ಮಣ್ಣಿನಲ್ಲಿ ಆಟಿಕೆಗಳನ್ನು ಮಾಡುವ ಒಬ್ಬ ಹೆಂಗಸು-ಜೇಡಿಮಣ್ಣಿನಲ್ಲಿ ಅನೇಕ ಬೌದ್ಧ ಪ್ರತಿಮೆಗಳನ್ನು ಮಾಡಿ ಮನೆಮನೆಗೆ ಬಂದು ಮಾರುತ್ತಿದ್ದಳು. ಮಕ್ಕಳು ಅವನ್ನು ಕೊಂಡು ಆಡುತ್ತಾ, ಓಡುತ್ತ, ಒಡೆದು ಹಾಕುತ್ತಿದ್ದರು. ಆಕೆ ಮರುದಿನ ತಪ್ಪದೇ ಬಂದು ಒಡೆದ ಚೂರುಗಳನ್ನು ಆರಿಸುತ್ತಿದ್ದಳು. ಇದನ್ನು ನೋಡಿದ ಸಾಧು ಒಬ್ಬರು, “ಆ ತುಂಡುಗಳಲ್ಲಿ ಎನಿದೆ?” ಎಂದು ಕೇಳಿದರು.
“ಇವು ಬರಿ ತುಂಡುಗಳಲ್ಲ. ಬುದ್ದನ ನಗೆಯ ತುಂಡುಗಳು, ನನ್ನ ಬರಿದಾದ ಬುಟ್ಟಿಯಲ್ಲಿ ಅದನ್ನು ತುಂಬಿಕೊಂಡು ದಿನವೂ ಮನೆಗೆ ಹೋಗುತ್ತೇನೆ. ಅವು ನನ್ನ ಮನೆ ಹಾಗು, ಮನವನ್ನು ತುಂಬುತ್ತವೆ. ನನ್ನ ಹಣದ ಚೀಲ ತುಂಬದಿದ್ದರೂ ನನ್ನ ಮನ ಸಂತೃಪ್ತಿಯಿಂದ ಇರುತ್ತದೆ” ಎಂದಳು.
ಇದನ್ನು ಕೇಳಿ ಸಾಧುವಿನ ಮುಖದಲ್ಲಿ ಅಚ್ಚರಿ ಮೂಡಿತು.
*****


















