Home / ಕಥೆ / ಕಾದಂಬರಿ / ಅವಳ ಕತೆ – ೧೦

ಅವಳ ಕತೆ – ೧೦

ಅಧ್ಯಾಯ ಹತ್ತು

ಗೋಲ್ಕೊಂಡದ ಅರಮನೆಯಲ್ಲಿ ಇಂದು ಭಾರಿಯ ಔತಣ. ಅಹಮ್ಮದ್ ನಗರದಿಂದ ಸುಲ್ತಾನರ ಸಮೀಪಬಂಧು ನವಾಸುವ ಖಾನ್‌ರೂ, ಬೀದರ್ ನಗರದಿಂದ ಸುಲ್ತಾನರ ಭಾವಮೈದುನ ಸರದಾರ್ ಸುಲೇಮಾನ್‌ಖಾನ್‌ರೂ ರಾಯ ಭಾರವನ್ನು ತಂದಿದ್ದಾರೆ. ಗೋಲ್ಕೊಂಡದ ಸುಲ್ತಾರಿಗೆ ಸಂಗೀತದಮೇಲೆ ಬಹಳ ಪ್ರೇಮವೆಂದು ಗವಾಯ್ ಫಾಜಿಯುದ್ದೀನ್‌ ಹಾಜಿಯವರನ್ನು ಬಿದರೆ ಯಿಂದ ಕಳುಹಿಸಿಕೊಟ್ಟಿದ್ದಾರೆ. ಅವರು ಹಿಂದೆ ಲೋಡಿಅರಸರು ದೆಹಲಿಯಲ್ಲಿ ದ್ದಾಗ ಅವರ ಆಶ್ರಯದಲ್ಲಿದ್ದವರು. ಗವಾಯ್‌ಗಳಲ್ಲಿ ಅವರನ್ನು ಮೀರಿಸಿದವರು ಯಾರೂ ಇರಲಿಲ್ಲ. ಇವೊತ್ತು ಸಂಜೆ ಅವರ ಸಂಗೀತ. ರಾತ್ರಿ ಊಟ.

ಸಂಗೀತವು ಸಂಜೆಯ ನಮಾಜ್‌ ಆದಮೇಶೆ ಆರಂಭವಾಗಿ ರಾತ್ರಿ ಒಂದು ಝಾವದ ಕೊನೆಯವರೆಗೂ ನಡೆಯಿತು. ಸುಲ್ತಾನರ ಅನಂದವನ್ನು ನೋಡಿ ನೋಡಿ ಗವಾಯ್‌ಗಳು ಬಹ ಸಂತೋಷಪಟ್ಟು ತಾವೂ ಆನಂದದಿಂದ ಹಾಡಿದರು. ಇತರರು ಇರಲಿ, ಗವಾಯ್‌ಗಳ ಶಿಷ್ಯರೇ ತಮ್ಮ ಗುರುಗಳು ಅಷ್ಟು ಸಂತೋಷವಾಗಿ ಹಾಡಿದುದನ್ನು ತಮ್ಮ ಜನ್ಮದಲ್ಲಿಕೇಳಿರಲಿಲ್ಲ ಎಂದರು. ಸಂಗೀತವು ಮುಗಿದಮೇಲೆ ಸುಲ್ತಾನರು ಗವಾಯ್‌ಗಳನ್ನು . ಪ್ರತ್ಯೇಕವಾಗಿ ಕರೆಸಿಕೊಂಡರು. ಅವರನ್ನು ಎದ್ದು ಬರಮಾಡಿಕೊಂಡು, ತಾವೇ ಅತ್ತರ್‌ ಹಚ್ಚಿ, “ತಾವೇ ಹಾಡಿದಿರೋ? ಅಥವಾ ಹಿಂದೂಗಳ ಗಂಧರ್‍ವರು ಯಾರಾದರೂ ಬಂದು ಹಾಡಿದರೋ? ಇದು ದಿವ್ಯಗಾನ, ನಿಜವಾಗಿಯೂ ಮನುಷ್ಯರು ಹಾಡುವುದಕ್ಕೆ ಅಗುವುದಿಲ್ಲ ‘ ಎಂದರು.

ಗವಾಯ್‌ಗಳು ಬಹು ಮುರ್ಯಾದೆಯಿಂದ ನೆಲದವರೆಗೂ ಬಗ್ಗಿ ಸಲಾಂ ಮಾಡಿ “ಖಾವಂದ್‌, ಮೊಘಲರು ಡೆಲ್ಲಿ ಹಿಡಿದುಕೊಂಡಮೇಲೆ ಅಲ್ಲಿಂದ ನಾವು ಬಹಳಾ ಹೈರಾನ್‌ ಆಗಿ, ಮಕ್ಕಾಕ್ಕೆ ಹೋಗಬಿಟ್ಟೆವು. ಅಲ್ಲಿ ಹಜರತ್‌ ಕಾಖಾ ಸಾಹೆಚ್‌, ಅವರಿಗೆ ಪೂಜೆ ಸಲ್ಲಿಸಿ ಬಂದು ಆ ರಾತ್ರಿ ಅಲ್ಲಿಯೇ ಮಲಗಿದ್ದೆವು. ಹಜರತ್‌ ಗೆಬ್ರೀಲ್‌ ಅವರು ಆ ದಿನ ಕನಸಿನಲಿ ಬಂದು, ‘ ಕಾಖಾ ಸಾಹೆಬ್‌ ಅವರ ಸನ್ನಿಧಾನದಲ್ಲಿ ಪವಿತ್ರ ಖುರಾನ್‌ಅನ್ನು, ರಾಗವಾಗಿ ಓದು. ಖುದಾ ಅವರಿಗೆ ಪ್ರೀತಿಯಾಗುವುದು ‘ ಎಂದು ಹುಕುಂ ಮಾಡಿದರು ನಾನೂ ಹಾಗೆಯೇ ಮಾಡಿದೆ. ಒಂದು ವಾರ ಹಿಡಿಯಿತು ಜಹಾಪನ. ಮುಗಿದರಾತ್ರಿ ಹಜರತ್‌ ಗೆಬ್ರೀಲ್‌ ಅವರು ಮತ್ತೆ ಕನಸಿನಲ್ಲಿ ಕಾಣಿಸಿ ಕೊಂಡು “ನಿನ್ನ ಖುರಾನ್‌ ಪಠನದಿಂದ ಖುದಾ ಅವರಿಗೆ ಬಹಳ ಸಂತೋಷ ವಾಗಿದೆ. ನೀನು ಬಹಳ ದೊಡ ಗವಾಯ್‌ ಆಗುತ್ತೀಯೆ. ನಿನ್ನ ದೇಶಕ್ಕೆ ಹಿಂತಿರುಗಿ ಹೋಗು’ ಎಂದು ಅಪ್ಪಣೆಮಾಡಿದರು. ದಾರಿಯಲ್ಲಿ ಬೀದರಿನ ಸರದಾರರೊಬ್ಬರು ಸಿಕ್ಕಿದರು. ಅವರು ಒಂದೆ ಡೆಲ್ಲಿಗೆ ಬಂದು ಹೋಗುತ್ತಿದ್ದಾಗ ನನ್ನನ್ನು ಬಲ್ಲವರು. ಅವರು ನನ್ನನ್ನು ಕರೆದುಕೊಂಡು ಹೋಗಿ ಖಾವಂದ್‌ರಿಗೆ ಭೆಟ್ಟಿ ಮಾಡಿಸಿದರು. ಅವರೂ ನನ್ನನ್ನು ಬಹಳ ಗೌರವ, ವಿಶ್ವಾಸಗಳಿಂದ. ಕಾಪಾಡಿಕೊಂಡಿದ್ದಾರೆ. ಆಗ ಕಾಖಾ ಸಾಹೇಬರಬಳಿ ನಾನು ಖುರಾನ್‌ ಹಾಡಿದ ಮೊದಲು, ಈಗ ಎಲ್ಲಿ ಹಾಡುತ್ತಿದ್ದರೂ ಖುದಾಬಳಿಯೇ ಹಾಡುತ್ತಿದ್ದ ಹಾಗೆ ಆಗುತ್ತದೆ ಖಾವಂದ್‌. ಅದರಲ್ಲೂ ಇವೊತ್ತು ಅಂತೂ ನನಗೇ ಆಶ್ವರ್ಯ ಆಯಿತು. ನಾನೇ ಬಹಳ ಪಸಂದ್‌ ಮಾಡುತ್ತಿದ್ದೆ. ಬಹುಶಃ ಈ ದರ್ಬಾರ್‍‌ ಮಂಟಪದಲ್ಲೀ ಏನೋ ವಿಶೇಷ ಇರಬೇಕು ಖಾವಂದ್‌.”

