ಶ್ರೀ ಎಚ್. ಡಿ. ದೇವೇಗೌಡ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿ

ಶ್ರೀ ಎಚ್. ಡಿ. ದೇವೇಗೌಡ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿ

ಚಿತ್ರ: ವಿಕಿಮೀಡಿಯ ಕಾಮನ್ಸ್

೧.೬.೧೯೯೬ರಂದು ಬೆಳಗ್ಗೆ ೧೧ ಘಂಟೆಗೆ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಮಂತ್ರಿಯಾಗಿ ಶ್ರೀ ದೇವೇಗೌಡರು ಅಧಿಕಾರವಹಿಸಿಕೊಂಡ ಎಲ್ಲ ಕನ್ನಡಿಗರಿಗೂ ಮಹತ್ತ್ವದ ಕ್ಷಣ. ಕೇಂದ್ರದಲ್ಲಿ ಹಿರಿಯ ಕನ್ನಡಿಗ ಮಂತ್ರಿಗಳ ಅಭಾವವು ದೀರ್ಘಕಾಲ ಇದ್ದದ್ದರಿಂದ ಕರ್ನಾಟಕವು ಕೇಂದ್ರದ ಔದಾಸೀನ್ಯಕ್ಕೆ ಈಡಾಗಿತ್ತು. ಆದ್ದರಿಂದ ಯಾವಾಗ ಒಬ್ಬ ಬಲಶಾಲಿ ಕನ್ನಡಿಗ ಪ್ರಧಾನ ಮಂತ್ರಿಯಾದರೋ ಆಗ ಕನ್ನಡ ಜನರಿಗೆ ೨೦ನೇ ಶತಮಾನದ ಒಂದು ಉತ್ತಮ ಸಾಧನೆಯಾಯಿತು. ೨೧ನೇ ಶತಮಾನದಲ್ಲಿ ಮತ್ತೆ ಕನ್ನಡಿಗ ಪ್ರಧಾನಿಯನ್ನು ಪಡೆಯುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡ ಪಕ್ಷಕ್ಕೆ ಸೇರಿದ ಕರ್ನಾಟಕದ ಸಂಸತ್ ಸದಸ್ಯರ ಸಂಖ್ಯೆ ಕಡಿಮೆಯಾದ ಕಾರಣ ಕನ್ನಡಿಗ ರಾಜಕಾರಣಿಗಳಿಗೆ ಸಂಪುಟದರ್ಜೆಯ ಸಚಿವ ಸ್ಥಾನಗಳು ಸಿಗುವುದೂ ಕೂಡ ಬಹಳ ಕಷ್ಪವಾಗಿದೆ.

ಶ್ರೀ. ದೇವೇಗೌಡರು ಅವರು ಪ್ರಧಾನಿಯಾಗಿ ಕರ್ನಾಟಕಕ್ಕೆ ಹಲವಾರು ಅಭಿವೃದ್ಧಿಯ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ.

ಪ್ರಧಾನಿಗಳ ಪರೀಕ್ಷೆ ಮತ್ತು ಅನುಮೋದನೆಗಳ ಅಗತ್ಯವಿದ್ದ ದೊಡ್ಡ ಯೋಜನೆಗಳು ಅವು. ಅವರ ಆತ್ಮಚರಿತೆಯ ಪುಸ್ತಕ ಬಿಡುಗಡೆಯಾದಾಗ ಅದು ಸರಿಯಾಗಿಯೂ ಪೂರ್ಣವಾಗಿಯೂ ವಿದಿತವಾಗುತ್ತದೆ. ಇದೊಂದು ಒಳ್ಳೆಯ ಪುಸ್ತಕವಾಗುತ್ತದೆ ಮತ್ತು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಇಟ್ಟುಕೊಳ್ಳುವಂತಹದಾಗುತ್ತದೆ. ಆದರೆ ಉತ್ತರ ಭಾರತದ ರಾಜಕೀಯ ಒಳಸಂಚಿನ ಕಾರಣ ಶ್ರೀ ಎಚ್. ಡಿ. ದೇವೇಗೌಡರು ೫ ವರ್ಷದ ಪೂರ್ಣಾವಧಿಗೆ ಮುಂದುವರಿಯಲಾಗಲಿಲ್ಲ. ಕರ್ನಾಟಕ ಮತ್ತು ಕನ್ನಡಿಗರು ತುಂಬ ಅದೃಷ್ಟಹೀನರು. ಅವರು ೫ ವರ್ಷದ ಪೂರ್ಣಾವಧಿಗೆ ಮುಂದುವರಿದಿದ್ದರೆ ಶ್ರೀ ದೇವೇಗೌಡರು ಕರ್ನಾಟಕ ರಾಜ್ಯಕ್ಕೆ ಭವ್ಯ ಸ್ವರ್ಣಯುಗವನ್ನು ಸೃಷ್ಟಿಸುತ್ತಿದ್ದರು. ಕರ್ನಾಟಕರಾಜ್ಯವು ಕೃಷಿಕ್ಷೇತ್ರದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರದ ಪ್ರಥಮ ರಾಜ್ಯವಾಗುತ್ತಿತ್ತು. ಶ್ರೀ ದೇವೇಗೌಡರು ಮಂಜೂರು ಮಾಡಿದ ಬೆಂಗಳೂರು- ಹಾಸನ ಸೂಪರ್‌ಫಾಸ್ಟ್‌ ರೈಲ್ವೇ ಮಾರ್ಗವು ಅವರು ಪೂರ್ಣಾವಧಿಗೆ ಅಂದರೆ ೧.೬.೨೦೦೧ರ ವರೆಗೆ ಮುಂದುವರಿದಿದ್ದರೆ ೧.೧.೨೦೦೧ರ ಹೊತ್ತಿಗೆ ಉಪಯೋಗಕ್ಕೆ ಸಿದ್ದವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ೧೨ ವರ್ಷಗಳಾದ ಮೇಲೂ ಅತಿ ನಿಧಾನಗತಿಯಲ್ಲಿದೆ. ಅವರ ಪ್ರಧಾನಿ ಸ್ಥಾನದ ಅಲ್ಪಾವಧಿಯ ನಿಮಿತ್ತ ಕರ್ನಾಟಕವು ಹಲವಾರು ಮುಖ್ಯ ಯೋಜನೆಗಳನ್ನು ಕಳೆದುಕೊಂಡಿತು.

