ವಾಗ್ದೇವಿ – ೨೮

ವಾಗ್ದೇವಿ – ೨೮

ಭೋಜನವಾದ ಮೇಲೆ ಅಪರಾಜಿತನು ವೇದವ್ಯಾಸನನ್ನು ಕಟ್ಟಿ ಕೊಂಡು ಬೀದಿ ಬೀದಿಯಲ್ಲಿ ಕಾಣಸಿಕ್ಕಿದವರ ಕೂಡೆ–“ಇಗೋ ಚಂಚಲ ನೇತ್ರರ ಛಟ ಹಾರಿಸಿ ಬಿಡುತ್ತೇನೆ. ಬ್ರಹ್ಮಸಭೆ ಕೂಡಿಸಿ ಉಪನಯನವಾಗ ದಂತೆ ಕಟ್ಟು ಮಾಡಿಸಿಬಿಡುತ್ತೇನೆ. ಫಸಾದ ಮಾಡಲಿಕ್ಕೆ ನೋಡುವವರನ್ನು ಕೊತ್ವಾಲರಿಂದ ಕೋಳ ಹಾಕಿಸಿ ಬಿಡುತ್ತೇನೆ. ಸ್ವಯಂಜ್ಯೋತಿ ಗುರುಗಳ ಅಪ್ಸಣೆಗನುಸರಿಸಿ ವೇದವ್ಯಾಸನ ಸಹಾಯಕ್ಕೆ ಬಂದ ಅಪರಾಜಿತ ಸೆಟ್ಟಿ ಎಂದರೆ ನಾನೇ” ಎಂದು ಮೀಸೆಯನ್ನು ಎಳೆಯಲಿಕ್ಕೆ ಪ್ರಾರಂಭಿಸಿದನು. ಒಂದೆರಡು ತಾಸಿನಲ್ಲಿ ಈ ವರದಿ ಊರಳ್ಗೆಲ್ಲಾ ಹಬ್ಬಿತು. ಅನು ಚಂಚಲ ನೇತ್ರರ ಕಿವಿಗೂ ಬಿತ್ತು. ವಾಗ್ದೇವಿಗೂ ಅದು ತಿಳಿಯಿತು. ಉಪನಯನಕ್ಕೆ ಇನ್ನು ಒಂದೇ ವಾರ ಉಳಿಯಿತು. ದುಸ್ಮಾನರು ತಮ್ಮ ಗುಂಡಾಂತರ ಮಾಡ ಲಿಕ್ಕೆ ನೋಡುವರೆಂದು ಅವರಿಬ್ಬರೂ ಬಹಳ ವಿಲಾಪ ಮಾಡಿದರು. ಶ್ರೀಪಾ ದಂಗಳು ವೆಂಕಟಪತಿ ಆಚಾರ್ಯನನ್ನು ಕರೇ ಕಳುಹಿದರು. ಪಾರುಪತ್ಯ ಗಾರನು ಅಂದು ಆಪರಾಜಿತನು ಹುಟ್ಟಿಸಿದ ಗಾಬರಿ ಕೇಳಿ, ಮಠದ ಕಡೆಗೆ ಬರುವವನಾಗಿದ್ದನು. ಶುಭ ಕೆಲಸಕ್ಕೆ ವಿಘ್ನಬರುವ ಸಂಭವವಿದೆ ಎಂಬ ಚಿಂತೆಯಲ್ಲಿರುವ ಧನಿಯ ಮುಖವನ್ನು ನೋಡಿ ವೆಂಕಟಪತಿಯು ಅವರಿಗೆ ಚೆನ್ನಾಗಿ ಧೈರ್ಯಹೇಳಿದನು. “ವೇದವ್ಯಾಸನನ್ನೆತ್ತಿ ಕೊಂಡ ಈ ಹೊಸ ವೀರನ್ಯಾರಪ್ಪಾ, ವೆಂಕಟಪತಿ ಸ್ವಲ್ಪ ಹೇಳು ಎಂದು ಚಂಚಲನೇತ್ರರು ಕೇಳಿದಾಗ “ಪರಾಕೆ, ಅವನು ಬಿಳೀ ಕಾಗೆಯಲ್ಲ. ಶುದ್ಧ ಡಬ್ಬುಗಾರ; ವೇದವ್ಯಾಸನ ಮೇಲೆ ಪ್ರೀತಿಯುಳ್ಳವನಲ್ಲ. ಅವನಿಗೆ ಸಹಾಯ ಮಾಡುನ ನೆವನ ದಿಂದ ಕೈಗೆ ದುಡ್ಡು ಹತ್ತುವ ಉಪಾಯ ಮಾಡಲಿಕ್ಕೆ ಬಂದವನಾಗಿರಬೇಕು? ಎಂದು ವೆಂಕಟಪತಿಯು