ಅಮರರಿಗೆ ಮೃತರ ಕಳೆ ಕಾಲನಿಗು ಮುಪ್ಪ ಕೆಳೆ
ಬಂದರೂ ನೀನಿರುವೆ ಚಿರಯೌವನೆ
ಚಿಂತೆಗಳ ಸಂತೆಯನೆ ಚಿತೆಯ ಮೇಲಿರಿಸುತ್ತ
ಎದೆಯೆದೆಯ ಚಿಗುರಿಸುವ ಚಿರನೂತನೆ!
ಬಾಳುವೆಯ ಜಟಿಲತೆಯು ಬಂಧುಗಳ ಕುಟಲತೆಯು
ಮನದ ಸಿಹಿಯನು ಹಿಸುಕಿ ಬಳಲಿಸಿರಲು
ಮಿಣುಕುಹುಳದೆಳನಗೆಯನೆದೆಯಗೂಡಲಿ ಬೆಳಗಿ
ಹೆಣವಾದ ಹರಣಗಳನುಜ್ಜೀವಿಪೆ!
ಯಾತನೆಯ ಯಾಮಿಸನಿಯಲಮರತಾರೆ!
ನಿಟ್ಟುಸಿರುಮನೆಯೊಳಗೆ ಬೆಳಗು ಬಾರೆ,
ಕಹಿ ಬಸಿರಿಗೂ ನಿನ್ನ ಸುಧೆಯ ತಾರೆ
ನಿನ್ನವೊಲು ಅಭಯವನು ನೀಡಲಿಹರೆ?
*****



















