ವಿಚಾರದಂತೆ ಮನ

ಎತ್ತೆತ್ತ ನೋಡಲಿ ದೇವಾ ನಾನು
ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ
ಕಣ್ಣು ಮಚ್ಚಿದರಾಯ್ತು ನಾನು
ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ

ಯಾರು ಹೇಳದರೋ ನಮಗಂದು
ಮನಸ್ಸು ತುಂಬ ಮರ್ಕಟವೆಂದು
ಆದರೆ ಮನಸ್ಸನ್ನು ಕರೆದು ತೋರಿದವರು
ಇದೆಲ್ಲ ಸುಖವೆಂದು ನಾವು ಹೇಳಿದವರು

ಮನಸ್ಸು ನಮ್ಮ ಸ್ವಾಧೀನವಾದರಾಯ್ತು
ಅದನ್ನು ಅಂತರಂಗಕ್ಕೆ ತಿರುಗಿಸಬೇಕು
ಎಲ್ಲವನ್ನು ಮರೆಸುತ್ತ ನಿತ್ಯ ನಾವುಗಳು
ದೇವರ ನಾಮವನ್ನು ಸ್ಮರಿಸಬೇಕು

ಹಗಲಿರುಳು ನಾಮ ಜಪಸ್ಮರಣೆ
ನಮ್ಮ ಮನಸಾಗುವುದು ಹಣ್ಣು ಹಣ್ಣು
ಆಗ ಸದಾ ಕಾಡುವುದು ನಮ್ಮನ್ನೆ
ಬೇಕೆಂದು ಮಾಣಿಕ್ಯ ವಿಠಲ ಪಾದ ಮಣ್ಣು ಸಜ್ಜನರ ಪಾದ ಮಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೮
Next post ಕಾಡ ಬೇಡ ಗೆಳತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…