ನಂದಿದರು ದುಸ್ಸತ್ವದಮನಸತ್ವೋನ್ನತರು
ರಾಮಕೃಷ್ಣಾದಿಗಳು ದಿವ್ಯಭೂತಿಗಳು
ಮತ್ತೆಲ್ಲು ಕಾಣದಿಹ ಬೆಲೆಗಳನ್ನು ಮಾನುಷ್ಯ-
ಜೀವಿತದಿ ನೆಲೆಗೊಳಿಸಿದಭವಬಂಧುಗಳು
ಕರಣಗಳ ಪಾತ್ರದೊಳು ರುದ್ರರಭಸದಿ ಹರಿದು
ಬಲುಕೇಡುಗಳ ಬಳೆವ ಸಂಮೋದಧುನಿಯ
ಬಾಳ ಜಡೆಯೊಳು ತಳೆದು ಪಳಗಿಸಿದ ದಾಂತರು
ಆತ್ಮ ಕೃಷಿಕರು ಸೇರಿದರು ಬಂದ ಮನೆಯ-
ನಂದರುಸಿರಾಡುವರು ದೇವಮಂದಿರ ಮೂರ್ತಿ ಶಿಲ್ಪಗಳೊಳು
ಸುಂದರಾಗಮಗಾನ ನಿಗಮೋದ್ಗೃಣನ ಭವ್ಯ ಕಲ್ಪಗಳೊಳು.
*****


















