ಆಗತಾನೆ ಕೆಲಸ ಸಿಕ್ಕ ಖುಷಿಯಲ್ಲಿದ್ದೆ. ಇನ್ನೇನು ಎರಡು ದಿನಗಳಲ್ಲಿ ಹಾಸನದ ಕಡೆ ರೈಲು ಹತ್ತುವುದಿತ್ತು. ಇದ್ದಕ್ಕಿದ್ದಂತೆ ೨-೩ ಜನ ನಮ್ಮ ಮನೆಗೆ ಬಂದವರೆ ಕಳ್ಳ ಸನ್ಯಾಸಿಗಳಿಗೆ ಅಡ್ಡ ಬೀಳವಂತೆ ನನ್ನ ಕಾಲಿಗೆ ಸಾಷ್ಟಾಂಗ ಹಾಕಿದರು. ನನಗೆ ಗಾಬರಿಯ ಜ...

ಅಮರರಿಗೆ ಮೃತರ ಕಳೆ ಕಾಲನಿಗು ಮುಪ್ಪ ಕೆಳೆ ಬಂದರೂ ನೀನಿರುವೆ ಚಿರಯೌವನೆ ಚಿಂತೆಗಳ ಸಂತೆಯನೆ ಚಿತೆಯ ಮೇಲಿರಿಸುತ್ತ ಎದೆಯೆದೆಯ ಚಿಗುರಿಸುವ ಚಿರನೂತನೆ! ಬಾಳುವೆಯ ಜಟಿಲತೆಯು ಬಂಧುಗಳ ಕುಟಲತೆಯು ಮನದ ಸಿಹಿಯನು ಹಿಸುಕಿ ಬಳಲಿಸಿರಲು ಮಿಣುಕುಹುಳದೆಳನಗೆ...

ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ ಮೂಲೋಕದೊಡೆತನವಿರಬಹುದು. ತೆರೆದು ನೋಡಲೆ….? ಬೇಡ! ಭಾಗ್ಯ ತೆರದ ಮೇಲೆ ಕೈ ತೆರೆವುದೇನು ತಡ ? ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ ಧ್ರುವನ ಚಿಕ್ಕೆಯಿರಬಹುದು! ತೆರೆದು ನೋಡಲೆ….? ಬೇಡ ...

ಒಂದು ಕಂಬಳಿ ಹುಳು ತೆವಳಿಕೊಂಡು ಬಂದು ಬುದ್ಧನ ಪಾದ ಪದ್ಮದಲ್ಲಿ ಬಂದು ನಿಂತಿತು. “ಬುದ್ಧ ದೇವ! ಈ ಕರಿ ಕಂಬಳಿ ನನ್ನ ಬಾಳಿಗೆ ಮುಸಿಕಿನ ತೆರೆಯಾಗಿದೆ. ಇದರ ಬಂಧನದಿಂದ ನನ್ನ ಮುಕ್ತನಾಗಿ ಮಾಡು” ಎಂದು ಆರ್ತವಾಗಿ ಬೇಡಿಕೊಂಡಿತು. ಬುದ್ದ ಮುಗು...

ಹುಲಿಯೊಂದು ಹಸುವನು ಕೊಂದು ತಿಂದೊಡದು ತ ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ ಗಳಿಗೊಂದಷ್ಟು ಮರನ ತರಿದೊಡೆ, ಮನೆಯ ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ ***...

ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು; “ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು; ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತಿದ್ದಳು. ಕುರಿಗಳಿಲ್ಲ...

ಅಧ್ಯಾಯ ಹತ್ತು ಗೋಲ್ಕೊಂಡದ ಅರಮನೆಯಲ್ಲಿ ಇಂದು ಭಾರಿಯ ಔತಣ. ಅಹಮ್ಮದ್ ನಗರದಿಂದ ಸುಲ್ತಾನರ ಸಮೀಪಬಂಧು ನವಾಸುವ ಖಾನ್‌ರೂ, ಬೀದರ್ ನಗರದಿಂದ ಸುಲ್ತಾನರ ಭಾವಮೈದುನ ಸರದಾರ್ ಸುಲೇಮಾನ್‌ಖಾನ್‌ರೂ ರಾಯ ಭಾರವನ್ನು ತಂದಿದ್ದಾರೆ. ಗೋಲ್ಕೊಂಡದ ಸುಲ್ತಾರಿಗ...

ನರನೆ ದೊರೆಯಾಗುವ ಹಂಬಲವೆ ನಿನಗೆ? ಧರೆಯಲಿ ದೇವ ಮರೆತು ಇರುವಂತೆ ಮರಣವೇ ಮಹನವಮಿಯೆಂದ ಸಂತರಿಗೆ ಅರವಿನಲಿದ್ದು ಅವರ ಮರೆಯಲುಂಟೆ! ದುಕ್ಕ ದುಮ್ಮಾನಗಳ ಈ ಲೋಕ ಹೌದು, ದಕ್ಕದ ಅಸೆಗಳಿಗೆ ಕೈ ಚಾಚಲೇಕೆ ಲೆಕ್ಕವಿರದ ಈ ಸೊನ್ನೆ ಬಾಳು ನಿನ್ನದೇನೊ! ಸುಕ್ಕ...

ಒಮ್ಮೆ ನಕ್ಕು ಬಿಡು ಗೆಳತಿ ಅತ್ತಿರುವ ನಿನ್ನ ಕಣ್ಣುಕಂಡು ಬತ್ತಿರುವ ನನ್ನೆದೆಗೆ ತಂಪು ಗೈಯಲು ಹಾಡಬೇಡವೆಂದರೆಂದು ಹಾಡು ನಿಲ್ಲಿಸಿತೇ ಕೋಗಿಲೇ? ನಿನ್ನ ನಗುವೇ ಹಾಡಾಗಿತ್ತು ನನ್ನ ಪಾಲಿಗೆ ನಿನ್ನ ನಗುವಿನ ಮೆರವಣಿಗೆಯ ಸರಪಣಿಗೆಲ್ಲಿತ್ತು ಕೊನೆ? ನಿ...

(ಕುವೆಂಪುರವರ ನೆನಪಿನಲ್ಲಿ) ಜಯ ಕನ್ನಡ ಭಾಗ್ಯವಿಧಾತೆ ಜಯ ಹೇ ಕರ್ನಾಟಕ ಮಾತೆ ಜಯ ಕವಿರತ್ನತ್ರಯ ಕಾವ್ಯವಿಖ್ಯಾತೆ ಜಯ ಜನ್ನನ ಪರಿಶುದ್ಧ ಯಶೋ ಚರಿತೆ ಜಯ ಅಲ್ಲಮ ಬಸವ ವಚನ ಮಣಿಖಚಿತ ಜಯ ಮಹಾದೇವಿಯಕ್ಕ ಹೊನ್ನಮ್ಮ ಸಂಪ್ರೀತೆ ಜಯ ಕುಮಾರವ್ಯಾಸ ಭಾಮಿನಿ ...

1...2728293031...107

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...