ನರನೆ ದೊರೆಯಾಗುವ ಹಂಬಲವೆ ನಿನಗೆ?
ಧರೆಯಲಿ ದೇವ ಮರೆತು ಇರುವಂತೆ
ಮರಣವೇ ಮಹನವಮಿಯೆಂದ ಸಂತರಿಗೆ
ಅರವಿನಲಿದ್ದು ಅವರ ಮರೆಯಲುಂಟೆ!
ದುಕ್ಕ ದುಮ್ಮಾನಗಳ ಈ ಲೋಕ ಹೌದು,
ದಕ್ಕದ ಅಸೆಗಳಿಗೆ ಕೈ ಚಾಚಲೇಕೆ
ಲೆಕ್ಕವಿರದ ಈ ಸೊನ್ನೆ ಬಾಳು ನಿನ್ನದೇನೊ!
ಸುಕ್ಕಗಟ್ಟಿ ಕರಗುವ ತನುವಿನಲಿ ಮೋಹವೇಕೆ!
ಜಂಬ, ಕಿರುತಿ, ಪ್ರಶಂಸೆ ನಿನ್ನ ಹೊದಿಕೆ
ನಂಬಲಾಗದ ಸುಖಕ್ಕೆ ಹಪಹ ಪಸುವದೇಕೆ
ಹಂಬಲದಿ ಸಾಧ ಸಂತರ ಬಯಸುವುದೇಕೆ
ಗಂಭೀರ ಚಿಂತನೆ ನಿ ಮಾಡಲಾರೆ ಏಕೆ!
ವ್ಯರ್ಥ ಸಂಸಾರ ಇದು ಭ್ರಮಾ ಸಾಗರ
ಅರ್ಥ ಕಾಮ ಕಾಡಿವೆ ಆಗಿ ನಾಗರ
ಕರ್ತನನು ಧ್ಯಾನಿಸದ ಎಂಥ ಹೋರಾಟ
ಮಾಣಿಕ್ಯ ವಿಠಲನೆ ದೈವ ಸಾಗರ
*****
















