ಪೇಳ್ವಂತೆ ಮಾಡುವಾ ನಿರವಯವ ಕೃಷಿ
ಯಾಳಿಂದ ಪೇಳ್ದುದರಲಷ್ಟಿಷ್ಟು ಮಾಡುವಾ
ಸುಳ್ಳು ಸಾವಯವ ಕೃಷಿಯೊಳು ಮೇಲು
ಸುಳ್ಳನೇ ದಿಟವೆಂದು ಸಾಧಿಸುವ ಪೇಟೆ ಬಾಳಿಂದ
ಹಳ್ಳಿ ಕೃಷಿ ನಿರವಯವವಾದೊಡಂ ಮೇಲು – ವಿಜ್ಞಾನೇಶ್ವರಾ
*****