ಒಮ್ಮೆ ನಕ್ಕು ಬಿಡು ಗೆಳತಿ
ಅತ್ತಿರುವ ನಿನ್ನ ಕಣ್ಣುಕಂಡು
ಬತ್ತಿರುವ ನನ್ನೆದೆಗೆ ತಂಪು ಗೈಯಲು
ಹಾಡಬೇಡವೆಂದರೆಂದು
ಹಾಡು ನಿಲ್ಲಿಸಿತೇ ಕೋಗಿಲೇ?
ನಿನ್ನ ನಗುವೇ ಹಾಡಾಗಿತ್ತು
ನನ್ನ ಪಾಲಿಗೆ
ನಿನ್ನ ನಗುವಿನ ಮೆರವಣಿಗೆಯ
ಸರಪಣಿಗೆಲ್ಲಿತ್ತು ಕೊನೆ?
ನಿನ್ನ ಮುಗುಳು ನಗೆಯೇ ಆಗಿತ್ತು
ನನ್ನೆದೆಗೆ ಬೀಸಣಿಗೆ
ಕಣ್ಣು ಕಾಯುತ್ತಿತ್ತು, ಮನಸು ಬಯಸುತ್ತಿತ್ತು
ನಿನ್ನ ಮಂದಹಾಸಕ್ಕಾಗಿ
ಮತ್ತೆ ಮತ್ತೆ ಮತ್ತು ತರಿಸುತ್ತಿತ್ತು
ನಿನ್ನ ನಗುವೆಂಬ ಮಕರಂದ
ನಗುವಿಲ್ಲದ ಮೋರೆಯಲ್ಲಿ ಕಾಣದು ಚೆಲುವು
ಮಾತಲ್ಲಿ ಇನ್ನೆಲ್ಲಿಯ ಒಲವು?
ಮನದ ನೋವನ್ನೆಲ್ಲ ಹೊರ ನೂಕಿ
ಒಮ್ಮೆ ನಕ್ಕುಬಿಡು ಗೆಳತಿ.
*****


















