ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ
ಮೂಲೋಕದೊಡೆತನವಿರಬಹುದು.
ತೆರೆದು ನೋಡಲೆ….? ಬೇಡ!
ಭಾಗ್ಯ ತೆರದ ಮೇಲೆ ಕೈ ತೆರೆವುದೇನು ತಡ ?

ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ
ಧ್ರುವನ ಚಿಕ್ಕೆಯಿರಬಹುದು!
ತೆರೆದು ನೋಡಲೆ….? ಬೇಡ !
ದೈವ ನೆರೆತ ಮೇಲೆ ಕೈ ತೆರೆದೇನು ತಡ ?

ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ
ಕುಬೇರನ ಸಂಪತ್ತಿಯಿರಬಹುದು.
ತೆರೆದು ನೋಡಲೆ….? ಬೇಡ !
ಕೊಡುಗೈ-ದೊರೆಯಾದ ಮೇಲೆ ಕೈ ತೆರೆವುದೇನು ತಡ ?

ನನ್ನ ಮಗುವಿನ ಮುಚ್ಚಿದ ಮಟ್ಟಿಗೆಯಲ್ಲಿ
ನವಶಕ್ತಿಗಳಿರಬಹುದು
ತೆರೆದು ನೋಡಿ….? ಬೇಡ !
ಅಂಗೈಯಲ್ಲಿರದಿದ್ದರೂ ಮುಂಗೈಯಲ್ಲಾದರೂ ಇರಬಹುದು.
*****