ಉತ್ತರಕೊಟ್ಟನು. ಆದಾಗ್ಯೂ ಚಂಚಲನೇತ್ರರಿಗೆ ಹತ್ತಿದ ದಿಗಿಲು ಪೂರ್ಣವಾಗಿ ನಿವಾರಣೆಯಾಗದೆ, ಪಾರುಪತ್ಯಗಾರನನ್ನು ಹತ್ತಿರ ಕರೆದು “ದುಡ್ಡು ವೆಚ್ಚವಾದರೂ ಪರ್ವಾಯಿಲ್ಲ. ಈ ಡಾಂಭಿಕ ಸೆಟ್ಟ ಯನ್ನು ಒಲಿಸು. ಜಾಫ್ಯ ಮಾಡಲಾಗದು” ಒಂದು ಅಪ್ಪಣೆ ಕೊಟ್ಟರು. ವೆಂಕಟಪತಿಯು ಹೊರಟು ಕುಮುದಪುರದ ಸೆಟ್ಟಿಗಳ ಪೇಟೆಯಲ್ಲಿ ವ್ಯಾಪಾರ ಮಾಡುವ ದೊಡ್ಡ ಸಾಹುಕಾರ ನೇಮರಾಜ ಸೆಟ್ಟಿಯನ್ನು ಕಂಡು ಅಪರಾಜಿತನನ್ನು ಹೇಗಾದರೂ ತನ್ನ ಕೈವಶಮಾಡಿಕೊಡಬೇಕಾಗಿ ಅಪೇ ಕ್ಷಿಸಿ ಅದಕ್ಕೆ ಬೇಕಾದ ದ್ರವ್ಯಾನುಕೂಲ ಕೊಡಿಸಲಿಕ್ಕೆ ಸಮ್ಮತಿಸಿದನು.

ಅಪರಾಜಿತಸೆಟ್ಟಿಯೂ ವೇದವ್ಯಾಸನೂಕೈ ಕೈ ಹಿಡುಕೊಂಡು, ಪಟ್ಟಣ ವಾಸಿಗಳಾದ ಪ್ರಮುಖ ಬ್ರಾಹ್ಮಣರನ್ನು ಕಂಡು ಸೂರ್ಯನಾರಾಯಣನ ಉಪನಯನವು ತಡೆಯುವಂತೆ ಕಟ್ಟುಮಾಡುವ ವಿಷಯದಲ್ಲಿ ಅವರಿಗೆ ಹಲವು ತರದಲ್ಲಿ ದುರ್ಬೋಧನೆ ಕೊಟ್ಟರು. ಕೆಲವರು ತಮಗ್ಯಾಕೆಂದು ತಲೆಹಂದಿ ಸಿದರು. ಕೆಲವರ ಕಿವಿಗಳಿಗೆ ಸೆಟ್ಟಯ ಮಾತು ರಮ್ಯವಾಯಿತು. ಹ್ಯಾಗೂ ಮರುದಿವಸ ಅಂಜನೇಯಾಲಯದಲ್ಲಿ ಬ್ರಹ್ಮಸಭೆ ಕೂಡುವದಕ್ಕೆ ನಿಶ್ಚಯ ಮಾಡಿ, ಬ್ರಾಹ್ಮಣರ ಮನೆಗಳಿಗೆಲ್ಲ ಹೇಳಿಕೆಯಾಯಿತು. ವೇದವ್ಯಾಸನು ತನ್ನ ಆಶೆಯು ತೀರುವ ಕಾಲ ಬಂತೆಂದು ಹಾಸ್ಯವದನನಾಗಿ ತನ್ನ ಸ್ನೇಹ ತನ್ನ ಪರಾಕ್ರಮವನ್ನು ಹೆಂಡತಿಯ ಮುಂಡೆ ವರ್ಣಿಸಲಿಕ್ಟೆ ತೊಡಗಿದನು. ಅವಳು ಪತಿಯ ಬುದ್ಧಿಗೆ ಮೆಚ್ಚದೆ, ಅವನು ಕೈಕೊಂಡ ಕಾರ್ಯವು ಯಶಸ್ಕರ ವಾದದ್ದಲ್ಲವೆಂದು ದುಮ್ಮಾನ ತಾಳಿದಳು. ಮತ್ತು ಬಾಯಿಬಿಟ್ಟು ಗಂಡಗೆ ಹಾಗೆಯೇ ಹೇಳಿದಳು. ಅವನು ಅವಳ ಮಾತು ಗಣ್ಯಮಾಡಲಿಲ್ಲ. ಹೆಚ್ಚು ಮಾತಾಡಿದರೆಸತಿಯು ಸಿಟ್ಟುತಾಳುವನೆಂಬ ಭಯದಿಂದ ಅವಳು ಚಿಂತಾ ತುರಳಾಗಿ ಸುಮ್ಮಗಿದ್ದು ಕೊಂಡಳು.

