ಉರುಳಿತ್ತು ಒಂದೂವರೆ ವರುಷ ಹರುಷ ಕಳೆಯಿತು ಕಳೆದು ಕೂಡಿ ಅಳೆದು ಅದರದರ ಭಾವನೆ ಭಾಗಿಸುವಂತೆ ಹರುಷ ಕಳೆಯಿತು|| ನೆನಪೆಂಬ ಶೇಷ ಉಳಿದು ಮನವ ತುಂಬಿ ಒಲಿದು ಪ್ರೀತಿ ಎಂಬ ಪಕಳೆ ಉದುರಿ ಇಳೆಗೆ ನವನನೀನತೆಯ ಭಾಗಿಸುವಂತೆ ಹರುಷ ಕಳೆಯಿತು ||ಉ|| ನಾನು ನನ...

ಹಸಿವು ನಿದ್ರಿಸುವುದಿಲ್ಲ ರೊಟ್ಟಿಗೆ ಎಚ್ಚರವಿಲ್ಲ. ಗಾಢ ನಿದ್ದೆಯಮಲಿನಲಿ ರೊಟ್ಟಿ ಕಾಲಕ್ಕೆ ಮೊದಲೇ ಪ್ರೌಢ. ಕೂದಲು ಸೀಳುವ ಎಚ್ಚರದಲಿ ಹಸಿವೆಗೆ ಸದಾ ನವ ಯೌವನ. *****...

ನಾ ಗಳಿಸಿದ್ದು ಏನು ? ಉತ್ತರದ ಬದಲು ಸಿಕ್ಕಿದ್ದು ಇಷ್ಟೇ. ನಿರಂತರ ಜೀವನದ ಆಗು – ಹೋಗು ಗಳ ಚಿತ್ರ ಬಲು ವಿಚಿತ್ರ ಕೆಲವರ ಗಳಿಕೆ ಹೆಣ್ಣು ಹೊನ್ನು ಮಣ್ಣೆಂಬ ಮಮಕಾರಗಳು, ಕಾಸು, ಮೇಲಿಷ್ಟು ಕೊಸರು ಇನ್ನೂ ಕೆಲವರದು ಮಿತಿ ಇರುವ ಮತಿ ನಾನೂ ಗಳ...

ಇಂತಿಷ್ಟೇ ಆಯುಷ್ಯ ನಿನ್ನದು ತಗೋ ಈ ರತ್ನ ಹವಳ ಮುತ್ತು ಬದುಕಿ ಉಳಿಯುವೆ ಬಹಳಷ್ಟು ವರ್‍ಷ – ಸಾವಿರ ನೋಟುಗಳು ಕೊಟ್ಟು ಉಂಗುರ ಹಾಕಿಕೊಂಡು ಹರಬರುತ್ತಲೇ ಕಾರಿಡಾರ್‌ನಲ್ಲಿ ಬಿದ್ದು ಸತ್ತ ಈತ – ಆತ ಸಾಯುವುದು ಗೊತ್ತಿದ್ದೇ ಎದೆಯೊಡಸಿ ...

ಉಕ್ಕರಿಸಿದೆ ಹಿಟ್ಟು ಮಿದುವಾಯಿತು ಚೆನ್ನಾಗಿ ನಾದು ಲಟ್ಟಿಸಿದೆ ಹಪ್ಪಳವಾಯಿತು ಲಟ್ಟಿಸಿದಂತೆ ದಿಟ್ಟಿಸುತ ತನಗೆ ತಾನೆ ಎಂಬಂತೆ ಎಲ್ಲಿಂದ ಬಂದೆ? ಎಂದು ಹಪ್ಪಳವೆ ಕೇಳಿತು ಬೀಜ, ಸಸಿ, ತೆನೆ ಕಾಳು, ಬೇಳೆ ಬೆವರು ಹಸಿವು ನೀರು ನೆಲ ಭೂಮಂಡಲ ಉಂಡೆ ಉಂಡ...

ರಣ ಬಿಸಿಲು ಕೊಡೆ ಹಿಡಿದಿದೆ ನೆಲದ ಒಡಲಿಗೆ ಸಣ್ಣಗೆ ಬಿರುಕು ಕದಲದ ಭಂಗಿ, ನೆಟ್ಟ ನೋಟ ಏಕಸ್ಥ ಧ್ಯಾನ ಕಲ್ಲಾಗಿ ಕೂತು ಕಾಲವಾಗುವ ಬಯಕೆ ಕಾಯುವಿಕೆ ಎಂದರೆ ಇದೇ ಇರಬೇಕು. ಒಡಲು ಬಯಸಿದ ಹಸಿವು ಕಾಲಬುಡದಲಿ ಸಿಗುವುದೆಂದು ಮೇಯುವುದು ಮರೆತು ಹೋದರೆ ಬಂಜ...

ಮುಸುಕಿನ ಜೋಳದ ಸಮಯ ಇದು ಎಲ್ಲ ಕಡೆಯೂ ಅದೇ ಒಲೆಯಲ್ಲಿ ತೊಳಗುವ ಕೆಂಡ ಕೆಂಡದ ಮೇಲೆ ಸುಲಿದ ಜೋಳದ ತೆನೆ ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ ಕೂಗುತ್ತಲೇ ಇದೆ ಇಲ್ಲೊಂದು ಎಮ್ಮೆ ಅಲ್ಲೊಬ್ಬ ಹಟಮಾರಿ ಹುಡುಗ ಜೋಪಾನ! ಹಾರುವ ಕಿಡಿಗಳು ಇನ್ನರ್ಧ ಗಂಟ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...