ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು – ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ ಬುಸುಗುಟ್ಟಿ ಬರ...

ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ ಜೇಡನ ಸಮೇತ ಕಿತ್ತೆಸೆದಿರುವೆ ಬರುವುದಾದರೆ ಇಂದೆ ಬಂದುಬಿಡು ತೋರಣವಿಲ್ಲ ಬಾಗಿಲಿಗೆ ಹೊಸಿಲಲ್ಲಿಲ್ಲ ರಂಗೋಲಿ ಎಂದೆಲ್ಲ ಸಬೂಬುಬೇಡ ...

ಹಲವುಳಿದ ಅಶರೀರ ಹೆಣ್ಣು ಭ್ರೂಣಗಳ ಆಕ್ರಂದನ ಮಿಡಿವ ಎದೆ ನರಳಿ, ಮಿಕ್ಕವರಿಗೆ ಖಾಲಿ ಮೌನ ಅಮ್ಮಾ… ಅಮ್ಮಾ… ಗಾಳಿಯೊಡಲು ಸೀಳಿ ತೇಲಿ ಬರುವ ನೂರಾರು ಹೆಣ್ಣು ಉಲಿ. ಗರ್ಭದೊಳಗೇ ಜೀವ ಅಸ್ಪಷ್ಟ ರೂಪವಾದಂತೆ ಕೊಬ್ಬಿದ ಕುರಿಯ ಕಟುಕ ಕಚಕ್ಕನ...

ರಾತ್ರಿ ಎಲ್ಲರೂ ಮಲಗಿದ ಮೇಲೆ ಗುಟ್ಟಾಗಿ ನನ್ನ ಹಾಸಿಗೆಗೆ ಬಂದು ಸುಖಿಸಿ ಬೆಳಗಾಗುವಷ್ಟರಲ್ಲಿ ಮಂಗಮಾಯವಾಗುವುದರಲ್ಲೇನಿದೆ ಮಹಾ ಪೌರುಷ ಸವಿಗನಸೇ ನೀನೊಬ್ಬ ವಿಟ ಪುರುಷ. *****...

ಗೆಲವಿರಲಿ, ಬರದಿರಲಿ ಎದುರು ಸೋಲು ಎಲ್ಲೆಡೆಗು ನಡೆದಾಗ ಗೆಲುವೆ ಮುಂಬರಲಿ ಗೆಲುವಿನಾಶಯ ಜೀವ ಜಗದಿ ಮೇಲು ಸೋಲಿನಲ್ಲೇನಿಹುದು; ಗೆಲುವೆಮಗೆ ಕಾದಿರಲಿ ಒಲವು ಗೆಲವಿನೆಡೆಗೆ ಒಯ್ಯುತಲಿರಲಿ ತಿಳಿದಿರಲಿ; ಬರುವವೇನೋ ನೂರಾರು ಸೋಲುಗಳು ಕಲ್ಲು-ಮುಳ್ಳಿಲ್ಲ...

ನೂರು ಬಣ್ಣದಲಿ ಊರು ನಗುತಿರಲು ಗಿರಿಯ ತಪ್ಪಲಲ್ಲಿ ಬಾಳಿನ ಚೆಲುವನು ಹಸಿರು ಬರೆದಿರಲು ಬೆಟ್ಟದ ಮೈಯಲ್ಲಿ ಕೈಯ ಬೀಸಿ ಕರೆಯುತ್ತಿರೆ ಜೀವನ ಸಾವಿರ ಕೈಗಳಲಿ ಕಣವೂ ಚಲಿಸದೆ ಕಣ್ಣೇ ಹರಿಸದೆ ಕುಳಿತನಲ್ಲ ವೀರ ಯಾರೀ ದಿಟ್ಟ ಫಕೀರ? ಮಿಂಚು ಸಿಡಿಲು ಮಳೆಗಾಳ...

ತಾನೊಂದು ರಂಭೆ ಅಂದುಕೊಂಡಂತಿದೆ ನನ್ನ ಪಕ್ಕದ ಸೀಟಿನಾಕೆ ಪಾರ್ಲರ್ ದಿಂದ ನೇರ ವಿಮಾನಕ್ಕೇರಿದ ಮೂವತ್ತರ ಬೆಡಗಿ ಥೇಟ್ ಐಟಮ್ ಸಾಂಗ್ ಗರ್ಲ್ ಗುಲಾಬಿ ಬಣ್ಣ ತಲೆತುಂಬ ಹುಚ್ಚೆದ್ದ ಕೂದಲು ಉದ್ದನೆಯ ಉಗುರು ಮೇಲೆ ಕಪ್ಪುಬಣ್ಣ ಕೂತಲ್ಲಿ ಕೂರಲಾರೆ ನಿಂತಲ್...

ಕಾರುಣ್ಯದಾ ಬೆಳಕೆ ಬಾ ಬೇಗ ಬಾ ನನ್ನೆದೆಯ ಬಾಂದಳವ ಬೆಳಗಿಸಲು ಬಾ ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು ಮುಗಿಲಗಲ ಜಗಕೆಲ್ಲ ರಸವೃಷ್ಟಿ ಸುರಿಸು, ರವಿ ಶಶಿ ತಾರಾಹೊಳಪನ್ನು ನಮ್ಮ ಕಣ್ಣುಗಳೊಳಗಿರಿಸು, ಮೇ...

1...4041424344...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....