ಒಂದು ಕಂಬಳಿ ಹುಳು ತೆವಳಿಕೊಂಡು ಬಂದು ಬುದ್ಧನ ಪಾದ ಪದ್ಮದಲ್ಲಿ ಬಂದು ನಿಂತಿತು.
“ಬುದ್ಧ ದೇವ! ಈ ಕರಿ ಕಂಬಳಿ ನನ್ನ ಬಾಳಿಗೆ ಮುಸಿಕಿನ ತೆರೆಯಾಗಿದೆ. ಇದರ ಬಂಧನದಿಂದ ನನ್ನ ಮುಕ್ತನಾಗಿ ಮಾಡು” ಎಂದು ಆರ್ತವಾಗಿ ಬೇಡಿಕೊಂಡಿತು.
ಬುದ್ದ ಮುಗುಳು ನಗುತ್ತಾ ಇಂತೆಂದರು. “ಕಂಬಳಿಯ ತೆರೆ ಸರಿದು ಹೋದಾಗ ನಿನಗೆ ಚೆಲುವಾದ ಕಣ್ಣುಮೂಡುವುವು. ನಿನ್ನ ಬಣ್ಣದ ರೆಕ್ಕೆಯಲ್ಲಿ ಮುಕ್ತವಾಗಿ ಹಾರಿದಾಗ ನಿನಗೆ ನೋಡಲು ನಾನು ಮತ್ತಷ್ಟು ಕಣ್ಣುಗಳನ್ನು ರೆಕ್ಕೆಗಳಿಗೆ ಕೊಡುವೆ. ನಿನ್ನ ರೆಕ್ಕೆಯ ಮುಕ್ತ ಸ್ವಾತಂತ್ರದ ಜಾಗೃತಿಗಾಗಿ ಕಣ್ಣುಗಳನ್ನು ಇರಿಸಿದ್ದೇನೆ. ಮುಕ್ತತೆಯಿಂದ ಮುಕ್ತಿಯತ್ತ ಹಾರು, ನಿನ್ನ ನಿಜ ಊರು ಸೇರು.” ಎಂದು ಬುದ್ಧ ದೇವ ಹೇಳಲು ಕಂಬಳಿಹುಳು, ಚಿಟ್ಟೆಯಾಗಿ ಹಾರಿ ನಲಿದಾಡುತ್ತ ಆಕಾಶದ ಮುಕ್ತತೆಯಲಿ ಒಂದಾಯಿತು.
“ಬುದ್ಧಂ ಶರಣಂ ಗಚ್ಛಾಮಿ” ಎಂದು ಉಸಿರಿತು.
*****


















