ಸಾಕು ಕಾಯ ಮಾಯ ಛಾಯೆ
ಚೈತ್ರ ಲಿಂಗವೆ
ಬೇಕು ಅ೦ತರಾತ್ಮಜೀಯ
ಚಲುವ ಅಂಗವ
ನಾನೆ ಹೂವು ಬಿಲ್ವ ಪತ್ರಿ
ಗುರುವೆ ಲಿಂಗವೆ
ದೇಹ ದೂಪ ಮನವೆ ದೀಪ
ಜ್ಯೋತಿ ಲಿಂಗವೆ
ಇರುಹು ಅರುಹು ನಿನ್ನ ಕುರುಹು
ಯೋಗ ಲಿಂಗವೆ
ಮರಹು ಮೌಡ್ಯ ಜಾಡ್ಯ ಭಸ್ಮ
ಭಸಿತ ಲಿಂಗವೆ
ಪ್ರೀತಿ ಪ್ರಾಣ ಪ್ರಣಯ ನಿನಗೆ
ಪ್ರೇಮ ಲಿಂಗವೆ
ಶರಣು ಶರಣು ಶರಣು ಗುರುವೆ
ಪರಮ ಲಿಂಗವೆ
*****



















