ಒಂದು ಮೊಗ್ಗು ಹೇಳಿತು “ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ” ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- “ಪ್ರೀತಿ ತುಂಬಿದ ಹೃದಯ ಇರುವುದು ಅರ್ಪಿಸುವುದಕ್ಕೆ, ಅರ್ಪಣೆಯಲ್ಲಿ ಧನ್ಯತೆ”, ಎಂದಾಗ ಮೊಗ್ಗು ಅರಳಿ ನಾಳೆ ಇದನ್ನೇ ನಾನು ಇನ್ನೊಂದು ಮೊಗ್ಗಿಗೆ ಹೇಳುವೆ ಎಂದಿತು.
*****