ವಿದ್ಯುತ್‌ಪುತ್ರನ ಅವತಾರ

ಸುಸಮರ್‍ಥನಾದ ವಿದ್ಯುತ್‌ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ
ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ.
ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು,
ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು.

ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾಗ
ಗರಿಗೊಂಡ ಬಲ ಇಳಿದು ಬಂದವಾಗ.
ಎಲ್ಲ ದೇವತೆಗಳೂ ಒಂದೆ ಮರ್‍ತ್ಯ ಶರೀರದಲ್ಲಿ ಬಾಳಿದವು
ಒಂದೇ ಹೆಸರ ತಾಳಿದವು.

ಅಗಲಗಲ ಗತಿಯ ಅಲೆ ಮಸಕು ಭೂಮಂಡಲದಿ ಬಂತು ಬಳಲಿ
ಉತ್ಫುಲ್ಲಸ್ವಪ್ನೋತ್ಥಗುಂಫಗಳಲಿ.
ಭವ್ಯತೆಯ ಕರುವಿಟ್ಟ ಹಾಗೆ ಬಾಳಾಗಿತ್ತು
ಕಡಲಗಲ ಕೈ ಕಾಲ-ಚಕ್ರ ಅಮುಕಿತ್ತು.

ಮಾನವನ ಆತ್ಮ ಮತ್ತೊಮ್ಮೆ ಪಡೆದಿತು ಬಾಳ ಸಾರಥ್ಯ
ಧೀರ ಉದ್ಧತ ದೇವದೇವತೆಗಳಾತಿಥ್ಯ.
ಪ್ರಪ್ರಭಂಜನ ಪಕ್ಷ ಉತ್‌ಕ್ಷಿಪ್ತ ವಾಯುಪಥದಲ್ಲಿ ಹಾರಿತ್ತು
ಭವ್ಯ ಆದರ್‍ಶಕ್ಕೆ ಗುರಿಯಿಟ್ಟು ಎಸೆದ ಈಟಿಯ ಹಾಗೆ ಏರಿತ್ತು.

ಡೆಂಡಣಿಸಿ ಕಳಚಿ ಬಿದ್ದವು ಪುರಾತನಾಯಸ ಕವಚ
ಗೋಡೆ ಸಿಡಿದೊಡೆದು ಬಿದ್ದಿತು ಪುರಾಣ ಪ್ರಕೃತಿ
ತರುಣತರ ಸೌಂದರ್‍ಯ, ಸುವಿಚಾರ, ಸುಪ್ರಭೆಯ ಜಗದಿ
ಹೊಕ್ಕ ದೇವನು ಮತ್ತೆ ತನ್ನ ಹೊಸತನದಿ.

ಮೂಡಿತ್ತು ದೇವವಾಣಿಯ ಸೊಲ್ಲು ಮಾನವರ ತುಟಿಯಲ್ಲು
ಹೃದಯ ಎಚ್ಚತ್ತಿತ್ತು ಮಿಂಚು ಬೆಡಗಿನ ಬಿಳಿಯ ನಸುಕುಗಳಲು
ಗಾಳಿ ಬೆಳಕಿನ ಬಟ್ಟೆ, ಉಸಿರು ಹರ್‍ಷದ ಕುಸರು
ದೇವಲೀಲೆಯ ಆಟದಂತೆ ಬಾಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗಲಿಕೆ
Next post ವಾಗ್ದೇವಿ – ೨೮

ಸಣ್ಣ ಕತೆ

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys