆಯ ಘರ್‍ಷಣೆ ಇರುವುದು ಈ ವಿರೋಧದಲ್ಲಿಯೇ. ಕ್ರೋಧವನ್ನು ಶಾಂತಿಯಿಂ...

ರಘುಪತಿ ರಾಘವ ರಾಜಾರಾಮ ಮಹಾಜೀವನಕೆ ಇಂದು ಬರೆದೆಯಾ ದೇವನೆ, ಪೂರ್ಣವಿರಾಮ! ರಘುಪತಿ ರಾಘವ ರಾಜಾರಾಮ! ೨ ಪತಿತ ಪಾವನ! ಪಟೇಲ ಜೀವನ ವಾಯಿತು ದೇವನ- ಮುರಲೀವಾದನ ಸ್ವಾತಂತ್ರ್ಯದ ಆ ವೀರೋದಾಮನ ಬೆಳೆಯಿತು ತಾನ ವಿತಾನ ದೇವಾ, ಸಖ್ಯ ಸೌಖ್ಯ, ಸಂಧ ರಘುಪತಿ...

ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ; ಆದರೆ ದೇಹದ ಭದ್ರಾಕೃತಿಯು ಅವರಂತಿದೆ. ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ; ಆದರೆ ನೋಟದೊಳಗಿನ ಸರಣಿ ಅವರಂತಿದೆ. ಕಂದಾ! ನಿನ್ನ ಗದ್ದದ ಮೇಲಣ ಕುಣಿಯು ನನ್ನಂತಿದೆ; ಆದರೆ ಮೂಗಿನ ಕೆಳಗಣ ಮಣ...

ಮಣ್ಣಿನಲ್ಲಿ ಆಟಿಕೆಗಳನ್ನು ಮಾಡುವ ಒಬ್ಬ ಹೆಂಗಸು-ಜೇಡಿಮಣ್ಣಿನಲ್ಲಿ ಅನೇಕ ಬೌದ್ಧ ಪ್ರತಿಮೆಗಳನ್ನು ಮಾಡಿ ಮನೆಮನೆಗೆ ಬಂದು ಮಾರುತ್ತಿದ್ದಳು. ಮಕ್ಕಳು ಅವನ್ನು ಕೊಂಡು ಆಡುತ್ತಾ, ಓಡುತ್ತ, ಒಡೆದು ಹಾಕುತ್ತಿದ್ದರು. ಆಕೆ ಮರುದಿನ ತಪ್ಪದೇ ಬಂದು ಒಡೆದ...

ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****...

ಹೊಳೆ ಬೆಳಗಿ ಜಾರುವುದು, ಗಿಳಿ ನೆಗೆದು ಹಾರುವುದು. ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು; ತಿಳಿಯಾದ ಬಾನಿನಲಿ ಬಿಳಿಮುಗಿಲು ತೇಲುವುದು, ಮಳೆಸೋತ ದಳದಂತೆ ಕದ್ದಡಗಿತು! ಕರೆಯ ಹೊಂಗೆಯ ಮರದ ನೆರಳ ಸೋಂಪಿನೊಳೊರಗಿ ಕುರುಬಹಯ್ದನು ಕೊಳಲನೂದುತಿರಲು, ಕೊ...

ಅಧ್ಯಾಯ ಎಂಟು ವಿಜಯನಗರದ ಅರಮನೆಯಲ್ಲಿ ಓಡಾಟಿಪೋ ಓಡಾಟ. ಮಂತ್ರಿ ಗಳೆಲ್ಲರೂ ಗುಸಗುಸ ಪಿಸಪಿಸವಾಡುತ್ತಿದ್ದಾರೆ. ಅಷ್ಟರಲ್ಲಿಯೇ ಸಮ್ಮುಖಕ್ಕೆ ಬರಬೇಕೆಂದು ಅಪ್ಪಣೆಯಾಯಿತು. ಎಲ್ಲರೂ ಒಬ್ಬರೊಬ್ಬರಾಗಿ ರಾಯರ ಸನ್ನಿಧಿಗೆ ಬಂದು ಕಾಣಿಸಿಕೊಂಡು ಭಯಭಕ್ತಿಗಳ...

1...3132333435...107

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...