ಏನಾಗಿದೆ ನನಗೆ ಏನಾಗಿದೆ ನನಗೆ ಎಲ್ಲ ತೊರೆದು ಏಕೆ ಹೀಗೆ ಹಂಬಲಿಸುವೆ ಹರಿಗೆ? ಏನೇ ಇದು ಮಾತೇ ಇಲ್ಲ ಎನುವರು ಜೊತೆ ಸಖಿಯರು ಏನೇ ಮನೆ ಕಳುವಾಯಿತೆ ಎಂದು ಚುಚ್ಚಿ ನಗುವರು ಮನಗೆಲಸದಿ ಮನವಿಲ್ಲ, ಅಮ್ಮ ದಿನಾ ಬಯ್ವರು ಏಕೆ ಹರಿಗೆ ಕಾದು ಕಾದು ನಗೆಗೆ ಗ...

ಹೊತ್ತು ಹೊತ್ತಿಗೆ ಕಿಚ್ಚನೆ ಬರಿಸಿದರೆ, ಕಲೆ ಉರಿದುದೆಂದು, ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ, ತನುವ ಖಂಡಿಸದೆ, ಕಾಯವ ಮರಗಿಸದೆ, ಭಾವವನೆ ಬಯಲು ಮಾಡಿ, ಭವಕೆ ಸವೆದು, ಕಾಣದಪ್ತತವನೆ ಕಂಡು, ಮಹಾಬೆಳಗಿನಲಿ ಬಯಲಾದರು ಕಾಣಾ ...

ಆಯ್ದು ತಿನ್ನುವ ಕೋಳಿಗಳ ಕಾಲು ಕುತ್ತಿಗೆಗಳು ಯಾವಾಗ ಮುರಿದಾವು ಎಂದು ಹೇಳಲಾಸಲ್ಲ ಯಾವ ಹಣ ರಣಹದ್ದುಗಳ ಬಾಯಿಗೆ ನಮ್ಮ ಹೀಚು ಹೂಮೊಗ್ಗುಗಳು ಸಿಕ್ಕಾವು ಹೇಳಲಾಸಲ್ಲ ರಕ್ಕಸ ಬೀದಿಗಳಲ್ಲಿ ಯಮಲೋಕದ ಬಾಗಿಲುಗಳ ಮುಂದೆ ಸುಳಿದಾಟ ಆರಡಿ ನೆಲಗಳಿಗೆ, ನಾಲ್ಕ...

ಪ್ರಿಯ ಸಖಿ, ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆ ಮನೆಗಳಿಗೆ ಧಾಳಿಯಿಟ್ಟಾಗಿನಿಂದ ಮನೆಮಂದಿಯ ಊಟ, ತಿಂಡಿ ಎಲ್ಲ ಅದರ ಮುಂದೆಯೇ! ಹಲವಾರು ಕಾರಣಗಳಿಗೆ ಅದು ಮೂರ್ಖರ ಪೆಟ್ಟಿಗೆಯೇ ಆದರೂ ಎಲ್ಲೋ ನಡೆದ ಘೋರವನ್ನು, ದುರಂತವನ್ನು ಇದ್ದದ್ದು ಇದ್ದಂತೆ ನಮ್ಮ...

ಯಾಕಷ್ಟೊಂದು ನಿರ್ಲಿಪ್ತತೆ ಅದೇನು ಜೋಲುಮುಖ ಪೆನ್ನಿಗೆ ರಿಫಿಲ್ ಇಲ್ಲವೆ, ಬಿಳಿ ಹಾಳೆ, ಇಂಬು ಟೇಬಲ್‌ಗೆ, ಏನಾದರೂ ಯಾತನೆಯೆ? ತೊಯ್ದ ಹೂವು ಗಿಡಗಳ ಪಿಸುಮಾತು ಅದರೊಳಗಿನ ಮಳೆಹನಿಯ ಸಡಗರ ಹ್ಯಾಂಗರಿಗೆ ಹಾಕಿದ ಕಸೂತಿ ಸೀರೆ ಕರವಸ್ತ್ರದಂಚಿನ ಗೋದಿಚಿಕ...

ಹೆಸರು ಪರಪುಂಜನ ಪರಕಾಯ ಪ್ರವೇಶ ಹಿಂದೆ ಅಂಥ ಹೆಸರಿನ ಒಬ್ಬ ರಾಜ ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ ಸನ್ಯಾಸಿಯೊಬ್ಬನ ದೇಹವನ್ನು ಸೇರುವನು. ವಿದೂಷಕನೊ ಎಲ್ಲ ವ...

ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ ಒಂದಾಗಿರಬೇಕು, ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ ಆಲ್ಕೋಹಾಲಿಕ್ಕು, ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ ಹುಣ್ಣಿಮೆಗಳ ಮಧ್ಯೆ ತೊಳಲಾಡೋ ಅಬ್‌ನಾರ್ಮಲ್ ಡಿಪ್ರೆಸ...

ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...