ಸಾಯಂಕಾಲವಾಯಿತು. ಅಪರಾಜಿತಸೆಟ್ಟಿಯು ಬಿಡಾರ ಸೇರುವದಕ್ಕೆ ಹೊರಟಾಗ ದಾರಿಯಲ್ಲಿ ನೇಮರಾಜಸೆಟ್ಟಿಯ ಚಾಕರನೊಬ್ಬನು ಅನನನ್ನು ಕಂಡು ರಾತ್ರೆಭೋಜನಕ್ಕೆ ತನ್ನ ಧನಿಯ ಮನೆಗೆ ದಯಮಾಡಬೇಕೆಂದು ಅವರ ಅಪೇಕ್ಷೆ ಅದೆ ಎಂದನು. ಅಪರಾಜಿತನು ಹೆಕ್ಕಳಿಸಿ, ಅವನ ಸಂಗಡಲೇ ಆ ಸಾವಕಾರನ ಮನೆಗೆ ಹೋದನು. ನೇಮರಾಜನು ಈ ಪೋಲಿಗಾರಗೆ ಅವನ ಸ್ವರೂಪಕ್ಕೆ ಮಿಕ್ಕಿದ ಸಾಭಿಮಾನದಿಂದ ತರಗು ಎಂಬ ಹೆಸರುಹೋದ ಭಕ್ಷ್ಮ ಸಹಿತ ದೊಡ್ಡದೊಂದು ಔತಣವನ್ನು ಮಾಡಿಸಿದಾಕ್ಷಣ ತಾನಿರುವ ಠಾವು ಆಕಾಶವೋ ಭೂಮಿಯೋ ಎಂಬುದು ಅವನಿಗೆ ತಿಳಿಯದೆ ಹೋಯಿತು. “ವೇದವ್ಯಾಸ ಉಪಾಧ್ಯಗೆ ಮುಂಗೈಗೆ ಬೆಲ್ಲಕಾಣಿಸಿಬಿಟ್ಟಿದ್ದಿಯಫ್ಟೆ. ಸಾವಿರ ರೂಪಾಯಿ ಗಂಟು ಮಠದಿಂದ ಕೂಡಿಸುವೆನು. ಸೂರ್ಯನಾರಾಯಣನ ಉಪನಯನಕ್ಕೆ ವಿಘ್ನಕಾರಕನಾಗಬೇಡ. ಒಳ್ಳೇ ಮಾತಿನಿಂದ ಕೇಳುತ್ತಿಯಾ? ಬೆನ್ನಿಗೆ ಮುಷ್ಟಿ ಪೂಜೆ ಆಗಬೇಕೋ” ಎಂದು ನೇಮರಾಜನು ಕಟ್ಟುತ್ತರ ಕೊಟ್ಟಾಗಲೇ “ಸ್ವಾಮೀ! ತಮ್ಮ ಪಾದದಾಣೆ ತಮ್ಮ ಅಪ್ಪಣೆ ಮಾರುವವನ ನಲ್ಲ” ಎಂದು ಕೈ ಜೋಡಿಸಿಕೊಂಡು ನಿಂತನು. ಉಪನಯನ ಪ್ರಸ್ತ ಸಾಂಗ ವಾಗಿ ನಡೆಯುವ ವರೆಗೂ ವೇದವ್ಯಾಸ ಉಪಾಧ್ಯಗೆ ಅತ್ತಿತ್ತ ಕುಣಿಸಿ ಮತ್ತೆ ತನ್ನನ್ನು ಕಂಡರೆ ವಾಗ್ದತ್ತಮಾಡಿದ ವಿತ್ತವನ್ನೀಯುವದಾಗಿ ಸಾವಕಾರನು ಅಸರಾಜಿತಸೆಟ್ಟಿಗೆ ಮಾತು ಕೊಟ್ಟು ಬಿಡಾರಕ್ಕೆ ಕಳುಹಿಸಿದನು. ತನ್ನ ಬಯಕೆ ಕೈಗೂಡಿಸುವನೆಂಬ ಸಂತೋಷದಿಂದ ಅಪರಾಜಿತಸೆಟ್ಟಿಯು ವಾಯು ವೇಗದಿಂದ ಎಂಬಂತೆ ಲವಕಾಲದಲ್ಲಿ ಬಿಡಾರಕ್ಕೆ ತಲಪಿ, ಸೌಖ್ಯವಾಗಿ ನಿದ್ರೆ ಗೈದ, ಒಳ್ಳೆ ಒಳ್ಳೆ ಕನಸುಗಳನ್ನು ಕಂಡನು.

