ಮುಸುಕಿನ ಜೋಳದ ಸಮಯ ಇದು
ಎಲ್ಲ ಕಡೆಯೂ ಅದೇ

ಒಲೆಯಲ್ಲಿ ತೊಳಗುವ ಕೆಂಡ
ಕೆಂಡದ ಮೇಲೆ ಸುಲಿದ ಜೋಳದ ತೆನೆ

ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ
ಕೂಗುತ್ತಲೇ ಇದೆ

ಇಲ್ಲೊಂದು ಎಮ್ಮೆ
ಅಲ್ಲೊಬ್ಬ ಹಟಮಾರಿ ಹುಡುಗ

ಜೋಪಾನ!
ಹಾರುವ ಕಿಡಿಗಳು

ಇನ್ನರ್ಧ ಗಂಟೆಯಲ್ಲಿ ಕತ್ತಲಾಗುವುದು
ನಿರ್ಜನ ಬೀದಿ

ಎಲ್ಲೋ ಒಂದು ಕಡೆ
ಕೊಯ್ಲಿಗೆ ಬರುವ ಇನ್ನೊಂದು ಹೊಲ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)