ಸುಲ್ತಾನರು ಆತನ ಮಾತನ್ನು ಕೇಳಿ ಬಹಳ ಸಂತೋಷಪಟ್ಟರು. “ಗವಾಯ್‌ ಸಾಹೇಬ್‌, ತಾನು ಹೇಳುವುದು ಬಹಳ ಸರಿ. ಪವಿತ್ರವಾದು ದನ್ನೆಲ್ಲ, ಒಳ್ಳೆಯದನ್ನೆಲ್ಲ, ಖುದಾ ಅವರಿಗೆ ಎಂದು ಎತ್ತಿಡಬೇಕು. ಅವರಿಗೆ ಕೊಡುವಾಗ ನಮಗೂ ಸಿಕ್ಕೇ ಸಿಕ್ಕುತ್ತದೆ. ತಮ್ಮ ಸಂಗೀತ ಕೇಳುವುದಕ್ಕೆ ನಮಗೆ ಖುಷಿ ಇರುವುದು ಇರಲಿ, ನಮ್ಮ ದರ್ಬಾರಿನ ಕಂಭಗಳೆಲ್ಲ ಈ ದಿನ ಖುಷಿಯಾಗಿ ಹೋಗಿ, ಇನ್ನು ಒಂದುವಾರ ತಮ್ಮ ಸಂಗೀತ ಕೇಳಬೇಕು ಎಂದು ನಮ್ಮ ಹತ್ತಿರ ಅರ್‍ಜಿಮಾಡಿಕೊಂಡಿವೆ. ನಾವು. ಏನು ಹೇಳೋಣ ?”

“ಖಾವಂದ್‌, ನನಗೂ ಹಾಗೇ ಎನ್ನಿಸಿತ್ತು ಸವಾರಿ ದರ್ಬಾರಿಗೆ ದಯಮಾಡಿಸುತ್ತಲೂ ಮೊಗ್ಗು ಹೂವಾದ ಹಾಗೆ ಆಗಿ ಎಲ್ಲೆಲ್ಲೂ ಪರಿಮಳ ಹರಡಿತು. ಖಾವಂದ್‌, ಆ ಪರಿಮಳ ಇಲ್ಲಿಯೂ ನುಗ್ಗಿಬಿಟ್ಟು ನನ್ನ್ನ ಸಂಗೀತವನ್ನು ಫರಮಾಯಿಷಿ ಮಾಡಿಬಿಟ್ಟಿತು. ಗವಾಯ್‌ಗಳಿಗೆ ಖುದಾ ಇರೋದು ಚೆನ್ನಾಗಿ ಕೇಳುವವರ ಕಿವಿಗಳಲ್ಲಿ ಖಾವಂದ್‌. ಅದರಿಂದ ಈ ಗರೀಬ್‌ನ ಗಾನ ಕೇಳಬೇಕು ಎಂದರೆ ಆದು ಖುದಾನ ಅಪ್ಪಣೆ ಅಂತ ಪಾಲಿಸಬೇಕು ಖಾವಂದ್‌.?

“ಇನ್ನೊಂದು ವಾರದೊಳಗೆ ವಿಜಯನಗರದಿಂದ ಇಬ್ಬರು ಸಂಗೀತಗಾರರು ಬರುತ್ತಾರೆ. ಅವರೂ ತಮ್ಮ ಹಾಗೆಯೇ ಪ್ರಸಿದ್ದರು. ಅವರು ಬರುವ ವರೆಗೂ ಇದ್ದು, ಅವರ ಸಂಗೀತ ಕೇಳಿ, ಅದು ಹೇಗಿದೆ? ಆದರಲ್ಲಿ ಏನು ಝೋಕಿದೆ? ಅದನ್ನು ಕೇಳಿ ಸಂತೋಷಪಡುವುದು ಹೇಗೆ? ಎಲ್ಲವನ್ನೂ ನಮಗೆ ಹೇಳಿಕೊಡಬೇಕು.”