ಮರುದಿವಸ ಮುಂಜಾನೆ ಎದ್ದು, ವೇದವ್ಯಾಸ ಉಪಾಧ್ಯನು ದೊಡ್ಡ ದೊಡ್ಡ ಜಮಖಾನುಗಳು, ಲೋಡು, ತಿವಾಸಿ, ಲೇಪು, ಚಾಪೆ ಇತ್ಯಾದಿ ಆಸನೋಪಕರಣಗಳನ್ನು ಯಾರ್ಯಾರಿಂದ ಯರವಿಗೆ ತಂದು ಅಂಜನೇಯ ದೇವಸ್ಥಾನದ ಪೌಳಿಯಲ್ಲಿ ನುಣ್ಣಗಾಗಿ ಹಾಸಿ, ಅಲ್ಲಿ ಒಂದು ನುಸಿಯಾದರೂ ಸುಳಿಯದಂತೆ ಜಾಗ್ರತೆ ತೆಗೆದುಕೊಳ್ಳುವದಕ್ಕೋಸ್ಟರ ತಮ್ಮ ರಾಘವೇಂದ್ರ ಉಪಾಧ್ಯನನ್ನು ನಿಲ್ಲಸಿಬಿಟ್ಟು, ಮನೆಗೆ ಹೋಗಿ ಸ್ನಾನ ಜನ ಪೂಜೆ ಭೋಜನ ಸಹಿತ ತೀರಿಸಿ, ಬೇಗಬಂದು ದೇವಸ್ತ್ಥಾನದ ಬಳಿಯ ಸಭಾಸದರ ನಿರೀಕ್ಷಣೆ ಮೇಲೆ ಕುಳಿತುಕೊಂಡನು. ಸ್ವಲ್ಪದೂರವಿರುವ ಒಂದು ಆತ್ವತ್ವ ಕಟ್ಟೆಯಲ್ಲಿ ಅಪರಾಜಿತ ಸೆಟ್ಟಿಯು ಅರೆಮನಸ್ಸಿನಿಂದ ಕೂತುಕೊಂಡಿರುವಾಗ ಆಗಿಂದಾಗ್ಗೆ ವೇದವ್ಯಾಸನು ಒಂದು ಸಣ್ಣಸ್ವರದಿಂದ ಕೇಳುವ ಪ್ರಶ್ನೆಗಳಿಗೆ ನಿದ್ರಾವಸ್ಥೆಯ ಲ್ಲಿದ್ದವನಂತೆ ಉತ್ತರಗಳನ್ನು ಕೊಡುತ್ತಿದ್ದನು. ಅಂದಿನ ಸಭೆಯ ಪರಿಣಾಮ ಹ್ಯಾಗಾಗುತ್ತದೊ ನೋಡದನಕ ಮುಂದೆ ಮಾಡತಕ್ಕ ವೈನಗಳನ್ನು ಯೋಚಿಸಲಿಕ್ಕೆ ಸಂದರ್ಭವಿಲ್ಲವೆಂದು ಅವನು ಅತ್ತಿತ್ತ ನೋಡುತ್ತಿರುವಾಗ ಕೆಲವು ಬ್ರಾಹ್ಮಣರು ಬರುವವರಾದರು. ಪ್ರಮುಖರ್ಯಾರೂ ಇನ್ನೂ ಬಂದಿಲ್ಲ; ಬಂದು ಕೊಳ್ಳಲಿ. ಆ ಮೇಲೆ ಪೌಳಿಯಲ್ಲಿ ಸೇರಿಕೋಬಹುದೆಂದು ಅವರೆಲ್ಲರೂ ಅಲ್ಲಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ನಿಂತು ಕೊಂಡ ಸಮಯವನ್ನು ಸಾಧಿಸಿ ವೆಂಕಟ ಪತಿ ಆಚಾರ್ಯನಿಂದ ಮುಂದಾಗಿ ಬೋಧನೆ ಹೊಂದಿರುತ್ತಿದ್ದ ಅಂಜನೇಯಾ ಲಯದ ಅರ್ಚಕನ ಅತ್ತೆ ಸೂರ್ವಸುಮಂಗಲೆ ಗಂಗಾಬಾಯಿಯು ಬಾಗಲಲ್ಲಿ ನಿಂತು ಆಚೆ ಈಚೆ ಹಣಕಿನೋಡಿ, ಎದುರಿನಲ್ಲಿ ನಿಂತಿರುವ ವೇದವ್ಯಾಸ ಉಪಾಧ್ಯನನ್ನು ಕರದು-“ಹೌದೋ ವೇದವ್ಯಾಸ; ಇಂದೇನು ವಿಶೇಷವಪ್ಪಾ? ದ್ವಿಜರ ಸಂದಣಿಯು ಬರುವದು ತೋರುತ್ತದೆ” ಎಂದು ಕೇಳಿದಳು. ವಾಯು ವಿನ ಕೂಡೆಯಾದರೂ ಜಗಳವಾಡಲಿಕ್ಕೆ ಹಿಂಜರಿಯದ ಈ ವಿಧವೆಯು ಎಲ್ಲಿಂದ ಬಂದು ಬಾಗಲಲ್ಲಿ ಠಿಂತು ಕೊಂಡಳೆಂದು ಮನಸ್ಸಿನಲ್ಲಿ ಸಂಕೋಚ ತಾಳಿದೆ ವೇದವ್ಯಾಸನು-“ಅಮ್ಮಾ ವಿಶೇಷವೇನು! ಒಂದು ಸಭೆ ಕೂಡುವ ದಕ್ಕೆ ಸಂಕಲ್ಪಿಸಿಯದೆ. ಆದಪ್ರಯುಕ್ತ ಒಬ್ಬೊಬ್ಬರೇ ಈ ಠಾವಿಗೆ ಬರುತ್ತಲಿ ದ್ದಾರೆ” ಎಂದು ಉತ್ತರಕೊಟ್ಟು. “ಹಾಗೊ! ನಿನ್ನ ತಾಯಿಯ ಸಪಿಂಡೀ ಕರಣಕ್ಕೆ ಇವರಿಗೆಲ್ಲಾ ಹೇಳಿಕೆ ಮಾಡಿಸಿದ್ದಿಯೋ! ಏನೋ ನೋಡಿಬಿಡುನ ದಕ್ಕೆ ನಾನು ಹೊರಗೆ ಬಂದೆ” ಎಂದು ಆ ಜಗಳಗಂಟಿ ಹೆಂಗಸು ಒದರಿದ್ದು ಕೇಳಿದನು. ವೇದವ್ಯಾಸನು ಸಿಟ್ಟಿ ನಿಂದಲೂ ಭಯದಿಂದಲೂ ನಡುಗಿ, ಸಿಟ್ಟು ಏನೂ ತಡಿಯಲಾರದೆ–“ಮುದಿಗೂಗೆ! ಬಾಯಿಗೆ ಬಂದಂತೆ ಬೊಗಳು ವಿಯಾ?” ಎಂದು ಅವಳನ್ನು ಗದರಿಸಿದನು. ಸರಿ ಪಟಾರೆಪೆಟ್ಟಿಗೆಗೆ ಒಂದೇ ಸರ್ತಿ ಬೆಂಕಿಕೊಟ್ಟಂತಾಯಿತು. ಗಂಗಾಬಾಯಿಯು ಹೆಚ್ಚುಕಡಿಮೆ ಒಂದು ತಾಸಿನ ವರೆಗೆ ಹೀನವಾದ ಬೈಗಳಿಂದ ಹಿಂದುಮುಂದು ನೋಡದೆ. ವೇದ ವ್ಯಾಸನು ಉಸುರೆತ್ತದ ಹಾಗೆ ಮಾಡಿಬಿಟ್ಟಳು.