ಶ್ರೀ ದೇವೇಗೌಡರು ದೈವಭಕ್ತರು. ಅವರಿಗೆ ಭಾರತದ ಎಲ್ಲ ಮಹಾದೇವಾಲಯಗಳ ಎಲ್ಲ ದೇವತೆಗಳ ಕೃಪೆಯೂ ಇದೆ. ಅವರು ದೇವರಿಗೆ ಹತ್ತಿರವಿರುವ ಕಾರಣ ಅವರಿಗೆ ಹಲವಾರು ವರಗಳಿವೆ. ಆದರೆ ಆ ವರಗಳು ಅವರಿಗೆ ಹಳ್ಳಿಗಳಿಗೆ ಸಂಬಂಧಪಟ್ಟಂತೆ ಇವೆ. ಈ ಸಂದರ್ಭದಲ್ಲಿ ಅವರು ಬೆಂಗಳೂರು ನಿರ್ಗಮನ ನಿರ್ಧರಿಸಿದರು. ರಾಜಕೀಯಕ್ಕೆ ಅಷ್ಟೆ. (ಗ್ರಾಮಕ್ಕೆ ಆದ್ಯತೆ ಕೊಡುವ ಹೊಸ ರಾಜಕೀಯ ಸಿದ್ಧಾಂತಕ್ಕೆ ಇದು ಹೊಸಪದವಾಗಿರುವುದು. ರಾಜಕೀಯಕ್ಕೆ ಅಷ್ಟೆ. ಅದರಲ್ಲಿ ಯಾವ ನಿರ್ಗಮನವೂ ಇಲ್ಲ.) ನಾನು ಕರ್ನಾಟಕದ ಹಲವು ಹಳ್ಳಿಗಳನ್ನು ನೋಡಿದ್ದೇನೆ. ಅವುಗಳು ಬಹಳ ಅವ್ಯವಸ್ಥಿತವಾಗಿ ಯೋಜಿಸಲ್ಪಟ್ಟಿವೆ. ಅವುಗಳನ್ನು ಶೀಘ್ರವಾಗಿ ಸುಧಾರಿಸಬೇಕಾಗಿದೆ. ಹಳ್ಳಿಗಳಲ್ಲಿ ಈಗಿನ ಕೆಟ್ಟಪರಿಸ್ಥಿತಿಯಲ್ಲೂ ಒಳ್ಳೆಯ ಬದಲಾವಣೆಯಾಗುವುದೇ ಎಂದು ನಮಗೆ ತಿಳಿಯದು. ‘ಮಣ್ಣಿನ ಮಗ’ನಾಗಿ ಶ್ರೀ ದೇವೇಗೌಡರಿಗೆ ಮಾತ್ರ ಉತ್ತಮ ಗ್ರಾಮ ಹೇಗಿರಬೇಕೆಂದು ಗೊತ್ತಿರುವುದರ ನಿಮಿತ್ತ ಅವರು ಬದಲಾವಣೆಯನ್ನು ತರುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿತಿ – ಗತಿ
Next post ಹೂವು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…