ಯಾಕಷ್ಟೊಂದು ನಿರ್ಲಿಪ್ತತೆ
ಅದೇನು ಜೋಲುಮುಖ
ಪೆನ್ನಿಗೆ ರಿಫಿಲ್ ಇಲ್ಲವೆ,
ಬಿಳಿ ಹಾಳೆ, ಇಂಬು ಟೇಬಲ್‌ಗೆ,
ಏನಾದರೂ ಯಾತನೆಯೆ?

ತೊಯ್ದ ಹೂವು ಗಿಡಗಳ ಪಿಸುಮಾತು
ಅದರೊಳಗಿನ ಮಳೆಹನಿಯ ಸಡಗರ
ಹ್ಯಾಂಗರಿಗೆ ಹಾಕಿದ ಕಸೂತಿ ಸೀರೆ
ಕರವಸ್ತ್ರದಂಚಿನ ಗೋದಿಚಿಕ್ಕೆಗಳ ನಗು
ರಾತ್ರಿ ನಿರಮ್ಮಳತೆಗೆ ಮುಗ್ದಮಗು
ಹಗಲು ವಿಚಾರಗಳ ಸರಣಿ
ಮುಂಗಾರು ಸಿಡಿಲು ಗುಡುಗು ಮಳೆಗೂ ಹೆದರದ
ಕಿಡಕಿಯಾಚೆ ಬೋಳುಮರಗಳಲಿ
ಚಿಗುರೊಡೆಯುವ ಸಂಭ್ರಮ.

ಕಣ್ಣಿಗೆ ಮಿನುಗು ತಾರೆಗಳು ತುಂಬಿ
ತಲೆಗೆ ಸೂರ್ಯ ಚಂದ್ರರನು ತೂರುತ
ನೀನು ಹೀಗೆಯೇ ಹೇಳುತ್ತಿರಬೇಕೆಂದುಕೊಳ್ಳುತ್ತೇನೆ.
*****