“ಜೋಹುಕುಂ. ಆದರೆ ಖುದಾ ಸಾಹೇಬರಬಳಿ ಎಲ್ಲಾ ಬಲ್ಲೆ ಎನ್ನುವರಿಗೆ ಜಾಗಾಇಲ್ಲ. ಖಾವಂದ್‌, ಸವಾರಿಗೆ ಸಂಗೀತದಲ್ಲಿ ಬಹುತ್‌ ಖಾಯಿಷ್‌ ಎಂತ ಕೇಳಿದ್ದೆ. ಕಂಡೆ. ಖಾವಂದ್‌ರು ಹೋಗಿ ಕಲ್ಲಿಗೆ ಹಾಡು ಎಂತ ಅಪ್ಪಣೆ ಮಾಡಿದರೆ, ಅದೂಕೂಡ ಗಾನ ಮಾಡಿಬಿಡುತ್ತದೆ. ಅದರಿಂದ ಈ ಅನುಗ್ರಹ ನಮಗೆ. ತಮಗಲ್ಲ. ಹುಕುಂ ಪ್ರಕಾರ ಇರುತ್ತೇನೆ.“ ಸುಲ್ತಾನರು. ಅತಿಥಿಗಳೊಡನೆ ಭೋಜನಮಂದಿರಕ್ಕೆ ಹೋದರು. ಅಲ್ಲಿ ಅರ್ಧರಾಶ್ರಿಯನರೆಗೂ ಔತಣವು ನಡೆಯಿತು

ಹೀಗೆಯೇ ಮೂರುನಾಲ್ಲುದಿನಗಳು ಕಳೆಯಿತು. ಬೀದರ್‌, ಅಹೆಮ್ಮದ್‌ ನಗರದಿಂದ ಬಂದಿರುವ ರಾಯಭಾರದ ಕಲಸ ನಡೆದಿಲ್ಲ. ಪ್ರತಿದಿನವೂ ಅವರಿಗೆ ಊಟದ ಮೇಲೆ ಊಟ, ಖಿಲ್ಲತ್ತಿನ ಮೇಲೆ ಖಿಲ್ಲತ್ತು. ಸುಲ್ತಾನರು ಅತಿಥಿ ಗಳನ್ನು ಒಂದು ಗಳಿಗೆ ಬಿಟ್ಟು ಇರುವುದಿಲ್ಲ. ಆದರೂ ರಾಯಭಾರದ ವಿಚಾರ ಬಂದಾಗ ಬಾರಿ ನಗೆನಕ್ಳು, “ಏನಂಥಾ ಜರೂರು? ತಮ್ಮಂಥಾ ದೋಸ್ತ್‌ ಗಳು ಬಂದಾಗ ಎರಡುದಿನ ಖುಷಿ ಮಾಡಬಾರದೆ ? ಈ ಗಾನಾ, ಪೀನಾ ಖಾನಾ ಗಳಲ್ಲಿ ಖುಷಿಗೊಂಡರೆ ದಿಲ್‌ ಆದೆಯಲಾ ನೇರವಾಗಿ ಗುಂಡು ಹೊಡೆದಂಗೆ ತನ್ನ ಕೆಲಸ ಮಾಡುತ್ತದೆ. ನಾಳೆಯೂ ನಾಡಿದ್ದೂ ತಮ್ಮದೇ ಕೆಲಸ.ನಾವು ಮೂವರೂ ಷಿಕಾರಿಗೆ ಹೋಗೋಣ. ಅಲ್ಲಿ ಇನ್ನೊಬ್ಬರೂ ಇಲ್ಲದಾಗ ನಾವು ನಾವು ಮಾತನಾಡಿಕೊಂಡು ಬರೋಣ. ಇಲ್ಲಿ ಗಲಾಟೆ ಬಹಳ”ಎಂದರು.

ಅತಿಥಿಗಳಿಗೆ ಮಿಕ್ಕೆಲ್ಲ ವಿಚಾರದಲ್ಲಿಯೂ ಸಂತೃಪ್ತಿಯಾಗಿದ್ದರೂ, ಈ ಕಾಲಹರಣದ ವಿಚಾರವಾಗಿ ಏನೋ ಅಸಮಾಧಾನ. ಸುಲ್ತಾನರು ಪುರುಸತ್ತಾಗಿದ್ದಾರೆ. ಆದರೂ ರಾಯಭಾರದ ವಿಚಾರ ಮಾತನಾಡುವುದಿಲ್ಲ. ಅವರಿಗೆ ಅದೇ ಒಂದು ಸಮಸ್ಯೆ.

ಯಜಮಾನ್‌ ವೀರಪ್ಪ ಶೆಟ್ಟರು ಗೋಲ್ಗೊಂಡದ ನಗರದ ಗಡಿಬಳಿ ಬರು ತಿದ್ದ ಹಾಗೆಯೇ ವಿಜಯನಗರದ ರಾಯಭಾರಿಯು ಕಾಣಿಸಿಕೊಂಡು, ಸೆಟ್ಟರನ್ನು ತನ್ನ ರಥದಲ್ಲಿ ಕರೆದುಕೊಂಡು ಹೋದನು. “ಬೀದರ್‌, ಅಹಮ್ಮದ್‌ ನಗರ ಗಳಿಂದ ರಾಯಭಾರಿಗಳು ಬಂದಿದ್ದಾರೆ. ಈಗ ತಾವು ಬೇರೆ ರಥದಲ್ಲಿ ಬಂದು ಎಲ್ಲರ ಕಣ್ಣಿಗೂ ಬೀಳುವುದು ಬೇಡ. ತಾವು ಬರುತ್ತಲೂ ಗುಟ್ಟಾಗಿ ದಿವಾನರಿಗೆ ಸುದಿ ಕಳುಹಿಸಬೇಕು. ಅವರು ಬಂದು ಈ ದಿನದ ರಾತ್ರಿಯೇ ತಮ್ಮನ್ನು ಸುಲ್ತಾನರ ಬಳಿಗೆ ಕರೆದುಕೊಂಡು ಹೋಗುವರು”ಎಂದು ಹೇಳಿ, ಅವರ ಪ್ರಸನ್ನ ಮುಖ ದಿಂದಲೇ ಕಾರ್ಯವು ಸುಮುಖವಾಗಿರುವುದನ್ನು ಅರಿತು ಬಹಳಸಂತೋಷಪಟ್ಟರು.

“ಸುಲಾನರು ಆ ರಾಯಭಾರಿಗಳು, ಬಂದು ಐದು ದಿನವಾಗಿದ್ದರೂ ಅವರ ರಾಯಭಾರವನ್ನು ಇನ್ನೂ ಬರಮಾಡಿಕೊಂಡಿಲ್ಲ. ಖಾನಾ ಪೀನಾ, ಗಾನಾಗಳಲ್ಲಿ ಮುಳುಗಿಸಿ ಇಟ್ಟಿ ದ್ದಾರೆ. ನೋಡಿದರೆ ನಿಮ್ಮನ್ನು ಕಾದಿರುವಂತಿದೆ“ಎಂದು ಹೇಳಿ ಸೆಟ್ಟರನ್ನು ಬಿಡಾರಕ್ಕೆ ಕರೆದುಕೊಂಡು ಹೋದರು.

