ಮೈಯೆ ಇಲ್ಲ, ಬರೀ ತಲೆ, ನೆತ್ತಿಗೆ ಜುಂಗಿನ ಬಿಗೀ ಬಲೆ. ನಾ ಯಾರೆಂದು ಹೇಳುವಿಯಾ, ಸೋತರೆ ಕಾಲಿಗೆ ಬೀಳುವಿಯಾ? ಮುಂಜಿ ಗಿಂಜಿ ಆಗಿಲ್ಲ ಜನಿವಾರಾನೇ ಹಾಕಿಲ್ಲ ಆದ್ರೂ ತಲೇಲಿ ಪಿಳ್ ಜುಟ್ಟು ಹೇಳ್ ನೋಡೋಣ ನನ್ನ ಗುಟ್ಟು? ದೇವರಿಗೋ ನಾ ಬಲು ಇಷ್ಟ ನನಗೋ ...

ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ ಬೀ...

ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು, ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ! ತನ್ನಲ್ಲಿ ತಾ ಸುಯಿಧಾನಿಯಾಗಿ ನೋಡಲರಿಯದೆ, ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು ಇನ್ನುಂಟೆಂದು ಅರಸುವ ಅಣ್ಣಗಳಿರಾ ನೀವು ಕೇಳಿರೋ, ಮನವು ಮಹದಲ...

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹ...

ಪ್ರಿಯ ಸಖಿ, ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ. ಗೀಜಗಕ್ಕೆ ...

ಹರೆ ಬಂದಿದೆ ನಮ್ಮೂರ ಕೆರೆಗೆ ಸುತ್ತ ಮುತ್ತ ಬೆಟ್ಟದ ಮಣ್ಣುತಿಂದು ನೀರು ಕುಡಿದು ಕೊಬ್ಬಿದ್ದಕ್ಕೇನೋ ಚಲ್ಲಾಟಕ್ಕೇನೋ ಸರಿ ಮೊನ್ನೆ ಮೊನ್ನೆ ಒಂದು ಹುಡುಗನ್ನ ಹಾರ ತಗೊಂಡು ನುಂಗಿ ನೀರು ಕುಡಿದು ಇಂಬಾಗಿ ಸುತ್ತ ಮುತ್ತಿನ ಹಸಿರು ತಲೆದಿಂಬಿಗೆ ತಲೆಯಿ...

ಎಲ್ಲರಿಗೂ ಒಂದೊಂದು ಚಾಳಿ ಇರುವುದಿಲ್ಲವೆ, ಹೇಳಿ. ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ ಅಮವಾಸ್ಯೆಯ ರಾತ್ರಿಗಳಲ್ಲಿ ಸುಮ್ಮನೇ ಅವನ ಮೌನಮುರಿಯುವ ಕಥಾವಳಿ. ಪ್ರಶ್ನೆಗಳನ್ನು ಹಾಕುತ್ತಲೇ ಸ...

ಸೂರ್ಯ ಏನಿದ್ರೂ ಡೇ ಟೈಂ ಕೆಲಸಗಾರ ಅವನಿಗೇನ್ರೀ ಗೊತ್ತು ರಾತ್ರಿ ಕಾವಲು ಸಮಾಚಾರ ಕಾರು ಲಾರಿ ಬಸ್ಸು ಟ್ರಕ್ಕು ಸದಾ ಕಣ್ಣು ಕುಕ್ಕುವ ಲೈಟು ಇಂಟರ್‌ನ್ಯಾಷನಲ್ ಫ್ಲೈಟು ಅನಾಚಾರ ಅತ್ಯಾಚಾರ ಕಳ್ಳರು, ಕಾಕರು, ಕುರುಡರು, ತಲೆಹಿಡುಕರು ಕಳವು ಕೊಲೆ ಸುಲ...

ಅತ್ತೆ ಸೊಸೆಯರು ಹಿತ್ತಲ ಮನೆಯಲ್ಲಿ ಒಂದಿಷ್ಟು ವಾದಿಸಾಡುತ್ತಿದ್ದರು. ಅಷ್ಟರಲ್ಲಿ ಹೊಲದಿಂದ ಮಗನು ಬಂದನೆಂದು ಅತ್ತೆ ಎದ್ದು ಹೋದಳು. ಮಗನಿಗೆ ಉಣಬಡಿಸಬೇಕಲ್ಲವೇ? ಊಟಕ್ಕೆ ಕುಳಿತ ಮಗನಿಗೆ ಉಣಬಡಿಸುತ್ತ ಹಗುರಾಗಿ ಎಳೆತೆಗೆದಳು ತಾಯಿ – &#822...

1...4344454647...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...