ಯಾರಿಗೆ ಯಾರು ಬರಕೊಟ್ವ ಉಂಬಳಿ
ಈ ಗದ್ದೆ ಬಯಲು ಮನೆ ಮ
ಅ ಮುದುಕ ಹೊದ್ಡ ಕಂಬಳಿ ?

ಎರಡು ತಲೆಮಾರಿಗಿಂತ
ಹಿ೦ದಿಲ್ಲದ ಇತಿಹಾಸ
ಆದರೂ ಗುಡ್ಡದ ಕೆಂಗಣ್ಣ ದೇವತೆ
ಎಲ್ಲವನ್ನೂ ನೊಡಿದೆ

ಪಶ್ಚಿಮದ ಆಕಾಶ ರೇಖೆ
ಅರಬೀ ಸಮುದ್ರದ ಅಂಚು
ಈಚೆಗೆ ಘಟ್ಟಗಳ ಸಾಲು

ತಪ್ಪಲಿನ ಹುಲ್ಲು
ಹೊಂಬಣ್ಣಕ್ಕೆ ತಿರುಗುವ ನೀರವದಲ್ಲಿ
ಸಮಳಿಸಿದ್ದೇನೆ ನಾನು ಅನಿರೀಕ್ಷಿತ

ಧೂಳು ತುಂಬಿದ
ಒಂದೇ ಒ೦ದು ಮಾರ್ಗದಲ್ಲಿ
ಹೋದವರಾರು
ಬಂದವರಾರು
ಎಂಬುದು ಅಸಂಗತ

ಬಯಲ ನಡುವೆ ನಿಂತು
ಕಲ್ಪಿಸುವೆನು ನಾನು
ನನ್ನ ಪೂರ್ವಜರು ನಡೆದ
ಕೆಂಪು ಮಣ್ಣಿನ ದಾರಿ
ಕಾಯುವುದು ನನ್ನ ಸರದಿ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)