ಅಂದಿನರಾತ್ರಿ ಸೆಟ್ಟರನ್ನು ದಿವಾನರನ್ನು ಸುಲ್ತಾರ ಭೇಟಿಗೆ ಕರೆದು ಕೊಂಡು ಹೋದರು. ಸುಲ್ಮಾನರು ಸೆಟ್ಟರನ್ನು ಬಹಳ ಸಂತೋಷದಿಂದ ಕಂಡು, ಮಗ್ಗುಲಲ್ಲಿ ಕುಳ್ಳಿರಿಸಿಕೊಂಡು, “ಏನೇನು ಮಾಡಿಕೊಂಡು ಬಂದಿರಿ? ಬಾದ್‌ಷಾ ಅವರು ಚೆನ್ನಾಗಿದ್ದಾರೆಯೇ ?” ಎಂದು ಮುಂತಾಗಿ ಹಲವಾರು ಪ್ರಶ್ನೆಗಳನ್ನು ಕೇಳಿ ಮಿತ್ರೋಪಚಾರವನ್ನು ಸಲ್ಲಿಸಿದರು.

ಖಾನಂದ್‌, ಮಹಾಸ್ವಾಮಿಯವರು ಸಂಧಿಪತ್ರವನ್ನು ನಮ್ಮ ಹಸ್ತ ಕೊಟ್ಟು ಓಡಿಸಿದರು. ಭರತಾಚಾರ್ಯರು ಶಿಷ್ಯರನ್ನು ಕರೆದುಕೊಂಡು ಬರು ತ್ತಿದ್ದಾರೆ, ಮಹಾಸ್ವಾಮಿಯವರು ಸಂಧಿಯ ವಿಚಾರವಾಗಿ ‘ ನಾವಿಬ್ಬರೂ ಒಂದೇ ದೋಣಿಯನ್ನು ಏರಿದ್ದೇವೆ. ಒಳ್ಳೆಯದು, ಕೆಟ್ಟುದು ಎರಡೂ ಸಮಾನವಾಗಿ ಅನುಭವಿಸೋಣ. ವಿಜಯನಗರ ರಾಜ್ಯವೆಲ್ಲ ತಮ್ಮ ಜೋಬಿ ನಲ್ಲಿದೆ ಎಂದು ತಾವು ನಂಬಬೇಕು’ ಎಂದು ಅರಿಕೆ ಮಾಡಬೇಕು ಎಂದು ಅಪ್ಪಣೆಮಾಡಿದ್ದಾರೆ. ಸಂಗೀತಗಾರರ ವಿಚಾರವಾಗಿ ‘ ಅದು ನಮ್ಮ ಕಂಠ ದಲ್ಲಿರುವ ಹೂವಿನಹಾರ. ಅದು ಬಾಡದ ಹಾಗೆ ನೋಡಿಕೊಳ್ಳಬೇಕು ‘ ಎಂದು ವಿಜ್ಞಾಪಿಸು ಎಂದು ಅಪ್ಪಣೆಮಾಡಿದ್ದಾರೆ ಖಾವಂದ್‌.“

“ಜೊತೆಯಲ್ಲಿ ಅವರ ರಕ್ಷಣೆಗೆ ಸೈನ್ಯ ಕಳುಹಿಸಿದ್ದಾರೋ ?”

“ಕಳುಹಿಸಿದ್ದಾರೆ ಖಾವಂದ್‌್‌

“ದಿವಾನ್‌ ಸಾಹೇಬ್‌, ನಮ್ಮದೂ ಒಂದು ಸಣ್ಣ ಸೈನ್ಯ ಹೋಗಿ ಜೊತೆ ಅವರ ಜೊತೆ ಸೇರಿಕೊಳ್ಳಲಿ. ಆವರು ನಮ್ಮರಾಜ್ಯದ ಗಡಿಯೊಳಕ್ಕೆ ಬರುತ್ತಿದ್ದ ಹಾಗೆಯೇ ನಮ್ಮ ದರ್ಬಾರದ ಸರ್ದಾರರಿಗೆ ಸಲ್ಲುವಂಥ ಮರ್ಯಾದೆಗಳನ್ನು ಆವರಿಗೆ ಸಲ್ಲಿಸಿ ಕರೆತರಬೇಕು ಎಂತಾ ಹುಕುಂ ಕಳಿಸಿಕೊಡಿ” “ಜೋಹುಕುಂ, ಖಾವಂದ್‌.?

“ಸೆಟ್ಟಿಸಾಹೇಬರಿಗೆ ನಮ್ಮಿಂದ ಬಹಳ‌ ತಕಲೀಫ್‌ ಅಯಿತು. ಮಾಫಿ ಕೊಡಬೇಕು. ಮಿಕ್ಕ ಎಲ್ಲಾ ವಿಚಾರ ಆಮೆಲೆ ಮಾತಾಡೋಣ. ನಮ್ಮ ಮನಸ್ಸಿನಲ್ಲಿದ್ದ ಭಾರ ಮಾಯವಾಯಿತು. ದಿವಾನ್‌ಸಾಹೇಬ್‌, ಸೆಟ್ಟಿ ಸಾಹೇಬ್‌ರವರು ನಾಳೆಯದಿನ ಸಂಗೀತಕ್ಕೆ ಬರಬೇಕು. ವಿಜಯನಗರದ ರಾಯಭಾರಿಗಳು ಇಬ್ಬರು ಇರುವುದನ್ನು ನಾಳೆ ದರ್‍ಬಾರಿಗಳೆಲ್ಲ ನೋಡಲಿ.”

ಮರುದಿನ ಬೀದರ್‌, ಅಹಮ್ಮದ್‌ ನಗರದ ರಾಯಭಾರಿಗಳಿಗೆ ಸುಲ್ತಾನ ರಿಂದ ವಿಶೇಷ ಆಹ್ವಾನ ಬಂತು. ರಾಯಭಾರಿಗಳು ತಮ್ಮ ಕಾರ್ಯಭಾರವನ್ನು ಸುಲ್ತಾನರಿಗೆ ಅರಿಕೆ ಮಾಡಿದರು. ಸುಲತಾನರು ವಿಶೇಷ ಸಾವಧಾನದಿಂದ ಎಲ್ಲವನ್ನೂ ಲಾಲಿಸಿದರು. “‍ಷಿಕಾರಿಗೆ ಹೋಗೋಣ. ನಾಡಿದ್ದು ನಾವು ಉತ್ತರ ಕೊಡುತ್ತೇವೆ.”