ಅಷ್ಟರಲ್ಲಿ ಅಲ್ಲಿ ನೆರೆದಿರುವ ಸಮೂಹವೂ ದಾರಿಗರೂ ಬಾಗಿಲ ಎದುರು ವೇದವ್ಯಾಸನ ಬೆನ್ನುಕಡೆಯಲ್ಲಿ ಗುಂಪು ಕಟ್ಟಿದ್ದರು. ಉಪಾಧ್ಯನ ಹಮ್ಮು ಇಳಿದುಹೋಯಿತು. ಅಲ್ಲಿಂದ ಅವನು ತಪ್ಪಿಸಿಕೊಂಡು, ಪಲಾಯನ ಮಾಡು ವದಕ್ಕೆ ನೋಡುವಷ್ಟರೊಳಗೆ ಅಣ್ಣಗೆ ನಾಮೂಷಿ ಮಾಡಿದ ವಿಧವೆಯ ಮೇಲೆ ಕೋಪವನ್ನು ತಾಳಿದ ರಾಘವೇಂದ್ರ ಉಪಾಧ್ಯನು ಔಡುಗಳನ್ನು ಕಚ್ಚಿಕೊಂಡು, ಗುಂಪಿನೊಳಗೆ ನುಗ್ಗಿ. ಗಂಗಾಬಾಯಿಯ ಸಮ್ಮುಖದಲ್ಲಿ ನಿಂತು–“ಹೇವವಿಬ್ಲದ ದಿಂಡೆ! ನಿನ್ನ ನಾಲಿಗೆಗೆ ಸಲಿಗೆ ಹೆಚ್ಚಾಯಿತು! ಗರ ಗಸದಿಂದ ಸೀಳಿಬಿಡುತ್ತೇನೆ” ಎಂದು ಅರ್ಭಟಮಾಡಿದನು. ಅವಳಿಗೆ ಮತ್ತಷ್ಟು ರೇಗಿತು. ಅಣ್ಣ ತಮ್ಮಂದಿರಿಬ್ಬರನ್ನೂ ಕಂಡಾಬಟ್ಟೆ ಬೈಯುತ್ತಾ, ಯಾರಿಗೂ ಕಾಣದಂತ ಕಂಕುಳಲ್ಲಿ ಇಟ್ಟುಕೊಂಡಿದ್ದ ಜಗಳಗಾತಿಯರ ಮುದ್ದು ಆಯುಧ ವನ್ನು ಬೀರುತ್ತಾ, ಮುಂದು ಮುಂದೆ ಬಂದಳು. ಇಂಥ ಕಟ್ಟು ಮುಟ್ಟಿನಲ್ಲಿ ಗುಂಪುಕೂಡಿ ನಿಂತ ಜನರು ದಿಕ್ಕಾಪಾಲಾಗಿ ಓಡಿದರು ಉಪಾಧ್ಯಾಯ ರೀರ್ವರೂ ಹ್ಯಾಗೂ ಗುಂಪಿನ ಎಡೆಯಿಂದ ತಪ್ಪಿಸಿಕೊಂಡು, ಉಸುರುಕಟ್ಟಿ ಓಡಿದರು ಅವಳು ತಮಗೆ ಬೆರಸಿಕೊಂಡು ಬರುತ್ತಾಳೊ ಎಂಬ ಭಯದಿಂದ ಅವರು ಹಿಂದೆ. ನೋಡುತ್ತಾ ಓಡಿ ಓಡಿ ಬೇಗ ಮನೆಯ ಒಳಗೆ ಹೊಕ್ಕು, ಬಾಗಲು ಮುಚ್ಚಿ ಕೀಲುಹಾಕಿ ಹರಿನಾಮ ಸ್ಮರಣೆಮಾಡಿದರು. ದೂರವಿರುವ ಕಟ್ಚೆಯಲ್ಲಿ ಕೂತುಕೊಂಡಿದ್ದ ಅಪರಾಜಿತಸೆಟ್ಟಿಗೂ ಉಪಾಧ್ಯರ ಸಂತಾಪ ನೋಡಿ ದಿಗಿಲುಹತ್ತಿದರೂ ನೇಮರಾಜಸೆಟ್ಟಿಯು ಸೂಚಿಸಿದ ಮಾರ್ಗ ವನ್ನು ಅನುಸರಿಸಲಿಕ್ಕೆ ದೈವವಶಾತ್‌ ಗಂಗಾಬಾಯಿಯು ಅಮಂಗಲ ಆಯು ಧಪಾಣಿಯಾಗಿ ಸಾರಥ್ಯಮಾಡಿದ ಹಾಗಾಯಿತು. ಇನ್ನು ದೊಡ್ಡದಲ್ಲವೆಂದು ಅತ್ಯಾನಂದಪಟ್ಟನು.

