ಕೆರಳಿ ಮೊರೆವ ಕಡಲಿನಲ್ಲಿ ಬಿರುಕುಪಡೆದ ಕಿರಿಯ ನಾವೆ ಬಿರಿಯುತಿಹುದು ಬಿರುಸಿನೆದೆಯ ಕಾಯೆ ತಾಯೆ ಅಭಯದಾಯಿನಿ ! ಬಂದರಗಳ ಬಂಧಮೀರಿ ಬಂದು ನೀರ ಹರಹಿನಲ್ಲಿ ಮಿಂದು ತೇಲಿ ಸ್ವಚ್ಛಂದದಿ ಮುಂದೆ ಹುಟ್ಟುಹಾಕುತಿರುವೆನು. ೧ ಕಂಗಾಣದ ಗಾಳಿಸೆಳೆಗೆ ತುಂಗಗಿರಿಯ ತೆರದ ತೆರೆಯು ನುಂಗುವಂತೆ ಏರಿಏರಿ ಬಂದು ಸುತ್ತುವರಿದು ಮ...

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ ಗಗನ ಹೊಳೆದಿದೇ, ಮೇಘ ಮುತ್ತಿದೆ ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ ಕತ್ತಲಂತೆ ಬೆಳಕಂತೆ ಎರಡು ಕೂಡಿವೆ ತುತ್ತೊಂದೆಡ...

ಹೊಸಿಲಲಿ ಬರೆದಿದೆ ಹೊಸ ಹಾರೈಕೆ ಹೂ ಬಿಸಿಲಿನ ಚಿತ್ತಾರದಲಿ, ನಿಜವಾಗಿಸು ಬಾ ನವವರ್ಷವೆ ನೀ ದಿನ ದಿನ ಪದ ವಿನ್ಯಾಸದಲಿ ಗಿಡಮರಬಳ್ಳಿಯ ಹೂಬಟ್ಟಲಲಿ ಭೃಂಗದ ಊಟದ ತಟ್ಟೆಯಲಿ ನಗುತಿದೆ ಚೆಲುವೇ ನಂದನದೊಲವೇ ಪರಿಮಳವಾಡುವ ತೊಟ್ಟಿಲಲಿ! ಬೇಸಿಗೆ ಮರಗಳ ಬೀಸ...

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ ಮ...

ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ, ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು ತಪ್ಪದೆಡೆ ಮಾಡುತೆ | ಹೊಂಬೆಳಗಲ್ಲರಳಿ, ಸೌಗಂಧ ಸೂಸಿ ತನಿಗಾಳಿಯೋಳ್ ಬೆರೆತು ಮಕರಂದ ನೀಡೆ ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ ನಸು...

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ ತಂಗಾಳಿ ತೀಡಿ ಹಾಸಿತು ಕಣ್ಣ ತುಂಬ ನಿದ್ದೆ ಗುಂಗು ಹರಡಿತು....

ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, ಬಾಳೆದೆಯೊಳ ಪ್ರೀತಿ ಆಸೆ ಅಡಗಿದಭಿಲಾಷೆಯನೆಲ್ಲ ಮಣ್ಣು ಮಾಡುವುದೆ ಹೊಸದ...

ಅಧ್ಯಾಯ ೧೭ ಪ್ರೊಫೆಸರ್ ಖಾಡಿಲ್ಕರ್‌ ದೇಹವನ್ನು ತಮ್ಮ ಮೋರಿಸ್ ಮೈನರ್ ಕಾರಿನಲ್ಲಿ ತುರುಕಿಕೊಂಡು ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಅಸ್ಪತ್ರೆಯ ಕಡೆ ನಡೆಸಿದರು. ಹನ್ನೆರಡು ವರ್ಷಗಳ ಹಿಂದೆ ಮದರಾಸಿನಿಂದ ಕೊಂಡ ಕಾರು ಅದು. ಮದರಾಸಿನಿಂದ ಹೈದ...

ಆರುತಿ ಬೆಳಗುವೆನಾ ಗುರು ಬಸವಣ್ಣಗೆ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕತ್ತಲೆಯು ಕಳೆಯುತ್ತ ಬಾಳ ಬೆಳಕು ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸಂತಸ ನೀಡುತ್ತ ಸಂಸಾರ ರಥ ಸಾಗಲು ಭಕ್ತಿಯಿಂದ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕೀ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...