ರಾಯಭಾರಿಗಳು ಬಿನ್ನೈಸಿದರು. “ಖಾವುಂದ್‌, ಈ ವಿಜಯನಗ ದವರು ನಮ್ಮ ಐವರು ಸುಲ್ತಾನರಲ್ಲಿ ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟಿ ನಮ್ಮನಮ್ಮಲ್ಲಿ ನಾವು ನಾವು ಕಾದಾಡಿಕೊಂಡು ಇರುವಾಗ ತಾವು ಸುಖವಾಗಿ ದ್ದಾರೆ. ಇತ್ತಕಡೆ ಕೊಂಡವೀಡು ರಾಜ್ಯವನ್ನು ತೆಗೆದುಕೊಂಡರು. ವಿಜಯ ನಗರದ ಪ್ರಜೆಗಳೆಲ್ಲ “ನಮ್ಮ ರಾಯರು ಮನಸ್ಸುಮಾಡಿದರೆ ಬಹಮನೀ ಸುಲ್ತಾನ ರನ್ನೆಲ್ಲಾ ಏಕ್‌ದಂ ಮಟ್ಟ ಹಾಕಬಲ್ಲರು. ಏನೋ ಬಿಟ್ಟುಕೊಂಡು ಬರುತ್ತಿ ದ್ದಾರೆ’ ಎನ್ನುತ್ತಿದ್ದಾರೆ. ಈಗ ವಿಂಧ್ಯಪರ್‍ವತದ ಉತ್ತರ ರಾಜ್ಯವೆಲ್ಲ ಮುಸಲ್ಮಾ ನರದು ಆಗಿದೆ. ಇತ್ತಲಾಗಿ ಪಶ್ಚಿಮುಬಂಗಾಳದಲ್ಲಿಯೂ ಪಠಾನರ ರಾಜ್ಯವಾ ಯಿತು. ಇನ್ನು ಉಳಿದಿರುವುದು ಆರಾವಳಿ ಬೆಟ್ಟಗಳ ರಜಪೂತಸ್ತಾನ. ದಕ್ಷಿಣ ದಲ್ಲಿ ವಿಜಯನಗರ. ಅದನ್ನು ಗೆಲ್ಲುವುದಕ್ಕೆ ತಮಗೂ, ಬಿಜಾಪುರದವರಿಗೂ ಏನು ಮದತ್‌ ಮಾಡುವುದಕ್ಕೂ ನಾವು ಮೂವರು ಸುಲ್ತಾನರೂ ಸಿದ್ದರಾಗಿದ್ದೇವೆ. ಇದೋ, ನಮ್ಮ ಮಾತಿಗೆ ದುಸರಾ ಹೇಳುವುದಿಲ್ಲವೆಂದು ಬೀರಾರಿನ ಸುಲ್ತಾನರು ಬರೆದಿರುವ ಪತ್ರ. ಹಿಂದೆ ಖಿಲ್ಜಿ ದಳವಾಯಿ ಮಲ್ಲಿಕ್‌ ಕಾಫರನು ಮಾಡಿದಂತೆ ಈಗ ನಾವೂ ಮಾಡಬೇಕು. ಖಾವಂದರು ಮನಸ್ಸುಮಾಡಿದರೆ, ತಾವೇ ದಳವಾಯಿಗಳಾಗಬಹುದು. ಈ ವಿಜಯನಗರವನ್ನು ಗೆದ್ದರೆ, ವಿಜಯ ನಗರದಿಂದ ನೇರವಾಗಿ ದಕ್ಷಿಣಕ್ಕೆ ಒಂದು ಗೆರೆಯನ್ನು ಎಳೆಯುವುದು. ಆ ಗೆರೆಯ ಪಶ್ಚಿಮದ ರಾಜ್ಯವೆಲ್ಲ ಬಿಜಾಪುರಕ್ಕೆ ; ಪೂರ್ವದ ರಾಜ್ಯವೆಲ್ಲ ಗೋಲ್ಕೊಂಡಕ್ಕೆ. ಪೂರ್ವದಲ್ಲಿರುವ ಕೊಂಡವೀಡು ರಾಜ್ಯವು ಬೀದರ್‌ಗೆ ಸೇರಿ, ರಾಜಮಂದಿರಿ, ಮಚ್ಚೆಲೀ ಬಂದರ್‌, ಇವೆಲ್ಲಾ ಅವರಿಗೆ. ಅಹಮ್ಮದ ನಗರಕ್ಕೆ ಸಮುದ್ರತೀರದ ರಾಜ್ಯ ಸಾಕು. ಆದೂ ನಮ್ಮ ಮಕ್ಕಾಕ್ಕೆ ಹೋಗುವ ಮುಸಲ್ಮಾನರ ರಕ್ಷಣೆಗೋಸ್ಕರ ನಾವು ಆ ಕರಾವಳಿಯನ್ನು ಕೇಳುತ್ತಿದ್ದೇವೆ. ಬೀರಾರಿನವರು ಮುಂದೆ ಒರಿಸ್ಸಾ ಹಿಡಿಯಬೇಕೆಂದು ಆಶೆಪಡುತ್ತಿದ್ದಾರೆ. ಆವರಿಗೆ ಸಹಾಯಮಾಡುವುದಾಗಿ ನಾವು ಮಾತು ಕೊಡಬೇಕು. ಇದಿಷ್ಟು ಇಲ್ಲಿ ಆದರೆ ವಿಂಧ್ಯದ ಆಚೆ ಇರುವ ಮುಸಲ್ಮಾನೀ ರಾಜ್ಯದೊಡನೆ ಸೇರಿ ರಜಪೂತರನ್ನು ಮಟ್ಟ ಹಾಕುವುದು ಸುಲಭ. ಅಲ್ಲಿಗೆ ಸಾರೇ ಹಿಂದೂಸ್ಥಾನವೆಲ್ಲ ಮುಸಲ್ಮಾನರದೇ ಆಗಿಹೋಯಿತು. ಅದರಿಂದ ಖಾವಂದ್‌ರು ಈ ಕಾರ್ಯದಲ್ಲಿ ಮನಸ್ಸುಹಾಕಿ, ಒಪ್ಪಿಕೊಳ್ಳಬೇಕು ಎಂದು ಬಹಳ ವಿನಯದಿಂದ ಅಹಮ್ಮದ್‌ನಗರ, ಬೀದರ್‌ ಸುಲ್ತಾನರು ಸಲಾಂ ಮಾಡಿ ಹೇಳಿಕೊಳ್ಳುತ್ತಾರೆ.”