ಸಭೆಕೂಡಲಿಕ್ಕೆ ಹೊರಟ ದೊಡ್ಡ ದೊಡ್ಡವರೂ ಸಾಧಾರಣಮಟ್ಟಿನ ವರೂ ಭೋಜನ ತೀರಿಸಿಕೊಂಡು, ಮೆಲ್ಲಮೆಲ್ಲನೆ ಬರುತ್ತಾ, ದಾರಿಯಲ್ಲಿ ಗಂಗಾಬಾಯಿಗೂ ಉಪಾಧ್ಯರಿಬ್ಬರಿಗೂ ಆದ ಕಲಹದ ಸಮಾಚಾರವನ್ನು ಕೇಳಿ, ಮರ್ಯಾದೆ ಉಳಿಸಿಕೊಳ್ಳಬಬೇಕಾದರೆ ತಂತಮ್ಮ ಮನೆಗಳಿಗೆ ಮರಳು ವದೇ ಉತ್ತಮ ಉಪಾಯವೆಂದು ಹಿಂತಿರುಗಿ ಚನ್ನಾಗಿ ನಕ್ಕರು. ಈ ಒಸ ಗೆಯು ಕ್ಷಣದಲ್ಲಿ ಊರಲ್ಲಿ ಸರ್ವತ್ರ ತುಂಬಿ ಕೇಳಿ, ಕೇಳಿದವರಿಗೆ ಬಹು ವಿನೋದಕರವಾಯಿತು. ವರ್ಷಕ್ಕೆ ಒಮ್ಮೆಯಾದರೂ ನಗಲೊಲ್ಲದವರು ಅಂದು ಗಹಗಹಿಸಿದರು. ಮಠಕ್ಕೆ ಅದು ತಿಪ್ಪಾಶಾಸ್ತ್ರಿಯಿಂದ ಗೊತ್ತಾಯಿತು. ಚಂಚಲನೇತ್ರರು ಅವರ ಜೀವಕಾಲದಲ್ಲಿ ಅಂದಿನಷ್ಟು ನಗಲಿಲ್ಲ. ವಾಗ್ದೇವಿಯ ಉಲ್ಲಾಸಕ್ಕೆ ಪರಿಮಿತಿಯೇ ಇಲ್ಲ. ಅವಳ ತಂದೆತಾಯಿಗಳೂ ಗಂಡನೂರಾತ್ರಿ ನಿದ್ರೆಬೀಳುವವರೆಗೂ ನಕ್ಕರು. ವೆಂಕಟಪತಿ ಆಚಾರ್ಯನ ಸಾಮರ್ಥ್ಯಕ್ಕೆ ಶ್ರೀಪಾದಂಗಳವರು ಪೂರ್ಣವಾಗಿ ಮೆಚ್ಚಿದರು. ಅಂದಿನ ಸಾಯಂಕಾಲ ತನಕ ಅವನು ಮಠದಲ್ಲಿ ಕಾಲಿಡಲಿಲ್ಲ. ರಾತ್ರೆ ಪೂಜೆಕಾಲದಲ್ಲಿ ನಸುನಗುತ್ತಾ, ಧಣಿಗಳ ಸಮ್ಮುಖಕ್ಕೆ ಬಂದು ಪ್ರಣಾಮಮಾಡಿದನು. ಅವನ ಮುಖವನ್ನು ನೋಡಿ ಚಂಚಲನೇತ್ರರು ಸಂತುಷ್ಟರಾದರು. ಗಂಗಾಬಾಯಿ ಹೆಸರು ಹೋದಳು. ಮಠದ ವೈರಿಗಳು ಮೃತನಪ್ರಾಯವಾದರು.

ಅಪರಾಜಿತ ಸೆಟ್ಟಿಯು ಸಾಯಂಕಾಲದಲ್ಲಿ ವೇದವ್ಯಾಸೆನ ಮನೆಗೆ ಬಂದು ಅವನಿಗೆ ಸಂಭವಿಸಿದ ಮಾನಭಂಗವನ್ನು ಕುರಿತು ನೊಂದವನಂತೆ ತೋರಿಸಿಕೊಂಡನು. ತನ್ನ ಪ್ರಾಣವು ಆಗಲೇ ಹೊರಟು ಹೋದರೆ ಅತಿ ಉತ್ತಮವಾಗುತ್ತಿತ್ತೆಂದು ವೇದವ್ಯಾಸನು ಆ ಪರಮಸ್ನೇಹಿತನ ಕೂಡೆ ಹೇಳಿ ಬಹಳವಾಗಿ ಕಣ್ಣೀರು ಸುರಿಸಿದನು. ಬೆಂಬಲಕ್ಕೆ ತಾನಿರುವ ಪರಿಯಂತ ಹೆದರಬೇಡವೆಂದು ಅಸರಾಜಿತನು ಧೈರ್ಯಹೇಳಿ, ಅವನ ತಮ್ಮನನ್ನು ಕರೆದು–“ಇಗೋ ನಾಚಬೇಡ, ಆ ಮುದಕಿಯೂ ಅವಳ ಅಳಿಯನೂ ನಿಮ್ಮಿಬ್ಬರ ಮೇಲೆ ನಡೆಸಿದ ಅನ್ಯಾಯವನ್ನು ಕುರಿತು ಒಂದು ಫಿರ್ಯಾದು ಬರೆಸಿಕೊಡುತ್ತೇನೆ. ಅದನ್ನು ಕೊತ್ವಾಲರ ಮುಂದಿ ದಾಖಲ್‌ ಮಾಡಿಬಿಡು. ಆ ಮೇಲೆ ತಮಾಷೆ ನೋಡಬಹುದಷ್ಟೆ?” ಅಂದಾಗ ವೇದವ್ಯಾಸನಿಗೆ ಆಲೋಚನೆ ಉಚಿತವಾಗಿ ತೋರಿ “ಶಹಭಾಷ್‌! ಶಹಭಾಷ್‌!” ಎಂದು ಪ್ರಿಯ ಮಿತ್ರನನ್ನು ಬಿಗಿದಪ್ಪಿದನು. ಮರುದಿನ ಪ್ರಾತಃಕಾಲದಲ್ಲಿ ಸೆಟ್ಟಿಯು ರಾಘವೇಂದ್ರಾಚಾರ್ಯನಿಗೆ ತಾನೇ ಒಕ್ಕಣೆ ಹೇಳಿ, ಒಂದು ದೊಡ್ಡ ಆನಾ ದನೆ ಪತ್ರ ಬರಸಿ ಪೇಷ್ಕಾರ ತಿಮ್ಮಯ್ಯನ ಮುಂದೆ ದಾಖಲ್‌ ಮಾಡಿಸಿದನು ಅದರಿಂದ ಕಾಣುವ ಅಪರಾಧ ನಡೆಸಲಿಕ್ಕೆ ಚಂಚಲನೇತ್ರರು ಮದ್ದತ್ತು ಮಾಡಿದವರೆಂದು ಬರೆದಿತ್ತು. ಈ ಪ್ರಕರಣದ ವಿಮರ್ಶೆಯನ್ನು ತಾನು ಮರು ದಿವಸವೇ ಮಾಡುವೆನೆಂದು ಪೇಷ್ಕಾರನು ಪ್ರತಿವಾದಿಗಳಿಗೆ ನಿರೂಪ ಗಳನ್ನು ಕ್ಷಿಪ್ರ ಬರೆಸಿ, ಸಹಿಮಾಡಿ, ದಫೇದಾರ ಗಣಪನ ಪರಿಮುಖ ತಲಪಿ ಸಿದನು. ಮುನ್ನಿನ ದಿನ ಆದ ಅವಮರ್ಯಾದೆಯನ್ನು ಮರೆತುಬಿಟ್ಟ ವೇದ ವ್ಯಾಸ ಉಪಾಧ್ಯನು ಪೂರ್ವವತ್‌ ಧೈರ್ಯತಾಳಿದನು. ಪಟ್ಟಣದಲ್ಲಿ ಗಲಗಲ ಹುಟ್ಟಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿದ್ಯುತ್‌ಪುತ್ರನ ಅವತಾರ
Next post ವಿಚಾರದಂತೆ ಮನ

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…