ಕಾಡ ಬೇಡ ಗೆಳತಿ
ಹೊನ್ನಾಡ ಬೇಡ ಬೆಡಗಿ
ಒಲವಿನಾಸೆರೆ ಬಯಸಿ
ಬರಸೆಳೆದು ಬಿಗಿದಪ್ಪಿ
ಮುದಗೊಳಿಸಿ ನಿನ್ನ ಕರೆದಿದೆ
ಕಾಡ ಬೇಡ ಗೆಳತಿ
ನಿನ್ನತನ ನೆನೆದಾಗ ಉಸಿರುಸಿರು
ನನ್ನ ಮನದಾಗ ಹೊನ್ನಾಡ ಬೇಡ
ಹುಡುಗಿ ಅಕ್ಕ ತಂಗೀರು ನನ್ನ
ಬೆನ್ನ ಮ್ಯಾಲೆ ನೀರು ಹೊಯ್ದಾರೆ
ಸಂಸಾರ ಸಾಗರ ಜಗವು ನನ್ನ
ಮ್ಯಾಲೆ ತಂಗಾಳಿ ಹಾಡತೈತಿ
ನಿಧಾನಿಸು ಸಮಾನಿಸು ಸುಧಾರಿಸು
ಸರಸ ವಿರಸದ ಮೌನದಾಟ ಸಾಕು
ಬೇಸರ ಬ್ಯಾಡ ನಿನಗೆ ಹೊಸತಾದ
ಸೂರ್ಯ ಉದಯಿಸಿ ಬರುವಾಗ
ಪನ್ನೀರು ಹೊಯ್ದಾನ ನಮಗ
ಕಾಡ ಬೇಡ ಹುಡುಗಿ
*****


