ಸುಲ್ತಾನರು ಸಮಾಧಾನದಿಂದ ಎಲ್ಲವನ್ನೂ ಕೇಳಿದರು. ಅವರಿಗೆ ಉತ್ತಮವಾದ ಖಿಲ್ಲತ್ತುಗಳನ್ನು ಕೊಡಿಸಿದರು. “ಸಲಹೆ ಬಹಳ ಚನ್ನಾಗಿದೆ. ನಾವೂ ಕೊಂಚ ಯೋಚನೆ ಮಾಡಬೇಕು. ನಾಳಿನ ದಿವಸ ಇಷ್ಟು ಹೊತ್ತಿಗೆ ಇಲ್ಲೇ ನಾವು ಉತ್ತರ ಕೊಡುತ್ತೇವೆ? ಎಂದು ಅಪ್ಪಣೆಮಾಡಿದರು.

ಮರುದಿನ ಹೊತ್ತಿಗೆ ಸರಿಯಾಗಿ ರಾಯಭಾರಿಗಳು ಬಂದು ಸುಲ್ತಾನರ ದರ್ಶನಮಾಡಿದರು. ಗೋಲ್ಕೊಂಡದ ದಿವಾನರೂ ಇದ್ದರು. ಸುಲ್ತಾನರು ಅಪ್ಪಣೆ ಕೊಡಿಸಿದರು. “ರಾಯಭಾರಿಗಳೇ, ನಮ್ಮ ಸುಲ್ತಾನ್‌ಬಾಂಧವರು ಅಪ್ಪಣೆ ಕೊಡಿಸಿರುವುದು ಬಹಳ ಸರಿ. ನಾವು ಐವರೂ ಸೇರಿದರೆ ವಿಜಯ ನಗರ ಉಳಿಯುವುದು ಕಷ್ಟ, ನಿಜ. ಈ ಯುದ್ಧದಲ್ಲಿ ಬಿಜಾಪುರ, ಗೋಲ್ಕೊಂಡ ದವರು ಮಾಡಬೇಕಾದ ಮೆಹನತ್ತು ಬಹಳ. ಅದಕ್ಕೇ ತಾವು ಗೆದ್ದರೆ ದಕ್ಷಿಣದ ರಾಜ್ಯವೆಲ್ಲ ಬಿಜಾಪುರ, ಗೋಲ್ಕೊಂಡಗಳಿಗೆ ಹಂಚುವುದಾಗಿ ಯೋಚಿ ಸಿದ್ದೀರಿ. ಅದೂ ಸರಿಯೆ. ಆದರೆ ತಾವು ಇನ್ನೊಂದು ಯೋಚಿಸಿಲ್ಲ. ನಮ್ಮಿಬ್ಬರಿಗೆ ರಾಜ್ಯ ಹಂಚಿಕೊಡುವುದಕ್ಕೆ ನೀವು ಮೂವರೂ ಈ ಯುದ್ದವನ್ನು ಹೂಡುವಿರಾ? ಅದು ಸಾಧ್ಯವಿಲ್ಲ. ಆದರಿಂದ ನೀವು ಮೂವರೂ ಈ ಯುದ್ದಕ್ಕೆ ಸಿದ್ಧರಾಗುವುದು ನಮ್ಮ ಮೇಲಿನ ಪ್ರೀತಿಯಿಂದಲ್ಲ; ಹಿಂದೂರಾಜರಮೇಲಿನ ದ್ವೇಷದಿಂದ. ಇದುವರೆಗೂ ನಮ್ಮೊಡನೆ ಮೈತ್ರಿಯಿಂದ ಇರುವವರು ಅವರು. ದ್ವೇಷದಿಂದ ಯುದ್ದಮಾಡುತ್ತಿರುನವರು ನೀವು. ನಾನು ಹೇಗೆ ಬಹುದಿನದ ಸ್ನೇಹಿತರನ್ನು ಬಿಟ್ಟ ನಿಮ್ಮನ್ನು ಸೇರುವುದು? ಇದರಮೇಲೆ ಸಾರೇ ಹಿಂದೂ ಸ್ಥಾನವನ್ನೆಲ್ಲಾ ಮುಸಲ್ಮಾನ್‌ ಮಾಡುವುದಾಗಿ ಹೇಳಿದಿರಿ. ಈಗ ಈಜಿಪ್ಟ್‌, ಅರೇಬಿಯಾ, ಇರಾನ್‌, ಇರಾಕ್‌, ಸಿರಿಯ, ಜಾರ್ಜಿಯ, ತುರ್ಕಿ, ಅಸ್ಸೀರಿಯಾ, ಅಬ್ಸೀನಿಯಾ, ಇವೆಲ್ಲ ಮುಸ್ಲಿಂ ರಾಜ್ಯಗಳು. ಇವೆಲ್ಲ ಮೈತ್ರಿಯಿಂದಿರುವವೆ ? ಇಂಡಿಯದಲ್ಲಿಯೇ ಮುಸ್ಲಿಂ ರಾಜ್ಯಗಳು ಒಂದಕ್ಕೊಂದು ವಿಶ್ವಾಸದಿಂದ ಇರುವವೆ ? ತಾವು ಮರೆತಿರಿ. ಪ್ರೀತಿಯಿಂದ ಒಟ್ಟುಗೂಡಬೇಕಾದರೆ ಶಾಂತಿ ಇರಬೇಕು. ಶಾಂತಿ ಬರಬೇಕಾದರೆ ಪ್ರೀತಿಯಿರಬೇಕು. ತಾವು ಹೇಳುವಂತೆ ದ್ವೇಷದಿಂದ ಕೂಡಿದರೆ, ಹಾಳುಮಾಡಬಹುದು. ಕಟ್ಟುವುದಕ್ಕೆ ಆಗುವುದಿಲ್ಲ. ಡೆಲ್ಲಿಯಲ್ಲಿಯೇ ಹೊಡೆದಾಡುತ್ತಿರುವವರು ಯಾರು ಯಾರು? ಹಿಂದೂ ಮುಸ್ಲೀಮರಲ್ಲ. ಬಾಬರ್‌ ಯಾರು? ಇಬ್ರಾಹಿಂ ಯಾರು? ಹುಮಾಯೂನ್‌ ಯಾರು? ಷೇರ್‌ ಖಾ ಯಾರು? ಸಾಲದೆ ನಿಮಗಿರುವಂತೆಯೇ ಡೆಲ್ಲಿಯಲ್ಲಿಯೂ ಆಸೆಯಿಲ್ಲವೆಂದು ನಿಮಗೆ ಯಾರು ಹೇಳಿದರು? ಸಾಲದೆ ಅವರಿಗೆ ಕಂದಹಾರಿನ ಪಠಾಣರು ಬೇಕೆಂದಾಗ ಬರುವುದಕ್ಕೆ ಸಿದ್ಧರಾಗಿದ್ದಾರೆ. ಹಿಂದೊಮ್ಮೆ ನೀವು ಹೇಳಿದಂತೆ ಮಲ್ಲಿಕ್‌ ಕಾಫರನು ಈ ದೇಶವೆಲ್ಲಾ ಸುತ್ತಿ ಸೂರೆ ಹೊಡೆದಿದ್ದಾನೆ. ನಿಜ. ಆದಕ್ಕೆ ಅಲ್ಲಾವುದ್ದೀನ್‌ಖಿಲ್ಜಿಯ ಮೋಸದಿಂದ ದೇವಗಿರಿ ಹೋದುದು; ಅವನ ಪ್ರತಾಪದಿಂದ ಅಲ್ಲ. ಮರೆಯಬೇಡಿ. ದೇವಗಿರಿ, ಓರಂಗಲ್‌, ಹೊಯ್ಸಳ ರಾಜ್ಯಗಳ ನಸೀಬ್‌ ಕೆಟ್ಟು ಆವು ಸೋತವೇ ಹೊರತು ಮಲ್ಲಿಕ್‌ಕಾಫರನು ಶೌರ್ಯದಿಂದ ಅವರನ್ನು ಗೆದ್ದನೇ? ಬರಿಯ ಶೌರ್ಯದಿಂದಲೇ ಎಲ್ಲಾ ಎನ್ನುವ ಹಾಗಿದ್ದರೆ, ಆನೆ, ಹುಲಿ ಇವು ಮನುಷ್ಯನಮೇಲೆ ರಾಜ್ಯ ಮಾಡಬೇಕಾಗಿತ್ತು. ಹಜರತ್‌ ಪೈಗಂಬರ್‌ ಸಾಹೇಬರ ಮುಖಾಂತರ ಖುದಾ ಮಾನವಕುಲಕ್ಕೆ ಇಸ್ಲಾಂ ಕೊಟ್ಟು ಆದನ್ನು ಕಾಪಾಡಿಕೊಳ್ಳುವುದಕ್ಕೆ ಕೊಟ್ಟ ಕತ್ತಿಗೆ ಮನುಷ್ಯ ಬಲಿಯಾಗಿ ಹೋದ. ಕತ್ತಿ ಚಲಾಯಿಸುವುದು ಕಲಿತು, ಮನಸ್ಸು ಇಸ್ಲಾಂ ಮರೆತು ಬಿಟ್ಟಿತು. ಅದರಿಂದ ನಮಗೆ ಯುದ್ಧ ಬೇಡ. ನಮಗೆ ಈಗ ಅಲ್ಲಾ ಕೊಟ್ಟಿರುವುದರಲ್ಲ ಏನೂ ಕಡಿಮೆಯಿಲ್ಲ. ನಾವುನಾವು ಮೊದಲು ಸುಖ ವಾಗಿರೋದು ಕಲಿತುಕೊಳ್ಳೋಣ. ತಾವು ಬಂದಿದ್ದೀರಿ. ತಮ್ಮ ಸುಲ್ತಾನರ ಕಡೆಯಿಂದ ಸ್ನೇಹದ ಹಸ್ತ ತಂದಿದ್ದೀರಿ. ನಮಗಿದು ಬಹಳ ಸಂತೋಷ. ಮೊದಲು ನಾವು ಐವರು ಸುಲ್ತಾನರೂ ಒಂದುಕಡೆ ಸೇರಿ, ಇನ್ನು ಹತ್ತು ವರ್ಷ ಒಬ್ಬರೊಡನೆ ಒಬ್ಬರು ಬೇಕಾದುದಾಗಲಿ ಯುದ್ಧ ಮಾಡುವುದಿಲ್ಲ ಎಂದು ಕರಾರು ಮಾಡಿಕೊಳ್ಳೋಣ ಬೇಕಾದರೆ ನಮ್ಮನಮ್ಮಲ್ಲಿ ನೆಂಟತನ ಬೆಳೆಸೋಣ. ಅದು ಮೊದಲು ಆಗಲಿ. ಅಮೇಲೆ ಬೇಕಾದುದು ಆಗಲಿ. ಇದಕ್ಕೆ ತಮಗೆ ಒಪ್ಪಿಗೆಯೇ ಹೇಳಿ. ಹೀಗೆ ಮಾಡಲು ತಮ್ಮತಮ್ಮ ಸುಲ್ತಾನರೂ ತಮಗೆ ಅಧಿಕಾರವನ್ನು ಕೊಟ್ಟಿದ್ದಾರೆಯೇ?”

