೧ ಬಯಲಿನಲಿ ಕೂತು ಆಕಾಶಕ್ಕೆ ಕಣ್ಣು. ಬೆಳ್ಳಂಬೆಳಗೇ ತಾರೆಗಳ ಹುಡುಕಿ ಕಿತ್ತು ಪೋಣಿಸಿ ಮಾಲೆ ಮಾಡುತ್ತ ಮಡಿಲು ತುಂಬಿಕೊಳುವುದರಲೇ ಮಗ್ನ ಈ ಬಯಲ ಬುದ್ಧ. ೨ ಗುಡಿಸಿದ ರಾಶಿ ಬೀದಿ ಕಸ ತನ್ನ ಪುಟ್ಟ ಬೊಗಸೆಗೆ ತುಂಬಿ ದಿನವೂ ಪುಟ ಪುಟನೆ ಓಡಿ ಬಂದು ಅವನ...

ಕೋಲು ಕೋಲು ಕೋಲೆನ್ನದು ಕೋಲು ಕೋಲು ಕೋಲೇ ಕೋಲೆನ್ನ ಕೋಲೇ || ೧ || ಕಯ್ಯಲೊರೆಗೆ ಕಂಚಿನ ಕೋಲು ಪಾಂಡವರಿಗೆ ಬೆಳ್ಳಿ ಕೋಲು || ೨ || ಶಿತ ಕಟ್ಟ ಶಿರಿರಾಮರಿಗೆ ಚಿನ್ನದ ಕೋಲು ಶಿನ್ನದ ಕೋಲ ತಡದೇಕಂಡೇ || ೩ || ತಮ್ಮ ತಮ್ಮ ಮುಸತಾಪವಾನೋ ಗೈದಾರೋ ಶಿರ...

ಪೇಳ್ವಂತೆ ಮಾಡುವಾ ನಿರವಯವ ಕೃಷಿ ಯಾಳಿಂದ ಪೇಳ್ದುದರಲಷ್ಟಿಷ್ಟು ಮಾಡುವಾ ಸುಳ್ಳು ಸಾವಯವ ಕೃಷಿಯೊಳು ಮೇಲು ಸುಳ್ಳನೇ ದಿಟವೆಂದು ಸಾಧಿಸುವ ಪೇಟೆ ಬಾಳಿಂದ ಹಳ್ಳಿ ಕೃಷಿ ನಿರವಯವವಾದೊಡಂ ಮೇಲು – ವಿಜ್ಞಾನೇಶ್ವರಾ *****...

ನಗುವ ಗಗನವೆ ಮುಗಿಲ ಮೇಘವೆ ಯಾಕೆ ನನ್ನನು ಕೂಗುವೆ ಮುಗಿಲ ನೀರಿನ ಮುತ್ತು ತೂರುತ ಯಾಕೆ ನನ್ನನು ಕಾಡುವೆ ಗಟ್ಟಿ ಹುಡುಗನು ಗುಟ್ಟು ಒಡೆದನೆ ನನ್ನ ಸೀರೆಯ ಸೆಳೆದನೆ ಅಂತರಾತ್ಮದ ಗಿಡದ ಮಂಗನು ಅಂಗುಲಾಗವ ಹೊಡೆದನೆ ಇಗಾ ಪಾತರಗಿತ್ತಿ ಸುಬ್ಬಿಗೆ ಹೂವು ...

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ ಅಗ್ನಿಕುಂಡದಲ್ಲಿ ಹೃದಯ ಮನಸ್ಸುಗಳೆರಡು ಶ...

ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ ಅನಂತಾನಂದಮಯಮಾಕಾಶ! ಗಿರಿಗಹ್ವಕರಗಳಾಚೆಯಲಿ ಗಗನದಲಿ ತೇಲಿ ತಿರುಗುತಿಹ ಗಿಳಿವಿಂಡು! ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ- ಲೋದಯದ ಸುಮಂಗಲ ಪಾಡಿ ಕುಲುನಗೆಯ ಕುಸುಮಗಳ ಮೂಸಿ ಮುತ್ತಿಟ್ಟು ಮಧುವನೀಂಟುತಿಹ ತುಂಬಿಗಳು!...

ಮುಂಜಾನೆ ಸೂರ್ಯನ ಕಿರಣಗಳು ಸೋಕಿ ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು. ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ ಗಳಿಗೆಗಳು. ನಂಬಿಕೆಗಳು ಊರತುಂಬ ಹರಡಿದ ಗಾಳಿ. ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿ...

ನಿನಗೆ ನೀನು ನಡೆಯೇ | ಮನವೆ ನಿನ್ನ ಬಾಳು ಜೀನು || ನಿನ್ನ ಕರುಣೆ ಕಮಲದಂತೆ | ನಡುವೆ ನೀನು ಅಮರನಂತೆ ||ನಿನ್ನ || ಹಸಿರ ಹುಲ್ಲು ಹಾಸಿಗೆಯಂತೆ | ಮಲ್ಲೆ ಹೂವು ಘಮ ಘಮವಂತೆ || ತಾಯಿ ಒಡಲ ಬಳ್ಳಿ ನೀನು | ಬೆಳೆಯೆ ನೀನು ಬಾಳಿನೇ ಬೆಳಕು || ನಿನ್ನ ...

ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್‍ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ ನೀನೇನು ಮಾಡುವುದು ಸೌಂದರ್‍ಯತೆ ಕಂಡು ನೀನೇನು ಬಯಸುವುದು ನಿನ್ನಲ್ಲಿದ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...