ರೊಟ್ಟಿ ಹಸಿವಿನ ಅಂತ್ಯ
ಹಸಿವು ರೊಟ್ಟಿಗೆ ನಾಂದಿ
ನಡುವೆ ನಡೆವ ಹೆಜ್ಜೆಗಳು
ಅಳತೆಗೆ ಸಿಕ್ಕದ ಅವಶ್ಯಕತೆ
ಮತ್ತು ಪೂರೈಕೆಗಳ ಕಾಗುಣಿತ
ಆದಿ ಅಂತ್ಯಗಳ
ತೆಕ್ಕೆಯಲಿ ಮಿಳಿತ.
*****