ಅಹಮ್ಮದ್‌ನಗರದ ರಾಯಭಾರಿ ಐಊಸುಫ್‌ಖಾನರು ಮಾತನಾಡಿದರು. “ಖಾವಂದ್‌ ತಾವು ಅಪ್ಪಣೆಮಾಡುವುದು ಸರಿಯಾಗಿದೆ. ಬಹಮನೀ ಸುಲ್ತಾನರು ಇದುವರಿಗೆ ಸ್ನೇಹದಿಂದಿರಲಿಲ್ಲ. ಈಗ ಮೊದಲು ಈ ಸ್ನೇಹ ಏರ್‍ಪಟ್ಟು ಬಲವಾಗಲಿ, ಅನಂತರ ಏನು ಆಗಬೇಕೋ ಅದು ಆಗುತ್ತದೆ. ಈ ಸ್ನೇಹದ ಗುರುತಾಗಿ ನಮ್ಮ ಐವರು ಸುಲ್ತಾನರೂ ನೆಂಟತನ ಬೆಳೆಸಬೇಕು ಎಂಬ ತಮ್ಮಸಲಹೆ ಬಹಳಬಹಳ ಸರಿಯಾಗಿದೆ. ನಮ್ಮ ಸುಲ್ತಾನರು ನಮಗೆ ಪತ್ರಕೊಟ್ಟದ್ದಾರೆ, ಬೇಕಾದ್ದು ಮಾಡಿಕೊಂಡು ಎಂದು. ಆದರೆ ಅವರ ಮನಸ್ಸಿನಲ್ಲಿ ಯುದ್ಧದ ವಿಚಾರ ಇದ್ದುದು. ಅದರಿಂದ ಖಾವಂದರ ಹುಕುಂ ಆದರೆ ಮತ್ತೆ ಅಲ್ಲಿಗೆ ಹೋಗಿ ಈ ಹತ್ತುವರ್ಷದ ಸ್ನೇಹದಕರಾರು, ನೆಂಟತನದ ವಿಚಾರವಾಗಿ ಮಾತನಾಡಿಕೊಂಡು ಬರುತ್ತೇನೆ.”

