ಸೂರ್ಯ ಏನಿದ್ರೂ ಡೇ ಟೈಂ ಕೆಲಸಗಾರ
ಅವನಿಗೇನ್ರೀ ಗೊತ್ತು ರಾತ್ರಿ ಕಾವಲು ಸಮಾಚಾರ
ಕಾರು ಲಾರಿ ಬಸ್ಸು ಟ್ರಕ್ಕು ಸದಾ ಕಣ್ಣು ಕುಕ್ಕುವ ಲೈಟು
ಇಂಟರ್‌ನ್ಯಾಷನಲ್ ಫ್ಲೈಟು
ಅನಾಚಾರ ಅತ್ಯಾಚಾರ
ಕಳ್ಳರು, ಕಾಕರು, ಕುರುಡರು, ತಲೆಹಿಡುಕರು
ಕಳವು ಕೊಲೆ ಸುಲಿಗೆ ಹೆದ್ದಾರಿ ದರೋಡೆ
ಏನು ಒಂದೇ ಎರಡೆ
ರಾತ್ರಿ ಡ್ಯೂಟಿ ಮಾಡೋ ನನಗೇ ಗೊತ್ತು ನನ್ನ ಕಷ್ಟ
ಇದರ ಮೇಲೆ ನೀವೇನ್ ಬೇಕಾದ್ರೂ ಹೇಳೀಕೊಳ್ಳಿ ಅದು ನಿಮ್ಮಿಷ್ಟ.
*****