(ಕುವೆಂಪುರವರ ನೆನಪಿನಲ್ಲಿ)
ಜಯ ಕನ್ನಡ ಭಾಗ್ಯವಿಧಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಕವಿರತ್ನತ್ರಯ ಕಾವ್ಯವಿಖ್ಯಾತೆ
ಜಯ ಜನ್ನನ ಪರಿಶುದ್ಧ ಯಶೋ ಚರಿತೆ
ಜಯ ಅಲ್ಲಮ ಬಸವ ವಚನ ಮಣಿಖಚಿತ
ಜಯ ಮಹಾದೇವಿಯಕ್ಕ ಹೊನ್ನಮ್ಮ ಸಂಪ್ರೀತೆ
ಜಯ ಕುಮಾರವ್ಯಾಸ ಭಾಮಿನಿ ನಮಿತೆ
ಜಯ ರಾಘವ ಲಕ್ಷ್ಮೀಶರೋಘದಮೋಘದ ಕವಿತೆ
ಜಯ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಚರಿತೆ
ಜಯ ಶಿಷ್ಟ ವಿಶಿಷ್ಟ ದೇಸಿ ಮಾರ್‍ಗ ಸಂಚರಿತೆ
ಜಯ ಕನ್ನಡ ನಾಡೆ ನಾಡು ಕನ್ನಡದ ಪೆಂಪೆ ಪೆಂಪು
ಕನ್ನಡದ ಕಂಪೆ ಕಂಪೆನುತೆ
ಜಯ ಕನ್ನಡ ಮಾತೆ ಮಾತೆಯೆನೆ ಜಯ ಕನ್ನಡಿಗರ ಶುಭದಾತೆ
ಅನ್ನೆಗಮಿನ್ನೆಗಮೆನ್ನೆಗಂ ಪೊರೆ ನೀ ಕನ್ನಡ ಜನಪದಮಂ
ಮಮ ಮಾತೆ ನುಡಿದಾತೆ ಜಯ ಹೇ ಕನ್ನಡ ಮಾತೆ
ಒಳ್ನುಡಿ ನಾಣ್ಣುಡಿ ನಲ್ನುಡಿ ಬಲ್ನುಡಿ ಸವಿನುಡಿ ಕವಿನುಡಿ ವಿದ್ಯಾಲಂಕೃತೆ
ಜಯವಾಗಲಿ ಮಧುರಾನ್ವಿತೆ ಹೃನ್ಮಂಗಳ ಚಿನ್ಮಂಗಳ ಗೀತೆ
*****


