ಸುಲ್ತಾನರು ಸರದಾರರ ಕಡೆ ನೋಡಿದರು. ಅವರು ಎದ್ದು ಮರ್ಯಾದೆ ಯಿಂದ ಸಲಾಂ ಮಾಡಿ ಹೇಳಿದರು, “ಖಾವಂದ್‌, ನಮ್ಮ ಸುಲ್ತಾನರೂ ನಮಗೆ ಪತ್ರ ಕೊಟ್ಟಿದ್ದಾರೆ. ಆದರೆ ನವಾಬ್‌ಸಾಹೇಬ್‌ರು ಅರಿಕೆಮಾಡಿ ದಂತೆ ಅದು ಯುದ್ಧಕ್ಕಾ ಕೊಟ್ಟುದು. ಈಗ ಖಾವಂದ್‌ರು ಅಪ್ಪಣೆಕೊಡಿ ಸಿರುವುದನ್ನು ಸುಲ್ತಾನರಿಗೆ ಒಪ್ಪಸಿ ಹುಕುಂ ತರಲು ಅಪ್ಪಣೆಯಾಗಬೇಕು.” ಸುಲ್ತಾನರು ಮತ್ತೆ ಮಾತನಾಡಿದರು. “ನವಾಬ್‌ಸಾಹೇಬ್‌, ಸರದಾರ್‌ ಸಾಹೇಬ್‌ಇನ್ನೂ ಒಂದು ಯೋಚನೆಮಾಡಿ. ಈ ಮೊಫಲ್‌ರಿಗೆ ಪಠಾನ್‌ರಿಗೆ ನಮ್ಮನ್ನೆಲ್ಲಾ ಕಂಡರೆ ಲಕ್ಷ್ಯವಿಲ್ಲ. ಅವರು ಮಾತ್ರ ಹಜರತ್‌ ಪೈಗಂಬರರಿಂದ ನೇರವಾಗಿ ಬಂದಹಾಗೆ, ನಾವೆಲ್ಲ ತಿಪ್ಪೆಯಲ್ಲಿ ಬಿದ್ದಿರುವ ಕಸದ ಹಾಗೆ ಅವರ ಭಾವನೆ. ಇನ್ನೂ ಒಂದು ಎಂಟು ಹತ್ತು ವರುಷ ಹೋದರೆ ಈ ಡೆಲ್ಲಿಯವರು ನಮ್ಮಮೇಲೆ ಬೀಳುವುದಿಲ್ಲ ಎಂದು ತಮಗೆ ನಂಬುಗೆಯುಂಟೇನು 1 ಈಗ ಇರುವಂತೆ ಅಲ್ಲಿ ದಂಗೆ ಪಿತೂರಿ ಆಗುತ್ತಿರುವವರೆಗೂ ನಮಗೆ ದಿಗಿಲಿಲ್ಲ ಆದರೆ ಆ ಡೆಲ್ಲಿಯಲ್ಲಿ ಯಾರೇ ಸುಲ್ತಾನರಾದರೂ ಸುಮ್ಮನೆ ಕೂತಿರಲು ಆಗುವುದಿಲ್ಲ. ಅಲ್ಲಿನ ದೊರೆತನಕ್ಕೆ ಯಾವಾಗಲೂ ಇನ್ನೊಬ್ಬರ ರಕ್ತಬೇಕು. ಅಂಥಾಕಾಲ ಬಂದು ಡೆಲ್ಲಿಯವರು ನಮ್ಮಮೇಲೆ ಬಂದರೆ, ನಮಗೊಬ್ಬರು. ದೋಸ್ತ್‌ ಇದ್ದರೆ ಒಳ್ಳೆಯದಲ್ಲ? ಅದನ್ನು ಯೋಚಿಸಬೇಕು ಎಂದು ನಾವು ಸಲಾಂ ಮಾಡಿದೆವು ಎಂದು ತಮ್ಮತಮ್ಮ ಸುಲ್ತಾನರಿಗೆ ಹೇಳಿ. ನಾವು ಯುದ್ಧಕ್ಕೆ ಬಿಲ್‌ ಖುಲ್‌ ಸಿದ್ಧವಿಲ್ಲ; ಸ್ನೇಹಕ್ಕೆ, ಶಾಂತಿಗೆ, ಸಂಪೂರ್ಣ ಸಿದ್ದ. ಇದನ್ನು ಅರಿಕೆಮಾಡಿ ಶಾಂತಿಯ ಕರಾರು ಮಾಡಿಸಿ.”

ಸುಲ್ತಾನರು ಮಾಡಬೇಕಾದ ಮರ್ಯಾದೆಗಳನ್ನೆಲ್ಲಾ ಮಾಡಿಸಿದರು. “ನಾಳಿದ್ದಿನಿಂದ ವಿಜಯನಗರದ ಗವಾಯ್‌ಗಳ ಕಚೇರಿಯಾಗುವುದು. ಇದ್ದು ಸಂಗೀತವನ್ನು ಕೇಳಿಕೊಂಡು ಹೋದರೆ ಬಹಳ ಸಂತೋಷ” ಎಂದು ತಾನೇ ಹೇಳಿದರು- “ರಾಯಭಾರಿಗಳು “ಖಾವಂದ್‌, ಮಾಫಿ ಕೊಡಬೇಕು. ಈಗ ತಾವು ನಮಗೆ ವಹಿಸಿರುವ ಕಾರ್ಯ ಬಹಳ ದೊಡ್ಡದು. ಹೋಗಿ ಇದನ್ನು ಸಾಧಿಸಿಕೊಂಡು ಬರುವ ಭಾರ ನಮ್ಮದು. ಅದರಿಂದ ನಮಗೆ ಅಪ್ಪಣೆ ಯಾಗಲಿ… ಗವಾಯ್‌ ಫಾಜಿಯುದ್ದೀನ್‌ ಸಾಹೇಬರು ಇಲ್ಲಿಯೇ ಇರುವರು “ ಎಂದು ರಾಜಮರ್ಯಾದೆಗಳನ್ನು ಸಲ್ಲಿಸಿ ಬೀಳ್ಕೊಂಡು ಹೋದರು.

ಮರುದಿನ ಭರತಾಚಾರ್ಯರು ಗೋಲ್ಕೊಂಡನಗರದ ಗಡಿಗೆ ಬಂದಿರುವು ದಾಗಿ ಸುದ್ದಿಬಂತು. ಸುಲ್ತಾನರ ದರ್ಬಾರ್‌ ಭಕ್ಷಿಯವರು, ವಿಜಯನಗರದ. ರಾಯಭಾರಿಗಳು, ಯಜಮಾನ್‌ ವೀರಪ್ಪಸೆಟ್ಟರು ಹೋಗಿ ಅವರನ್ನು ಎದುರು ಗೊಂಡು ಕರೆತಂದರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...